ಕಾರವಾರ(ಉತ್ತರ ಕನ್ನಡ): ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿ ಮಗುಚಿ ದೋಣಿಯಲ್ಲಿದ್ದ ಮೂವರ ಪೈಕಿ ಓರ್ವ ಮೀನುಗಾರ ನಾಪತ್ತೆಯಾದ ಘಟನೆ ಕುಮಟಾದ ಅಘನಾಶಿನಿ ನದಿಯ ಬೇಲೆಕಾನ್ ಬಳಿ ನಡೆದಿದೆ. ಯುವಕ ಮುಳುಗುವ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕುಮಟಾ ತಾಲೂಕಿನ ವಿನೋದ್ ಅಂಬಿಗ (37) ನಾಪತ್ತೆಯಾದ ಮೀನುಗಾರ. ಒಟ್ಟು ಮೂರು ಮಂದಿ ಸೇರಿ ಮುಂಜಾನೆ ಮೀನುಗಾರಿಕೆಗೆ ತೆರಳಿದ್ದರು. ಆದರೆ ಅಲೆಗಳ ಹೊಡೆತಕ್ಕೆ ಸಿಲುಕಿದ್ದ ದೋಣಿ ಪಲ್ಟಿಯಾಗಿತ್ತು. ಈ ವೇಳೆ, ಇಬ್ಬರು ಮೀನುಗಾರರು ಈಜಿಕೊಂಡು ದಡ ಸೇರಿದ್ದು, ಓರ್ವ ಮಾತ್ರ ಅಲೆಗಳ ರಭಸಕ್ಕೆ ದಡಕ್ಕೆ ಬರಲಾಗದೆ ಕೊಚ್ಚಿ ಹೋಗಿದ್ದಾನೆ. ಈ ದೃಶ್ಯವನ್ನು ದಡದಲ್ಲಿದ್ದ ಕೆಲವರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಅಡ್ಡ ಬಂದ ನಾಯಿ ತಪ್ಪಿಸಲು ಹೋಗಿ ಮರಕ್ಕೆ ಕಾರು ಡಿಕ್ಕಿ: ಮಗನ ಮದುವೆ ಸಂಭ್ರಮದಲ್ಲಿದ್ದ ತಾಯಿ ಸಾವು - Road Accident