ETV Bharat / state

ಬೆಂಗಳೂರು: ಅತ್ಯಾಚಾರ ಯತ್ನಕ್ಕೊಳಗಾಗಿದ್ದ ಸಂತ್ರಸ್ತೆ ವಿರುದ್ಧ ಪ್ರಕರಣ, ಕಾರಣ? - Case Against Rape Attempted Victim - CASE AGAINST RAPE ATTEMPTED VICTIM

ಅತ್ಯಾಚಾರ ಯತ್ನಕ್ಕೊಳಗಾಗಿದ್ದ ಸಂತ್ರಸ್ತೆ ವಿರುದ್ಧ ಪ್ರಕರಣ ಬೆಂಗಳೂರಿನಲ್ಲಿ ಪ್ರಕರಣ ದಾಖಲಾಗಿದೆ. ಆಟೋ ಚಾಲಕ ಸಂತ್ರಸ್ತೆ ಯುವತಿ ವಿರುದ್ಧ ದೂರು ನೀಡಿದ್ದಾರೆ.

RAPE CASE IN BENGALURU  AUTO ACCIDENT CASE  BENGALURU
ಅತ್ಯಾಚಾರ ಯತ್ನಕ್ಕೊಳಗಾಗಿದ್ದ ಸಂತ್ರಸ್ತೆ ವಿರುದ್ಧ ಪ್ರಕರಣ (ETV Bharat)
author img

By ETV Bharat Karnataka Team

Published : Aug 20, 2024, 9:32 AM IST

ಬೆಂಗಳೂರು: ಅತ್ಯಾಚಾರ ಯತ್ನಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆ ವಿರುದ್ಧ ಆಡುಗೋಡಿ ಸಂಚಾರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಘಟನೆಯ ದಿನ ಆಟೋವೊಂದಕ್ಕೆ ಅಪಘಾತವೆಸಗಿದ್ದ ಆರೋಪದಡಿ ಅದರ ಚಾಲಕ ಅಜಾಜ್ ಎಂಬುವರು ನೀಡಿರುವ ದೂರಿನನ್ವಯ ಆಡುಗೋಡಿ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಆಗಸ್ಟ್ 17ರ ರಾತ್ರಿ ಪಾರ್ಟಿ ಮುಗಿಸಿ ಹೊರಟಿದ್ದ ಯುವತಿ, ಸ್ನೇಹಿತನ ಕಾರನ್ನು ತಾನೇ ಚಲಾಯಿಸಿದ್ದಳು. ಈ ವೇಳೆ ಕೋರಮಂಗಲದ ಮಂಗಳ ಜಂಕ್ಷನ್ ಬಳಿ ಆಟೋಗಳಿಗೆ ಕಾರು ಡಿಕ್ಕಿಯಾಗಿತ್ತು. ಅಪಘಾತದ ಬಳಿಕ ಕಾರನ್ನು ನಿಲ್ಲಿಸದೆ ಯುವತಿ ಮತ್ತು ಆಕೆಯ ಸ್ನೇಹಿತ ಮುಂದಕ್ಕೆ ಸಾಗಿದ್ದರು. ಕಾರನ್ನು ಹಿಂಬಾಲಿಸಿಕೊಂಡು ಬಂದಿದ್ದ ಆಟೋಚಾಲಕ ಅಜಾಜ್, ಫೋರಂ ಮಾಲ್ ಜಂಕ್ಷನ್ ಬಳಿ ಅಡ್ಡ ಹಾಕಿ ನಿಲ್ಲಿಸಿದ್ದರು. ಬಳಿಕ ಆಟೋ ರಿಕ್ಷಾದ ರಿಪೇರಿ ಮಾಡಿಸಿಕೊಡಿ ಎಂದು ಕೇಳಿದ್ದರು. ಯುವತಿ ಮತ್ತು ಆಕೆಯ ಸ್ನೇಹಿತ ಒಪ್ಪದಿದ್ದಾಗ ಸ್ಥಳಕ್ಕೆ ಆಡುಗೋಡಿ ಠಾಣೆಯ ಹೊಯ್ಸಳ ವಾಹನವನ್ನು ಕರೆಸಿದ್ದರು.

ಪೊಲೀಸರು ಬರುತ್ತಿದ್ದಂತೆ ಯುವತಿಯನ್ನು ಆಕೆಯ ಸ್ನೇಹಿತ ಸ್ಥಳದಿಂದ ಕಳಿಸಿದ್ದ. ಅಲ್ಲಿಂದ ತೆರಳಿದ್ದ ಯುವತಿ ದ್ವಿಚಕ್ರ ವಾಹನ ಸವಾರನಿಂದ ಲಿಫ್ಟ್ ಪಡೆದಾಗ ಆಕೆಯ ಮೇಲೆ ಅತ್ಯಾಚಾರ ಯತ್ನ ನಡೆದಿತ್ತು. ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿ ಮುಕೇಶ್ವರನ್ ಎಂಬಾತನನ್ನು ಹೆಚ್ಎಸ್ಆರ್ ಲೇಔಟ್ ಪೊಲೀಸರು ಬಂಧಿಸಿದ್ದರು. ಸದ್ಯ ಘಟನೆಯ ದಿನ ಅಜಾಗರೂಕತೆಯಿಂದ ಕಾರು ಚಲಾಯಿಸಿ ಅಪಘಾತಕ್ಕೆ ಕಾರಣವಾಗಿದ್ದ ಯುವತಿಯ ವಿರುದ್ಧ ಆಡುಗೋಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಓದಿ: ಕುಡಿತದಿಂದ ಲಿವರ್ ಫೇಲ್ಯೂರ್ ಆಗಿ ಉದ್ಯೋಗ ತೊರೆದ ಪತಿ; ಸಂಸಾರದಲ್ಲಿ ಬಿರುಕು, ಪತ್ನಿ ಶವ ಬಾತ್ ರೂಮ್​ನಲ್ಲಿ ಪತ್ತೆ - LADY FOUND DEAD IN BENGALURU

ETV Bharat Logo

Copyright © 2025 Ushodaya Enterprises Pvt. Ltd., All Rights Reserved.