ETV Bharat / state

ಸಾಂಪ್ರದಾಯಿಕ ಬೆಳೆಗಳಿಗೆ ಗುಡ್​ಬೈ; ಎನ್​ಜಿಓ ಮಾರ್ಗದರ್ಶನದಲ್ಲಿ ಹಣ್ಣು ಬೆಳೆದು ಯಶಸ್ವಿಯಾದ ಹಾವೇರಿ ರೈತ - NGO

ಹಾವೇರಿಯ ರೈತನೊಬ್ಬ ಎನ್​ಜಿಓ ಮಾರ್ಗದರ್ಶನದಲ್ಲಿ ದೀರ್ಘಾವದಿ ಬೆಳೆಗಳನ್ನು ಬೆಳೆದು ಯಶಸ್ವಿಯಾಗಿದ್ದಾರೆ. ಅವರ ಸಕ್ಸ್​ಸ್​ ಸ್ಟೋರಿ ಹೀಗಿದೆ ನೋಡಿ.

haveri
ಯಶಸ್ವಿ ರೈತ
author img

By ETV Bharat Karnataka Team

Published : Mar 6, 2024, 3:29 PM IST

ಯಶಸ್ವಿ ರೈತನ ಮಾಹಿತಿ

ಹಾವೇರಿ: ಹಾವೇರಿ ತಾಲೂಕು ಕನವಳ್ಳಿ ಗ್ರಾಮದ ಗುಡ್ಡಪ್ಪ ಸೊಟ್ಟಪ್ಪನವರ ಅವರದ್ದು ಮೂಲತಃ ಕೃಷಿ ಕುಟುಂಬ. ಆದರೆ 2005ರಲ್ಲಿ ನೀರಿನ ಅಭಾವದಿಂದ ಕೃಷಿ ತೊರೆದ ಗುಡ್ಡಪ್ಪ ಮುಖಮಾಡಿದ್ದು ಎನ್‌ಜಿಓದತ್ತ. ಎನ್‌ಜಿಓದಲ್ಲಿ ಸಾಕಷ್ಟು ವಿಷಯ ತಿಳಿದುಕೊಂಡ ಗುಡ್ಡಪ್ಪ ಅವರು ಹಲವು ರೈತರಿಗೆ ದೀರ್ಘಾವದಿ ಬೆಳೆಗಳ ಬಗ್ಗೆ ಹಲವರಿಗೆ ಮಾಹಿತಿ ನೀಡಿದರು.

ಇದರ ಮಧ್ಯೆ ಬೇರೆಯವರಿಗೆ ಹೇಳುವುದಕ್ಕಿಂತ ತಾವೇ ಮಾಡಿದರೆ ಹೇಗೆ ಎಂಬ ವಿಚಾರ ಬಂತು. 2022 ಎನ್‌ಜಿಓದಲ್ಲಿ ಇದ್ದುಕೊಂಡೇ ಗುಡ್ಡಪ್ಪ ಮತ್ತೆ ಕೃಷಿ ಕಡೆ ಮುಖಮಾಡಿದರು. ತಮಗೆ ಬಂದ ಎರಡು ಎಕರೆ ಜಮೀನಿನಲ್ಲಿ ತೋಟಗಾರಿಕೆ ಬೆಳೆ ಬೆಳೆಯಲು ಮುಂದಾದರು. ಅತಿಹೆಚ್ಚು ಹಣ್ಣು ಬೆಳೆಯುವ ಬೆಳೆಗಳ ಕಡೆ ಗಮನ ನೀಡಿರುವ ಅವರು ಆರಂಭದಲ್ಲಿ ಅರ್ಧ ಎಕರೆಯಲ್ಲಿ ಡ್ರ್ಯಾಗನ್ ಫ್ರೂಟ್ಸ್​ ಬೆಳೆಯಲು ಮುಂದಾದರು. ಆದಾದ ನಂತರ ಪೇರಲ, ಚಿಕ್ಕು, ಮಾವು, ನೇರಳೆ, ಪಪ್ಪಾಯಿ, ಅಂಜೂರ, ಬಟರ್ ಫ್ರೂಟ್ಸ್, ಮೋಸಂಬಿ, ಕಿತ್ತಳೆ, ನಿಂಬೆ, ಹುಣಸೆ, ಕಾಡುನೆಲ್ಲಿ, ಸೀತಾಫಲ, ಗೋಡಂಬಿ ಮರ ಸೇರಿದಂತೆ ಸುಮಾರು 15ಕ್ಕೂ ಅಧಿಕ ಹಣ್ಣಿನ ತಳಿಯ ಸಸಿಗಳನ್ನು ನೆಟ್ಟಿದ್ದಾರೆ.

ಮೊದಲ ಎರಡು ಬೆಳೆಗಳಲ್ಲೇ ಮಾಡಿದ ಖರ್ಚು ಕೈಸೇರಿತು: ಅದರಲ್ಲಿ ಮಳೆಗಾಲದಲ್ಲಿ ಒಂದು ಬಾರಿ ಡ್ರ್ಯಾಗನ್​​ ಫ್ರೂಟ್ಸ್​ ಇಳುವರಿ ಕಟಾವ್ ಮಾಡಿದ್ದಾರೆ. ಜೊತೆ ಜೊತೆಗೆ ಪೇರಲ ಸಹ ಕಟಾವ್​ ಮಾಡಿ ಸುಮಾರು 50ಕ್ವಿಂಟಾಲ್​ ಹಣ್ಣು ಮಾರಿದ್ದಾರೆ. ಈ ವರ್ಷ ಪೇರಲ ವರ್ತಕರಿಗೆ ಒಂದು ಎಕರೆಯಲ್ಲಿರುವ ಪೇರಲವನ್ನು ಐದು ತಿಂಗಳು ಗುತ್ತಿಗೆ ನೀಡಿದ್ದಾರೆ. ಸುಮಾರು 2 ಲಕ್ಷ 25 ಸಾವಿರ ರೂಪಾಯಿಗೆ ಪೇರಲ ತೋಟವನ್ನು ಐದು ತಿಂಗಳು ಗುತ್ತಿಗೆ ನೀಡಿದ್ದಾರೆ. ಡ್ರ್ಯಾಗನ್​ ಫ್ರೂಟ್ಸ್​ ಮೊದಲ ಇಳುವರಿ ಬಂದಿದ್ದು ಅದರಿಂದ ಸುಮಾರು ಒಂದು ಲಕ್ಷ ರೂಪಾಯಿ ಆದಾಯ ಪಡೆದಿದ್ದಾರೆ.

ಸದ್ಯ ತಾವು ತೋಟಕ್ಕೆ ಮಾಡಿದ ಐದು ಲಕ್ಷ ರೂಪಾಯಿ ಖರ್ಚು ಮೊದಲ ಎರಡು ಬೆಳೆಗಳಲ್ಲೇ ವಾಪಸ್ ಬಂದಿದೆ. ಇನ್ಮುಂದೆ ಬರುವುದೆಲ್ಲವೂ ಲಾಭವೇ ಎನ್ನುತ್ತಾರೆ ಗುಡ್ಡಪ್ಪ. ಪೇರಲದಲ್ಲಿ ನಾಲ್ಕು ತಳಿಗಳನ್ನು ನಾಟಿ ಮಾಡಿದ್ದಾರೆ. ಥೈವಾನ್ ಪಿಂಕ್, ಥೈವಾನ್ ವೈಟ್, ಅಲಹಾಬಾದ್ ಸಪೇದ್ ಮತ್ತು ಎಲ್ ಫಾರ್ಟಿನೈನ್ ತಳಿಯ ಪೇರಲ ಬೆಳೆದಿರುವದು ಇವರ ವಿಶೇಷ. ನಮ್ಮ ಭೂಮಿಯಲ್ಲಿ ಯಾವೆಲ್ಲಾ ಹಣ್ಣುಗಳನ್ನು ಬೆಳೆಯಬಹುದೋ ಆ ಎಲ್ಲ ಹಣ್ಣಿನ ಗಿಡಗಳನ್ನು ಬೆಳೆಯಬೇಕು ಎನ್ನುವುದು ಗುಡ್ಡಪ್ಪ ಅವರ ಕನಸು. ಈ ಪೇರಲ ಮಧ್ಯ ಅಡಿಕೆ ಮರಗಳನ್ನು ಸಹ ಹಚ್ಚಿದ್ದು ಅವುಗಳು ಸಹ ಚೆನ್ನಾಗಿ ಬೆಳೆದು ನಿಂತಿವೆ.

ದೀರ್ಘಾವಧಿ ಬೆಳೆಗಳು ಏಕೆ ಉಪಯುಕ್ತ; ಅಲ್ಪಾವಧಿ ಬೆಳೆಗಳು ಹೆಚ್ಚು ಶ್ರಮ ಬಯಸುತ್ತವೆ. ಅದಕ್ಕೆ ಆರು ತಿಂಗಳಿಗೊಮ್ಮ ಬಿತ್ತನೆ ಮಾಡಬೇಕು. ಗೊಬ್ಬರ ಹಾಕಬೇಕು ಕ್ರಿಮಿನಾಶಕಗಳ ಸಿಂಪಡಣೆ ಮಾಡಬೇಕು. ಕಳೆ ಕಿಳಬೇಕು ಕಟಾವ್​ ಮಾಡಬೇಕು. ಇದಕ್ಕೆಲ್ಲಾ ಅಧಿಕ ಕೂಲಿಕಾರ್ಮಿಕರು ಬೇಕು ಮತ್ತು ಹೆಚ್ಚು ಹಣ ಖರ್ಚಾಗುತ್ತದೆ. ಅದೇ ದೀರ್ಘಾವದಿ ಬೆಳೆ ತೋಟಗಾರಿಕೆ ಬೆಳೆ ಬೆಳೆದರೆ ಈ ಸಮಸ್ಯೆಗಳಿರಲ್ಲಾ ಎನ್ನುತ್ತಾರೆ ಗುಡ್ಡಪ್ಪ. ಇದರಲ್ಲಿ ಒಮ್ಮೆ ಗಿಡ ನಾಟಿ ಮಾಡಿದರೆ ಸಾಕು, ಸುಮಾರು 10 ರಿಂದ 30 ವರ್ಷದವರೆಗೆ ಮರಗಳು ಫಸಲು ಬಿಡುತ್ತವೆ.

ಜೊತೆಗೆ ಒಬ್ಬರೇ ನಿರ್ವಹಣೆ ಮಾಡಬಹುದು. ಅಲ್ಪಾವಧಿಯಲ್ಲಿ ನಷ್ಟ ಹೆಚ್ಚು. ಅಲ್ಪಾವಧಿ ಬೆಳೆಯಲ್ಲಿ ದೀರ್ಘಾವಧಿ ಬೆಳೆಗಳನ್ನು ಬೆಳೆದರೆ ವರ್ಷಕ್ಕೊಮ್ಮೆ ಫಸಲು ಬರುತ್ತೆ. ರೈತರಿಗೆ ಆದಾಯ ಕೂಡ ಸಿಗುತ್ತೆ. ಪೇರಲ ಗಿಡಗಳು ವರ್ಷದಲ್ಲಿ ಎರಡು ಬಾರಿ ಹಣ್ಣು ಬಿಡುತ್ತವೆ. ಡ್ರ್ಯಾಗನ್ ಫ್ರೂಟ್ಸ್ ವರ್ಷಕ್ಕೊಮ್ಮೆ ಹಣ್ಣು ಬಿಡುತ್ತೆ. ಹೀಗೆ ಒಂದಿಲ್ಲಾ ಒಂದು ಮರಗಳು ಹಣ್ಣು ಬಿಡುತ್ತಲೇ ಇರುತ್ತವೆ. ಇದರಿಂದ ರೈತರಿಗೆ ನಿಶ್ಚಿತ ಆದಾಯ ಬರುತ್ತದೆ ರೈತರು ಸಾಲಸೂಲ ಮಾಡಿ ಅಲ್ಪಾವಧಿಯಲ್ಲಿ ನಷ್ಟ ಅನುಭವಿಸಿದಂತೆ ಈ ತೋಟಗಾರಿಕಾ ಬೆಳೆಗಳಲ್ಲಿ ನಷ್ಟವಾಗುವುದಿಲ್ಲಾ ಎನ್ನುತ್ತಾರೆ ಗುಡ್ಡಪ್ಪ.

ಇನ್ನು ಗುಡ್ಡಪ್ಪರ ಸಂಬಂಧಿ ಮಹದೇವಪ್ಪ ಸಹ ಸಾಂಪ್ರದಾಯಿಕ ಬೆಳೆಗಳಿಗೆ ತೀಲಾಂಜಲಿ ಇಟ್ಟು ಹಣ್ಣು ಎಲೆಬಳ್ಳಿ ಕೃಷಿಯಲ್ಲಿ ಬ್ಯುಸಿಯಾಗಿದ್ದಾರೆ. ಇದರಿಂದ ಮೊದಲಿನಂತೆ ನಷ್ಟದ ಆತಂಕ ಇಲ್ಲ. ಇಷ್ಟು ದಿನ ಕಷ್ಟಪಟ್ಟು ಬೆಳೆದು ಹಾನಿ ಅನುಭವಿಸಿ ಈಗ ದೀರ್ಘಾವಧಿ ಬೆಳೆ ಬೆಳೆಯುತ್ತಿದ್ದು ಜೀವನ ಆರಾಮಾಗಿದೆ ಎಂದು ವಿವರಿಸಿದರು.

ಯುವ ಕೃಷಿಕರು ಕೃಷಿಯಿಂದ ವಿಮುಖರಾಗಿ ನಗರಗಳತ್ತ ಮುಖ ಮಾಡುತ್ತಿರುವ ಈ ದಿನಗಳಲ್ಲಿ ಗುಡ್ಡಪ್ಪ ತಮ್ಮ ಎನ್‌ಜಿಓ ಸಂಸ್ಥೆಯ ಕೆಲಸ ಜೊತೆ ತೋಟಗಾರಿಕಾ ಬೆಳೆ ಬೆಳೆದು ಸೈ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: ನಾಲ್ಕು ಎಕರೆಯಲ್ಲಿ 40 ಕ್ವಿಂಟಾಲ್ ಬೆಳ್ಳುಳ್ಳಿ; ಬರದಲ್ಲೂ ಬಂಗಾರದ ಬೆಳೆ ಪಡೆದ ಹಾವೇರಿಯ ಸಾವಯವ ಕೃಷಿಕರು

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.