ETV Bharat / state

'ಮಕ್ಕಳ ಸಂಪಾದನೆ ಮೇಲೆ ತಾಯಿ ಊಟ ನೀಡಲ್ಲ, ಕಾಮನ್ ಸೆನ್ಸ್ ಬೇಕು ರೀ ಸಿದ್ದರಾಮಯ್ಯ': ಆರ್. ಅಶೋಕ್

ತೆರಿಗೆ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಹೇಳಿರುವ ಕಾಂಗ್ರೆಸ್​ ನಾಯಕರ ವಿರುದ್ಧ ಆರ್​ ಅಶೋಕ್​ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್​ ವಿರುದ್ಧ ಆರ್​ ಅಶೋಕ್​ ವಾಗ್ದಾಳಿ
ಕಾಂಗ್ರೆಸ್​ ವಿರುದ್ಧ ಆರ್​ ಅಶೋಕ್​ ವಾಗ್ದಾಳಿ
author img

By ETV Bharat Karnataka Team

Published : Feb 3, 2024, 9:59 PM IST

ಬೆಂಗಳೂರು: 'ಮಕ್ಕಳು ಎಷ್ಟು ಸಂಪಾದನೆ ಮಾಡ್ತಾರೆ ಎಂಬುದರ ಮೇಲೆ ತಾಯಿ ಊಟ ನೀಡಲ್ಲ, ಕಾಮನ್ ಸೆನ್ಸ್ ಬೇಕು ರೀ ಸಿದ್ದರಾಮಯ್ಯ' ಎಂದು ವಿಪಕ್ಷ ನಾಯಕ ಆರ್. ಅಶೋಕ್ ಟಾಂಗ್ ನೀಡಿದ್ದಾರೆ.

ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅಭಿವೃದ್ಧಿ ಆಗದ ಕಡೆ, ಜನ ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಬೇಕು ಎಂದು ಸಂವಿಧಾನ ಹೇಳುತ್ತೆ. ತೆರಿಗೆ ವಿಚಾರದಲ್ಲಿ ರಾಜ್ಯಗಳನ್ನು ಹೋಲಿಕೆ ಮಾಡಬಾರದು. ನೀವು ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದಾಗ ರಾಜ್ಯಕ್ಕೆ ಎಷ್ಟು ಅನುದಾನ ನೀಡಿದ್ರಿ? ಎಂದು ಪ್ರಶ್ನಿಸಿದರು. ಮನಮೋಹನ್ ಸಿಂಗ್ ಪ್ರಧಾನಮಂತ್ರಿಯಾಗಿದ್ದಾಗ ಎಷ್ಟು ಬಿಡುಗಡೆ ಮಾಡಿದ್ರು. ಮೋದಿ ಎಷ್ಟು ಬಿಡುಗಡೆ ಮಾಡಿದ್ರು ಎಂದು ಶ್ವೇತಪತ್ರ ಬಿಡುಗಡೆ ಮಾಡಿ. ಜನರು ತೀರ್ಮಾನ ಮಾಡುತ್ತಾರೆ. ಕರ್ನಾಟಕ ಜಾಸ್ತಿ ಟ್ಯಾಕ್ಸ್ ಕಟ್ಟುತ್ತಿದೆ. ಮಹಾರಾಷ್ಟ್ರ ಅತಿ ಹೆಚ್ಚು ಟ್ಯಾಕ್ಸ್ ಕಟ್ಟುತ್ತಿದೆ. ಅವರಿಗೆ ಎಷ್ಟು ಕೊಟ್ಟಿದ್ದಾರೆ..? ದೆಹಲಿಗೆ ಎಷ್ಟು ಕೊಟ್ಟಿದ್ದಾರೆ ಎಂದು ಕೇಳಿದ್ರು.

ನೀವು ದೇಶಕ್ಕೆ ಹೋಗಬೇಡಿ, ಇಲ್ಲಿ ನಮ್ಮ ರಾಜ್ಯದ ವಿಷಯದ ಬಗ್ಗೆ ಹೇಳಿ. ಬೆಂಗಳೂರು ಒಂದರಿಂದಲೇ 65% ರಷ್ಟು ಟ್ಯಾಕ್ಸ್ ಅನ್ನು ಜನ ಕಟ್ಟುತ್ತಿದ್ದಾರೆ. ಹಾಗಿದ್ರೆ ಬೆಂಗಳೂರಿಗೆ ಎಷ್ಟು ಕೊಟ್ಟಿರೋದು..? ಯಾವ ಜಿಲ್ಲೆಗೆ ಎಷ್ಟು ಕೊಟ್ಟಿದ್ದಿರಾ..? ಕರ್ನಾಟಕದಲ್ಲಿ ಕೊಡಗು ಪ್ರತ್ಯೇಕ ರಾಜ್ಯವಾಗಬೇಕು ಎಂಬ ಕೂಗಿತ್ತು. ಕರ್ನಾಟಕಕ್ಕೆ ನೀರು ಕೊಡುತ್ತೇವೆ, ಕಾಫಿ ಬೆಳೆಯುತ್ತೇವೆ, ಟ್ಯಾಕ್ಸ್ ಕಟ್ಟೋದು ಅಂತಾ ಹೇಳ್ತಿದ್ರು. ಆಗ ಟ್ಯಾಕ್ಸ್ ಮೇಲೆ ರಾಜ್ಯ ಇಬ್ಭಾಗ ಮಾಡೋದಕ್ಕೆ ಆಗುವುದಿಲ್ಲ ಅಂತ ಹೇಳಿದ್ರು. ಬೆಂಗಳೂರಿನಿಂದ 65% ಟ್ಯಾಕ್ಸ್ ಬರುತ್ತೆ. ಬೆಂಗಳೂರಿಗೆ 5% ಕೊಟ್ಟಿಲ್ಲ. ಯಾವ ಜಿಲ್ಲೆಗೆ ಎಷ್ಟು ಬರುತ್ತೆ ಅಷ್ಟು ಅನುದಾನ ಕೊಡಿ. ಇದು ಸಾಧ್ಯನಾ.? ಎಲ್ಲಿ ಜನ ಕಷ್ಟದಲ್ಲಿದ್ದಾರೋ ಅಂತವರಿಗೆ ಸಹಾಯ ಮಾಡಬೇಕಂತ ಸಂವಿಧಾನದಲ್ಲಿದೆ ಅಂತಾ ಅಶೋಕ್​ ಹೇಳಿದ್ದಾರೆ.

ಕಾಂಗ್ರೆಸ್ ನವರು ದೆಹಲಿಯಲ್ಲಿ ಪ್ರತಿಭಟನೆ ಮಾಡ್ತಾರಂತೆ. ಅದು ಚುನಾವಣೆಗೂ ಮುನ್ನ ಸೋಲು ಒಪ್ಪಿಕೊಂಡಂತೆ. ಒಂದು ರೀತಿ ಸರೆಂಡರ್‌ ಆಗಿದ್ದಾರೆ. ಸಂಸದ ಡಿ. ಕೆ. ಸುರೇಶ್ ಹೇಳಿಕೆಗೆ ಕಾಂಗ್ರೆಸ್​ನಲ್ಲೇ ಸಹಮತವಿಲ್ಲ. ಖರ್ಗೆಯವರು ಸಹ ಎಚ್ಚರಿಕೆ ಕೊಟ್ಟಿದ್ದಾರೆ. ದೇಶ ವಿಭಜನೆಯ ವಿಚಾರವನ್ನು ಹಾದಿ ತಪ್ಪಿಸೋಕೆ ದೆಹಲಿ ಪ್ರತಿಭಟನೆ ಮಾಡ್ತಿರೋದು ಬಹಳ ಸ್ಪಷ್ಟವಾಗಿ ಗೊತ್ತಾಗುತ್ತೆ. ಮಂಡ್ಯದ ಕೆರಗೋಡು ಪ್ರಕರಣ ಜ್ವಾಲಾಮುಖಿಯಾಗಿದೆ. ಹನುಮ ಧ್ವಜವನ್ನು ಕಿತ್ತು ಹಾಕಿದ್ದಾರೆ. ಕಾಂಗ್ರೆಸ್ ನಾಯಕರು ಅಕ್ಷತೆ ದೊಡ್ಡದಾದ ಗ್ಯಾರಂಟಿ ಅಂತಿದ್ದಾರೆ. ರೈತರು ರೊಚ್ಚಿಗೆದ್ದಿದ್ದಾರೆ, ಪರಿಹಾರ ಹಣ ಬಿಡುಗಡೆ ಮಾಡಿ ಅಂತ. ಈ ಇಷ್ಯುಗಳನ್ನು ಡೈವರ್ಟ್ ಮಾಡಲು ದೆಹಲಿ ಪ್ರತಿಭಟನೆ ಮಾಡ್ತಿದ್ದಾರೆ. ದರಣಿ ಬಗ್ಗೆ ನಿಮ್ಮ ಖರ್ಗೆಯವರು ಇದ್ದರು ಮಾತನಾಡಿಲ್ಲ.

ಬರದ ಬಗ್ಗೆ ಲೋಕಸಭೆಯಲ್ಲಿ ಸುರೇಶ್ ಅವರು ಮಾತನಾಡಿದ್ದಾರೆ..? 10 ಬಜೆಟ್​ನಲ್ಲಿ ಯಾವತ್ತಾದ್ರು ಸುರೇಶ್ ಪ್ರಶ್ನೆ ಮಾಡಿದ್ದಾರಾ..?. ಈಗ ಪ್ರಶ್ನೆ ಮಾಡ್ತಿದ್ದಾರೆ ಅಂದ್ರೆ ಚುನಾವಣೆ ಗಿಮಿಕ್ ಇದು, ಚುನಾವಣೆ ಸ್ಟಂಟ್ ಅಷ್ಟೇ ಎಂದು ವಾಗ್ದಾಳಿ ಅಶೋಕ್​ ಆರೋಪಿಸಿದರು. ಕೇಂದ್ರ ಸರ್ಕಾರದಿಂದ ಯಾವುದೇ ತಾರತಮ್ಯ ಆಗಿಲ್ಲ. ಕರ್ನಾಟಕಕ್ಕೆ ಬರಬೇಕಾದ ಎಲ್ಲಾ ಹಣ ರಾಜ್ಯಕ್ಕೆ ಬಂದಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ, ಯಾವುದೇ ಬ್ಯಾಲೆನ್ಸ್ ಇಲ್ಲ. ಹಾಗೇ ಬ್ಯಾಲೆನ್ಸ್ ತಾರತಮ್ಯ ಇದೆ ಅನ್ನೋದಾಗಿದ್ರೆ ಖರ್ಗೆಯವರು ಹೇಳಬಹುದಾಗಿತ್ತು ಅಲ್ವಾ..?. ಡಿಕೆ ಸುರೇಶ್ ಗಿಂತ ಖರ್ಗೆ ಬುದ್ಧಿವಂತರು ತಾನೇ. ಜೈರಾಮ್ ರಮೇಶ್ ಸಹ ಇದ್ದರು ಅಲ್ವಾ. ಅವರ್ಯಾರು ಯಾಕೆ ಮಾತನಾಡಿಲ್ಲ ಎಂದು ಅಶೋಕ್​ ಪ್ರಶ್ನಿಸಿದರು.

ಬರ ಪರಿಹಾರ ವಿಚಾರ ಇದ್ರಲ್ಲಿ ಅನ್ಯಾಯವಾಗಿದೆ ಅಂತ ಮಾತ್ರ ಸಿದ್ದರಾಮಯ್ಯನವರೇ ಹೇಳೋಕೆ ಹೋಗಬೇಡಿ. ನಾನು ಕಂದಾಯ ಸಚಿವನಾಗಿದ್ದಾಗ ಎಷ್ಟು ಹಣ ಬಿಡುಗಡೆ ಮಾಡಿದ್ದೆನೋ ಅಷ್ಟು ಬಿಡುಗಡೆ ಮಾಡಿ ಸಾಕು. ನಾವು ಸ್ಲ್ಯಾಬ್ ಮಾಡಿ ರೈತರಿಗೆ ಪರಿಹಾರವಾಗಿ ಹಣ ಬಿಡುಗಡೆ ಮಾಡಿದ್ದೆವು. ಕೇಂದ್ರ ಸರ್ಕಾರ ಕೊಡ್ಲಿ ಅಂತ ಕಾಯಲಿಲ್ಲ ಎಂದು ಸವಾಲು ಹಾಕಿದರು.

ಇದನ್ನೂ ಓದಿ: 'ಆರ್ ಆಶೋಕ್​ ಹಿಂದು ಇರಬಹುದು, ಆದ್ರೆ ಅವನಗಿಂತ ಒಳ್ಳೆಯ ಹಿಂದು ನಾನು' : ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.