ETV Bharat / state

ಗಡಿ ಜಿಲ್ಲೆಯಲ್ಲಿ ನಿರಂತರ ಮಳೆಗೆ ತುಂಬಿ ಹರಿಯತ್ತಿವೆ ಕೆರೆಗಳು: ಹಲವು ಕೆರೆಗಳು ಇನ್ನೂ ಖಾಲಿ - ಖಾಲಿ - Heavy Rain - HEAVY RAIN

ಗಡಿಜಿಲ್ಲೆಯಲ್ಲಿ ನಿರಂತರ ಮಳೆಗೆ ಕಾಡು ಮತ್ತು ನಾಡಿನ ಕೆರೆಗಳು ತುಂಬಿ ಹರಿಯುತ್ತಿದ್ದು, ಇನ್ನೂ ಹಲವು ಕೆರೆಗಳು ಖಾಲಿ - ಖಾಲಿ ಉಳಿದಿವೆ.

CHAMARAJANAGAR  HEAVY RAIN IN CHAMARAJANAGAR  FOREST AREA
ಗಡಿ ಜಿಲ್ಲೆಯಲ್ಲಿ ನಿರಂತರ ಮಳೆಗೆ ತುಂಬಿ ಹರಿಯತ್ತಿವೆ ಕೆರೆಗಳು (ಕೃಪೆ: ETV Bharat Karnataka)
author img

By ETV Bharat Karnataka Team

Published : May 24, 2024, 2:45 PM IST

ಗಡಿ ಜಿಲ್ಲೆಯಲ್ಲಿ ನಿರಂತರ ಮಳೆಗೆ ತುಂಬಿ ಹರಿಯತ್ತಿವೆ ಕೆರೆಗಳು (ಕೃಪೆ: ETV Bharat Karnataka)

ಚಾಮರಾಜನಗರ: ಕಳೆದ 2 ವಾರಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಚಾಮರಾಜನಗರ ಜಿಲ್ಲೆಯ ಹಲವು ಕೆರೆಗಳು ಭರ್ತಿಯಾಗುತ್ತಿದ್ದು, ಇನ್ನೂ ಹಲವು ಕೆರೆಗಳು ನೀರಿಲ್ಲದೇ ಖಾಲಿ - ಖಾಲಿಯಾಗಿವೆ. ಉತ್ತಮ‌ ಮಳೆ ಸುರಿದಿರುವ ಹಿನ್ನೆಲೆ ನಾಡಿನಷ್ಟೇ ಅಲ್ಲದೇ ಕಾಡಿನ ಕೆರೆಗಳು ಕೂಡ ತುಂಬಿದ್ದು, ನೀರಿಗಾಗಿ ವನ್ಯಜೀವಿಗಳು ಪರದಾಡುವುದು ತಪ್ಪಿದೆ.‌ ಬಂಡೀಪುರ, ಬಿಆರ್​ಟಿ ಭಾಗದ ಅರಣ್ಯ ಪ್ರದೇಶ ಹಸಿರು ಹೊದ್ದಿಕೊಳ್ಳುತ್ತಿದ್ದು ಅರಣ್ಯಕ್ಕೀಗ ಜೀವಕಳೆ ಬಂದಿದೆ‌.

ಚಾಮರಾಜನಗರ ತಾಲೂಕಿನ ದೊಡ್ಡರಾಯಪೇಟೆ ಕೆರೆ, ಉಮ್ಮತ್ತೂರು ಕೆರೆ, ಹುತ್ತೂರು ಕೆರೆ, ಹನೂರು ತಾಲೂಕಿನ‌ ಗೋಪಿನಾಥಂ ಕೆರೆ, ಕೌಲಿಹಳ್ಳ‌ಕೆರೆ ಭರ್ತಿಯಾಗುತ್ತಿದೆ. ಗುಂಡ್ಲುಪೇಟೆ ತಾಲೂಕಿನ‌ ಬೇರಂಬಾಡಿ ಕೆಂಪು ಸಾಗರ ಕೆರೆ, ಹೊನ್ನೇಗೌಡನಹಳ್ಳಿ ವಡ್ಡರಗಟ್ಟೆ ಕೆರೆ ಹಾಗೂ ಹಾಲಹಳ್ಳಿ ಅಣೆಕಟ್ಟೆ ತುಂಬಿ ಕೋಡಿ ಬಿದ್ದಿದೆ. ಜೊತೆಗೆ ಗುಂಡ್ಲುಪೇಟೆ ತಾಲೂಕಿನ ಹಲವು ಕೆರೆಗಳಿಗೆ ಶೇ.50ರಿಂದ 80 ಭಾಗ ನೀರು ಬಂದಿದ್ದು, ತುಂಬುವ ಹಂತಕ್ಕೆ ತಲುಪಿದೆ.

ಬರಗಿ ಕೆರೆ, ಮುಂಟೀಪುರ ಕೆರೆ, ದೇವರಹಳ್ಳಿ ಕೆರೆ, ಗೋಪಾಲಪುರ ಕೆರೆ, ಕನ್ನೇಗಾಲ ಕೆರೆ, ಕೂತನೂರು ಕೆರೆ, ಹಂಗಳ ಹೀರಿಕೆರೆ, ಹಂಗಳ ದೊಡ್ಡಕೆರೆ, ಮಂಗಲ, ಎಲಚೆಟ್ಟಿ, ಜಕ್ಕಹಳ್ಳಿ, ಕಮರಹಳ್ಳಿ ಕೆರೆ, ದೇವಲಾಪುರ ಕೆರೆ, ಕುರುಬರಹುಂಡಿ ಕೆರೆ ಸೇರಿದಂತೆ ಇನ್ನಿತರ ಹಲವು ಕೆರೆಗಳಿಗೆ ಒಳ ಹರಿವಿನ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಶೇ.50ರಷ್ಟು ನೀರು ತುಂಬಿದೆ. ಜೊತೆಗೆ ಕಾಲುವೆಗಳ ಮೂಲಕ ನೀರು ಹೆಚ್ಚಿನ ಪ್ರಮಾಣದಲ್ಲಿ ಕೆರೆಗಳಿಗೆ ಹರಿದು ಬರುತ್ತಿದೆ. ವಡ್ಡಗೆರೆ ಕೆರೆಗೆ ಏತ ನೀರಾವರಿ ಯೋಜನೆ ಹಾಗೂ ಮಳೆಯಿಂದ ನೀರು ಬರುತ್ತಿದ್ದು, ತುಂಬಿ ಕೋಡಿ ಬೀಳುವ ಹಂತ ತಲುಪಿದೆ.

ಬಂಡೀಪುರ ಅಭಯಾರಣ್ಯದ ಕೆರೆಗಳಿಗೆ ಜೀವಕಳೆ: ಬಂಡೀಪುರ ರಾಷ್ಟ್ರೀಯ ಅಭಯಾರಣ್ಯ ವ್ಯಾಪ್ತಿಯಲ್ಲಿ ಬಂಡೀಪುರ ವಲಯ, ಗೋಪಾಲಸ್ವಾಮಿ ಬೆಟ್ಟ ವಲಯ, ಕುಂದರೆಕೆ ವಲಯ, ಮದ್ದೂರು ವಲಯ, ಓಂಕಾರ ವಲಯಗಳಲ್ಲಿ ಕೂಡ ಉತ್ತಮ ಮಳೆಯಾಗಿದ್ದು, ಕಾಡಿನಲ್ಲಿ ಮೂನ್ನೂರಕ್ಕೂ ಹೆಚ್ಚು ಕೆರೆಗಳು ತುಂಬಿದೆ. ಜೊತೆಗೆ ಒಳ ಹರಿವಿನ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಇದರಿಂದ ಕಾಡುಪ್ರಾಣಿಗಳಿಗೆ ಕುಡಿಯುವ ನೀರಿನ ಆತಂಕ ದೂರವಾಗಿದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನೂ ಹಲವು ಕೆರೆಗಳು ಖಾಲಿ-ಖಾಲಿ: ಸಣ್ಣ ನೀರಾವರಿ ಇಲಾಖೆಯು ಮಾಹಿತಿ ಒದಗಿಸಿದ ಪ್ರಕಾರ, ನಿರಂತರ ಮಳೆಯ ನಡುವೆಯೂ ಇನ್ನೂ ಹಲವು ಕೆರೆಗಳು ಖಾಲಿ-ಖಾಲಿಯಾಗಿವೆ.

ಚಾಮರಾಜನಗರದ ಯಡಿಯೂರು ಅಡ್ಡಹಳ್ಳ, ಯಳಂದೂರಿನ ಗೌಡಹಳ್ಳಿ ಹೊಸಕೆರೆ, ಗಣಗನೂರು ಕೆರೆ, ಅಲ್ಕೆರೆ ಅಗ್ರಹಾರ ಕೆರೆ, ಕೊಳ್ಳೇಗಾಲ ತಾಲೂಕಿನ ಬಾಳಗುಣಸೆ ಕೆರೆ, ಲಿಂಗಮ್ಮನಕೆರೆ, ಹನೂರಿನ‌ ದಿನ್ನಳ್ಳಿ ಕೆರೆ, ಅಲಗಾಪುರ ಕೆರೆ, ಮಣಗಳ್ಳಿ ಕೆರೆ, ಮಾರ್ಟಹಳ್ಳಿ ಕೆರೆ ಸೇರಿದಂತೆ ಸಣ್ಣ ನೀರಾವರಿ ಇಲಾಖೆಗೆ ಒಳಪಡುವ 64 ಕೆರೆಗಳಲ್ಲಿ 15 ಕೆರೆಗಳು ನೀರಿಲ್ಲದೇ ಭಣಗುಡುತ್ತಿವೆ. ಶೇ 30 ರಷ್ಟು 25 ಕೆರೆಗಳು, ಶೇ. 50 ರಷ್ಟು 12 ಕೆರೆಗಳು, ಶೇ. 90 ರಷ್ಟು 9 ಕೆರೆಗಳಲ್ಲಿ ನೀರು ತುಂಬಿದೆ.

ಓದಿ: ಅರ್ಕಾವತಿ ಜಲಾಶಯದ ಒಳಹರಿವು ಹೆಚ್ಚಳ; ನದಿ ಪಾತ್ರದ ಜನರಿಗೆ ಸೂಚನೆ - Arkavathi Dam

ETV Bharat Logo

Copyright © 2025 Ushodaya Enterprises Pvt. Ltd., All Rights Reserved.