ಆನೇಕಲ್: ವ್ಯಕ್ತಿಯೊಬ್ಬ ವಕೀಲನಿಗೆ ಚೂರಿಯಿಂದ ಇರಿದು ಪೊಲೀಸರಿಗೆ ಶರಣಾದ ಘಟನೆ ಆನೇಕಲ್ ಪೊಲೀಸ್ ಠಾಣೆ ಬಳಿ ಬುಧವಾರ ನಡೆದಿದೆ. ಆನೇಕಲ್ ನಿವಾಸಿ ಮಂಜುನಾಥ್ ಚೂರಿ ಇರಿತಕ್ಕೊಳಗಾದ ವಕೀಲನಾಗಿದ್ದು, ಕಮ್ಮಸಂದ್ರ ಅಗ್ರಹಾರದ ರಮೇಶ್ ಆರೋಪಿಯಾಗಿದ್ದಾನೆ.
ಇರಿತದ ನಂತರ ಆನೇಕಲ್ ಠಾಣೆಗೆ ನೇರವಾಗಿ ಬಂದು ಶರಣಾದ ಆರೋಪಿ ರಮೇಶನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಗಂಭೀರ ಗಾಯಗೊಂಡ ವಕೀಲ ಮಂಜುನಾಥ ಅವರನ್ನು ಆನೇಕಲ್ ಸಾರ್ವಜನಿಕ ಆಸ್ಪತ್ರೆಗೆ ಪ್ರಾಥಮಿಕ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಇದೀಗ ನಾರಾಯಣ ಹೆಲ್ತ್ ಸಿಟಿಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಲಾಗಿದೆ.
ಇಂದು ಕಂಬದ ಗಣೇಶ ವೃತ್ತದಲ್ಲಿ ಹೂ ಕೊಳ್ಳುವ ಸಂದರ್ಭದಲ್ಲಿ ಆರೋಪಿ ರಮೇಶ ಹಿಂಬದಿಯಿಂದ ಬಂದು ಇದ್ದಕ್ಕಿದ್ದಂತೆ ವಕೀಲನಿಗೆ ಚೂರಿಯಿಂದ ಇರಿದಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಆನೇಕಲ್ ಇನ್ಸ್ಪೆಕ್ಟರ್ ತಿಪ್ಪೇಸ್ವಾಮಿ ತನಿಖೆ ಮುಂದುವರೆಸಿದ್ದಾರೆ.
ಶಿವಮೊಗ್ಗ: ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಗೆ ಅಪರಿಚಿತರಿಂದ ಚಾಕು ಇರಿತ