ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಹಲವು ಕ್ರಮ ಕೈಗೊಂಡಿದೆ. ಆದರೂ, ಒಂದೇ ದಿನದಲ್ಲಿ 424 ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ ರಾಜ್ಯದಲ್ಲಿ ಇದುವರೆಗೂ ಒಟ್ಟು 9,082 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, 7 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಪ್ರಮಾಣ ಶೇ.0.07 ರಷ್ಟು ಕಂಡುಬಂದಿದೆ.
ಡೆಂಗ್ಯೂ ಪ್ರಕರಣಗಳ ಸಂಬಂಧ ರೋಗಿಗಳು ಆಸ್ಪತ್ರೆಗೆ ಸೇರುವ ಸಂಖ್ಯೆಯೂ ಅಧಿಕವಾಗುತ್ತಿದ್ದು, ಒಂದೇ ದಿನದಲ್ಲಿ 2,557 ಮಂದಿ ಪರೀಕ್ಷೆಗೊಳಪಟ್ಟಿದ್ದಾರೆ. ಇನ್ನೂ ಬಿಬಿಎಂಪಿ ವ್ಯಾಪ್ತಿಯಲ್ಲಿ 2,830, ಬೆಂಗಳೂರು ನಗರ 57, ಬೆಂಗಳೂರು ಗ್ರಾಮಾಂತರ 38, ರಾಮನಗರ 91, ಕೋಲಾರ 107, ಚಿಕ್ಕಬಳ್ಳಾಪುರ 108, ತುಮಕೂರು 224, ಚಿತ್ರದುರ್ಗ 340, ದಾವಣಗೆರೆ 231, ಶಿವಮೊಗ್ಗ 331, ಮೈಸೂರು 557 ಸೇರಿದಂತೆ ಈವರೆಗೆ ಒಟ್ಟು 9,082 ಪ್ರಕರಣಗಳು ದಾಖಲಾಗಿವೆ.
ಕಳೆದ 24 ಗಂಟೆಗಳಲ್ಲಿ 119 ಸಕ್ರಿಯ ಪ್ರಕರಣಗಳು ಕಂಡುಬಂದಿದೆ. 0-1 ವರ್ಷದ 4 ಮಕ್ಕಳು, 1 ರಿಂದ 18 ವರ್ಷದ 168 ಮಕ್ಕಳಲ್ಲಿ ಹಾಗೂ 18 ವರ್ಷದ ಮೇಲ್ಪಟ್ಟ 252 ಮಂದಿಗೆ ಡೆಂಗ್ಯೂ ಜ್ವರ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಇದನ್ನೂ ಓದಿ: ಡೆಂಗ್ಯೂ ರೀತಿಯ ಅನಾರೋಗ್ಯ ಲಕ್ಷಣಗಳ ಪ್ರಮಾಣದಲ್ಲೂ ಗಣನೀಯ ಏರಿಕೆ: ಡಾ.ನಸೀರ್ - Dengue Like Symptoms