ETV Bharat / state

ಬೆಂಗಳೂರು: ವಾಕಿಂಗ್​ ಹೋಗುತ್ತಿದ್ದ ಮಹಿಳೆಯೊಂದಿಗೆ ಅಸಭ್ಯ ವರ್ತನೆ: ಆರೋಪಿ ಬಂಧನ - sexual harassment - SEXUAL HARASSMENT

ಮಹಿಳೆಯನ್ನು ಕಾಮುಕನೊಬ್ಬ ತಬ್ಬಿ ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ವಾಕಿಂಗ್​ ಹೋಗುತ್ತಿದ್ದ ಮಹಿಳೆಯೊಂದಿಗೆ ಅಸಭ್ಯ ವರ್ತನೆಯ ವಿಡಿಯೋ ಸೆರೆ
ವಾಕಿಂಗ್​ ಹೋಗುತ್ತಿದ್ದ ಮಹಿಳೆಯೊಂದಿಗೆ ಅಸಭ್ಯ ವರ್ತನೆಯ ವಿಡಿಯೋ ಸೆರೆ (ETV Bharat)
author img

By ETV Bharat Karnataka Team

Published : Aug 5, 2024, 11:13 AM IST

ಡಿಸಿಪಿ ಲೋಕೇಶ್ ಬಿ.ಜಗಲ್ಸಾರ್ (ETV Bharat)

ಬೆಂಗಳೂರು: ಮುಂಜಾನೆ ವಾಕಿಂಗ್‌ಗೆ ಹೋಗುತ್ತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯನ್ನು ಕೋಣನಕುಂಟೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಸುರೇಶ್ (25) ಬಂಧಿತ ಆರೋಪಿ.

ಆಗಸ್ಟ್ 2ರಂದು ಮುಂಜಾನೆ ಕೋಣನಕುಂಟೆ ಬಳಿಯ ಕೃಷ್ಣಾ ನಗರದಲ್ಲಿ ವಾಕಿಂಗ್‌ಗೆ ಹೋಗುತ್ತಿದ್ದ ಉತ್ತರ ಭಾರತ ಮೂಲದ ಮಹಿಳೆಯೊಬ್ಬರನ್ನು ಆರೋಪಿಯು ಬಲವಂತವಾಗಿ ತಬ್ಬಿ, ಲೈಂಗಿಕ‌ ಕಿರುಕುಳ ನೀಡಿದ್ದ. ಆರೋಪಿಯ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.

ಮಹಿಳೆಯು ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ಸ್ನೇಹಿತೆಯರೊಂದಿಗೆ ವಾಕಿಂಗ್ ಹೋಗುತ್ತಿದ್ದರು. ಶುಕ್ರವಾರ ಮುಂಜಾನೆ ತನ್ನ ಸ್ನೇಹಿತೆಯರಿಗಾಗಿ ಕಾಯುತ್ತಿದ್ದಾಗ ದಿಢೀರ್​ ಬಂದಿದ್ದ ಆರೋಪಿ, ಹಿಂಬದಿಯಿಂದ ಮಹಿಳೆಯ ಕೈಹಿಡಿದು, ತನ್ನ ಒಂದು ಕೈಯಿಂದ ಆಕೆಯ ಬಾಯಿ ಮುಚ್ಚಿದ್ದಾನೆ. ಈ ವೇಳೆ ಮಹಿಳೆ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದರೂ ಸಹ ಆಕೆಯನ್ನು ಹಿಂಬಾಲಿಸಿ ತಬ್ಬಿಕೊಂಡು ಅಸಭ್ಯವಾಗಿ ವರ್ತಿಸಿದ್ದ.

ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಕೋಣನಕುಂಟೆ ಠಾಣೆ ಪೊಲೀಸರು, ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯರಿಂದ ಮಾಹಿತಿ ಪಡೆದಿದ್ದರು. ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇಂದು ಆರೋಪಿಯನ್ನು ಬಂಧಿಸಿದ್ದಾರೆ.

''ಬಂಧಿತ ಆರೋಪಿಯು ಕ್ಯಾಬ್ ಚಾಲಕನಾಗಿದ್ದಾನೆ. ವಿವಿಧ ಕಂಪನಿಗಳ ಉದ್ಯೋಗಿಗಳನ್ನು ಡ್ರಾಪ್ ಹಾಗೂ ಪಿಕ್ ಅಪ್ ಮಾಡುವ ಕೆಲಸ ಮಾಡಿಕೊಂಡಿದ್ದ‌‌‌. ಶುಕ್ರವಾರ ಮುಂಜಾನೆ ಯಾರೂ ಇರದಿದ್ದ ಸಂದರ್ಭದಲ್ಲಿ ಮಹಿಳೆಯನ್ನು ಹಿಂಬಾಲಿಸಿ, ಅಸಭ್ಯವಾಗಿ ವರ್ತಿಸಿದ್ದ'' ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಬಿ.ಜಗಲ್ಸಾರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಉಡುಪಿ: ಪತ್ನಿ ಕೊಲೆಗೆ ಯತ್ನಿಸಿದ ಪತಿ, ಹರಸಾಹಸಪಟ್ಟು ಆರೋಪಿ ಸೆರೆಹಿಡಿದ ಪೊಲೀಸರು - husband attempt to kill wife

ETV Bharat Logo

Copyright © 2024 Ushodaya Enterprises Pvt. Ltd., All Rights Reserved.