ETV Bharat / state

ಶಿವಮೊಗ್ಗ; ಹಿಂಡ್ಲೆಮನೆಯಲ್ಲಿ 3500 ವರ್ಷ ಹಿಂದಿನ ನವಶಿಲಾಯುಗ ಕಾಲದ ಕಲ್ಲಿನ ಉಂಗುರ ಪತ್ತೆ - NEOLITHIC STONE RING

ಶಿವಮೊಗ್ಗದ ಹಿಂಡ್ಲೆಮನೆಯಲ್ಲಿ ಸುಮಾರು 3500 ವರ್ಷ ಹಳೆಯದಾದ ಕಲ್ಲಿನ ಉಂಗುರ ಪತ್ತೆಯಾಗಿದೆ.

stone-ring
ನವಶಿಲಾಯುಗ ಕಾಲದ ಕಲ್ಲಿನ ಉಂಗುರ ಪತ್ತೆ (ETV Bharat)
author img

By ETV Bharat Karnataka Team

Published : 3 hours ago

ಶಿವಮೊಗ್ಗ: ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಗ್ರಾಮ ಪಂಚಾಯತ್​ ವ್ಯಾಪ್ತಿಯ ಕರಿಗೆರಸು ಗ್ರಾಮದ ಹಿಂಡ್ಲೆಮನೆಯಲ್ಲಿ ಸುಮಾರು 3500 ವರ್ಷ ಹಳೆಯದಾದ ನವಶಿಲಾಯುಗ ಕಾಲದ ಡೋಲೆರೈಟ್ ಕಲ್ಲಿನ ಉಂಗುರ ಪತ್ತೆಯಾಗಿದೆ.

ನವ ಶಿಲಾಯುಗ ಕಾಲದ ಅತ್ಯಂತ ಅಮೂಲ್ಯವಾದ ಡೋಲೆರೈಟ್ ಕಲ್ಲಿನ ಉಂಗುರವು ಹಿಂಡ್ಲೆಮನೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಿಕ್ಷಕ ಹನುಮಂತಪ್ಪ ಅವರಿಗೆ ಸಿಕ್ಕಿದೆ. ಈ ಪ್ರದೇಶವು ಮೊದಲು ಜನವಸತಿ ಆರಂಭವಾಗಿರುವುದಕ್ಕೆ ಜೀವಂತ ಸಾಕ್ಷಿಯಾಗಿದೆ. ಈ ಅವಧಿಯಲ್ಲಿ ನೆಲೆಗೊಂಡ ಮಾನವನ ಜೀವನಶೈಲಿಯ ಆರಂಭದ ದಿನಗಳನ್ನು ಇದರಿಂದ ತಿಳಿಯಬಹುದಾಗಿದೆ. ಈ ಸ್ಥಳವು ಹೊಸನಗರ ಪಟ್ಟಣದಿಂದ ಸುಮಾರು 20 ಕಿ. ಮೀ. ಮತ್ತು ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ 55 ಕಿ. ಮೀ ದೂರದಲ್ಲಿದೆ.

old-neolithic-stone-ring
ನವಶಿಲಾಯುಗ ಕಾಲದ ಕಲ್ಲಿನ ಉಂಗುರ (ETV Bharat)

ಈ ಕುರಿತು ಈಟಿವಿ ಭಾರತಕ್ಕೆ ಮಾಹಿತಿ ನೀಡಿದ ಇತಿಹಾಸ ಸಂಶೋಧಕ ಅಜಯ್ ಶರ್ಮ, ಕಬ್ಬಿಣದ ಆವಿಷ್ಕಾರಕ್ಕೂ ಮೊದಲು ತಯಾರಿಸಲಾದ ಈ ಕಲ್ಲಿನ ಉಂಗುರವನ್ನು ಅಗೆಯಲು ಮತ್ತು ಮೀನು ಹಿಡಿಯಲು ಬಲೆಗಳನ್ನು ನೀರಿನಲ್ಲಿ ಮುಳುಗಿಸಲು ಒಂದು ತೂಕವಾಗಿ ಮತ್ತು ಮಣಿಗಳಿಗೆ ಹೊಳಪು ಕೊಡಲು ಆಧಾರವಾಗಿ ಬಳಸಲಾಗುತ್ತಿತ್ತು ಎಂದಿದ್ದಾರೆ.

ನವಶಿಲಾಯುಗದ ಅವಧಿಯಲ್ಲಿ ಜನರು ಕೇವಲ ಬೇಟೆ ಮತ್ತು ಸಂಗ್ರಹಣೆಯ ಮೇಲೆ ಅವಲಂಬಿತರಾಗುವುದಕ್ಕಿಂತ ಹೆಚ್ಚಾಗಿ ಸಸ್ಯಗಳನ್ನು ಬೆಳೆಸಲು ಮತ್ತು ಆಹಾರಕ್ಕಾಗಿ ಪ್ರಾಣಿಗಳನ್ನು ಸಾಕಲು ಕಲಿಯುತ್ತಾರೆ. ಶಾಲೆಯ ಬಳಿ ಪತ್ತೆಯಾದ ಈ ಕಲ್ಲು ಕ್ರಿ. ಪೂ 1500 – ಕ್ರಿ. ಪೂ 800 (ಸಾಮಾನ್ಯ ಯುಗದ ಮೊದಲು) ಹಿಂದಿನದು. ಅಂದರೆ ಸುಮಾರು 3500 ವರ್ಷ ಹಿಂದಿನದು ಎಂದು ಅಧ್ಯಯನದಿಂದ ಕಂಡುಬಂದಿದೆ ಎಂದು ತಿಳಿಸಿದ್ದಾರೆ.

ಕಲ್ಲು ಸಿಕ್ಕಿರುವ ಈ ಪ್ರದೇಶದಿಂದ ಸುಮಾರು 1 ಕಿ. ಮೀ ದೂರದಲ್ಲಿ ಶರ್ಮಿಣ್ಯಾವತಿ ಎಂಬ ನದಿಯು ದಕ್ಷಿಣದಿಂದ ಉತ್ತರಕ್ಕೆ ಹರಿಯುತ್ತ ಶರಾವತಿ ನದಿಯನ್ನು ಸೇರುತ್ತದೆ. ಕಳೆದ ಕೆಲ ದಿನಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮೇಗುಂದ ಹೋಬಳಿ ವ್ಯಾಪ್ತಿಯ ಅಗಳಗಂಡಿ ಗ್ರಾಮದ ನವಿಲರೆಕಲ್ಲು ಎಂಬಲ್ಲಿ ಇದೇ ರೀತಿಯ ಸುಮಾರು 6000 ವರ್ಷ ಹಿಂದಿನ ಕಾಲದ ಕಲ್ಲು ಪತ್ತೆಯಾಗಿತ್ತು.

ಇದನ್ನೂ ಓದಿ : ಚಿಕ್ಕಬಳ್ಳಾಪುರ: ಗುಂಡಿ ಅಗೆದಷ್ಟು ರಾಶಿ ರಾಶಿ ಪುರಾತನ ನಾಗರಕಲ್ಲು ಪತ್ತೆ! - Ancient cobra stone found - ANCIENT COBRA STONE FOUND

ETV Bharat Logo

Copyright © 2024 Ushodaya Enterprises Pvt. Ltd., All Rights Reserved.