ETV Bharat / state

ತುಂಗಾ ಅಣೆಕಟ್ಟೆಗೆ 50 ಸಾವಿರ ಕ್ಯೂಸೆಕ್ ಒಳಹರಿವು: ಕಲ್ಲುಹಳ್ಳ ಸೇತುವೆಯ ಪಿಚ್ಚಿಂಗ್ ಕುಸಿತ - Tunga Dam - TUNGA DAM

ಶಿವಮೊಗ್ಗದ ತುಂಗಾ ಅಣೆಕಟ್ಟೆಗೆ ಒಳಹರಿವು ಹೆಚ್ಚಾಗಿದೆ. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅಣೆಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

shivamogga rain
(1) ತುಂಗಾ ಅಣೆಕಟ್ಟೆಗೆ ಭೇಟಿ ನೀಡಿ ಪರಿಶೀಲಿಸುತ್ತಿರುವ ಜಿಲ್ಲಾಧಿಕಾರಿ. (2) ಕಲ್ಲುಹಳ್ಳ ಸೇತುವೆಯ ಪಿಚ್ಚಿಂಗ್ ಕುಸಿದಿರುವುದು. (ETV Bharat)
author img

By ETV Bharat Karnataka Team

Published : Jul 17, 2024, 10:35 AM IST

Updated : Jul 17, 2024, 1:06 PM IST

ತುಂಗಾ ಅಣೆಕಟ್ಟೆಗೆ 50 ಸಾವಿರ ಕ್ಯೂಸೆಕ್ ಒಳಹರಿವು (ETV Bharat)

ಶಿವಮೊಗ್ಗ: ಗಾಜನೂರು ಅಣೆಕಟ್ಟೆಗೆ ಒಳಹರಿವು ಹೆಚ್ಚಾಗಿದೆ. 50 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಹೀಗಾಗಿ, ನದಿಗೆ ಇಷ್ಟೇ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ.

ಅಣೆಕಟ್ಟೆಯಿಂದ ನದಿಗೆ ಹೆಚ್ಚಿನ ಪ್ರಮಾಣದ ನೀರು ಬಿಡಲು ಪ್ರಾರಂಭಿಸಿದರೆ ನದಿ ಪಕ್ಕದ ಇಮಾನ್​​ ಬಾಡ, ಕುಂಬಾರಗುಂಡಿ, ಕುರುಬರ ಪಾಳ್ಯ, ಬಾಪೂಜಿ ನಗರ, ರಾಜೀವ್ ಗಾಂಧಿ ನಗರ, ವಿದ್ಯಾನಗರದ ಕೆಲವು ಭಾಗಕ್ಕೆ ನೀರು ನುಗ್ಗುತ್ತದೆ.

ಜಿಲ್ಲೆಯಲ್ಲಿ ಇನ್ನೂ ಮೂರು ದಿನ ಭಾರೀ ಮಳೆಯಾಗುವ ಸಂಭವವಿದ್ದು ಮಂಗಳವಾರ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ತುಂಗಾ ಅಣೆಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಣೆಕಟ್ಟೆಯ ಪ್ರಸ್ತುತ ಒಳಹರಿವು ಹಾಗೂ ಹೊರಹರಿವಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆದುಕೊಂಡರು. ಪ್ರಸ್ತುತ ಮಳೆ ಪ್ರಮಾಣ ಹೆಚ್ಚಿರುವ ಕಾರಣ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮಾರ್ಗದರ್ಶನ ನೀಡಿದರು. ಮಳೆ ಅಧಿಕವಾಗುತ್ತಿರುವ ಕಾರಣ ನದಿ ಪಾತ್ರದ ಜನತೆಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವಂತೆಯೂ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ಕಲ್ಲುಹಳ್ಳ ಸೇತುವೆಯ ಪಿಚ್ಚಿಂಗ್ ಕುಸಿತ: ಮಳೆಯಿಂದ ನಿರ್ಮಾಣ ಹಂತದ ಕಲ್ಲುಹಳ್ಳ ಸೇತುವೆಯ ಪಿಚ್ಚಿಂಗ್​​​ ಕುಸಿದು ಬಿದ್ದಿದೆ. ಹೊಸನಗರ ಸಮೀಪದಲ್ಲಿ ಹರಿಯುವ ಕಲ್ಲು ಹಳ್ಳಕ್ಕೆ ಸುಮಾರು 5 ಕೋಟಿ ರೂ ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಈ ಸೇತುವೆ ಸಂಪರ್ಕಿಸುವ ರಸ್ತೆಗಾಗಿ ಮಣ್ಣು ಹಾಕಿ ಎತ್ತರಿಸಲಾಗಿತ್ತು. ಆದರೆ, ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಸೇತುವೆಗೆ ಜೋಡಣೆಯಾಗಿರುವ ಪಿಚ್ಚಿಂಗ್ ಕುಸಿದಿದೆ.

"ತಡೆಗೋಡೆಯನ್ನು ಕಲ್ಲಿನಿಂದ ನಿರ್ಮಾಣ ಮಾಡಬೇಕಿತ್ತು. ಕೇವಲ ಮಣ್ಣು ಹಾಕಿರುವುದರಿಂದ ಕುಸಿದಿದೆ" ಎಂದು ಸಾರ್ವಜನಿಕರು ದೂರಿದ್ದಾರೆ.

ಸ್ಥಳಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಉಡುಪಿಯಲ್ಲಿ ಮನೆಗಳು, ಕೃಷಿ ಭೂಮಿ ಜಲಾವೃತ, ರಸ್ತೆ ಸಂಪರ್ಕ ಕಡಿತ: ಸಂಸದ, ಡಿಸಿ ಪರಿಶೀಲನೆ - Udupi Rain

Last Updated : Jul 17, 2024, 1:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.