ETV Bharat / state

ಬೆಂಗಳೂರಿನ ಅಪಾರ್ಟ್​ಮೆಂಟ್​​ನಲ್ಲಿ ಶಾರ್ಟ್ ಸರ್ಕ್ಯೂಟ್​: ನಾಲ್ಕುವರೆ ವರ್ಷದ ಮಗು ಸಾವು - boy dies

ಮನೆಯಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್​ನಿಂದ ನಾಲ್ಕುವರೆ ವರ್ಷದ ಗಂಡು ಮಗು ಸಾವನ್ನಪ್ಪಿದ ಘಟನೆ ಬೆಂಗಳೂರಲ್ಲಿ ನಡೆದಿದೆ.

Etv Bharat
Etv Bharat
author img

By ETV Bharat Karnataka Team

Published : Apr 15, 2024, 12:07 PM IST

ಬೆಂಗಳೂರು: ಆರ್.ಟಿ.ನಗರದ ಪೊಲೀಸ್ ಠಾಣಾ ವ್ಯಾಪ್ತಿಯ ಸುಲ್ತಾನ್ ಪಾಳ್ಯದ ಅಪಾರ್ಟ್​​ಮೆಂಟ್​​ನ ಕೊಠಡಿಯೊಂದರಲ್ಲಿ ಕಾಣಿಸಿಕೊಂಡ ಶಾರ್ಟ್ ಸರ್ಕ್ಯೂಟ್​​ಗೆ ನಾಲ್ಕುವರೆ ವರ್ಷದ ಗಂಡು ಮಗು ಬಲಿಯಾಗಿದೆ. ಅನೂಪ್ ಸಾವನ್ನಪ್ಪಿದ ಮಗು.

ಸುಲ್ತಾನ್ ಪಾಳ್ಯ ಬಳಿಯಿರುವ ರಿಯಾನ್ ವುಡ್ ಅಪಾರ್ಟ್​ಮೆಂಟ್​​ನ ನಾಲ್ಕನೇ‌ ಮಹಡಿಯಲ್ಲಿರುವ ಮನೆಯೊಂದರಲ್ಲಿ ಈ ದುರಂತ ಸಂಭವಿಸಿದೆ. ನೇಪಾಳ ಮೂಲದ ಪೂರಾನ್ ಖಂಡಕ್‌ ಹಾಗೂ ಇವರ ಪತ್ನಿ ಲಕ್ಷ್ಮೀ ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದರು‌. ಘಟನೆ ನಡೆದ ಅಪಾರ್ಟ್​​ಮೆಂಟ್​​ನಲ್ಲಿ ಮಗುವಿನ ತಂದೆ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದರೆ, ತಾಯಿ ಸಹ ಅಪಾರ್ಟ್​ಮೆಂಟ್​​ನಲ್ಲಿ ಹೌಸ್‌ ಕೀಪಿಂಗ್ ಆಗಿ ಕೆಲಸ‌ ಮಾಡುತ್ತಿದ್ದರು.

ಇದನ್ನೂ ಓದಿ: ಬಾಲ್ಟಿಮೋರ್​ ಸೇತುವೆ ಕುಸಿತ: ಹಡಗು ಡಿಕ್ಕಿಗೂ ಮೊದಲೇ ಮಾಹಿತಿ ನೀಡಿ, ದುರಂತ ತಪ್ಪಿಸಿದ ಭಾರತೀಯರು! - Baltimore Bridge collapse

ದಂಪತಿಗೆ ವಾಸ್ತವ್ಯಕ್ಕಾಗಿ ನೆಲಮಹಡಿಯಲ್ಲಿ ಮನೆ ನೀಡಲಾಗಿತ್ತು. ಅಲ್ಲದೇ ನಾಲ್ಕನೇ ಮಹಡಿಯಲ್ಲಿರುವ ಸಣ್ಣ ಕೊಠಡಿಯ ಮನೆ ಸಹ ನೀಡಲಾಗಿತ್ತು. ಗಂಡ - ಹೆಂಡತಿ ಕೆಲಸ ಮಾಡುವುದರಿಂದ ಮಗುವಿನ ಲಾಲನೆ - ಪಾಲನೆ ಕಷ್ಟವಾಗಿತ್ತು. ನಿತ್ಯ ಮಧ್ಯಾಹ್ನ ಮಗುವನ್ನ ಮಲಗಿಸಿ ಡೋರ್ ಲಾಕ್ ಹಾಕಿ ದಂಪತಿ ತಮ್ಮ ಹೊರಗಿನ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ನಿನ್ನೆಯೂ ಸಹ ಮಗುವನ್ನು ಮಲಗಿಸಿ ಫ್ಯಾನ್ ಹಾಕಿ ಡೋರ್ ಲಾಕ್‌ ಮಾಡಿಕೊಂಡು ಬಂದಿದ್ದರು. ಕೆಲಸ ಮುಗಿಸಿಕೊಂಡು ಪೋಷಕರು ಮನೆಗೆ ಹೋದಾಗ ದುರಂತ ಸಂಭವಿಸಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗು ಮಲಗಿರುವಾಗ ನಿನ್ನೆ ಸಂಜೆ ವೇಳೆ‌ ಕಾಣಿಸಿಕೊಂಡ ಎಲೆಕ್ಟ್ರಿಕಲ್ ಶಾರ್ಟ್​ ಸರ್ಕ್ಯೂಟ್​ನಿಂದ ಸಾವನ್ನಪ್ಪಿದೆ. ಎಂದಿನಂತೆ ಕೆಲಸ‌ ಮುಗಿಸಿಕೊಂಡು ಬಂದಾಗ‌ ಮನೆಯಿಂದ ಹೊಗೆ ಬರುತ್ತಿರುವುದನ್ನ ಕಂಡು ಪೋಷಕರು ಕೂಡಲೇ ಅಗ್ನಿಶಾಮಕದಳಕ್ಕ‌ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದು ಅಗ್ನಿ ನಂದಿಸಿದರೂ ಅಷ್ಟೊತ್ತಿಗಾಗಲೇ ಮಗು ಮೃತಪಟ್ಟಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ತೆಲಂಗಾಣ: ಕೆಮಿಕಲ್ ಫ್ಯಾಕ್ಟರಿಯಲ್ಲಿ ಅಗ್ನಿ ಅವಘಡ, ಉದ್ಯಮದ ನಿರ್ದೇಶಕ ಸೇರಿ ಐವರು ಸಾವು - Fire Accident In Chemical Factory

ETV Bharat Logo

Copyright © 2024 Ushodaya Enterprises Pvt. Ltd., All Rights Reserved.