ETV Bharat / state

ರಾಜ್ಯದಲ್ಲಿ ನೂತನ 33 ಸಿವಿಲ್​ ನ್ಯಾಯಾಧೀಶರ ನೇಮಕ

ರಾಜ್ಯದ ನೂತನ ಸಿವಿಲ್​ ನ್ಯಾಯಾಧೀಶರಾಗಿ 33 ಯುವ ವಕೀಲರನ್ನು ನೇಮಕಾತಿ ಮಾಡಿ ಹೈಕೋರ್ಟ್ ಅಧಿಸೂಚನೆ ಹೊರಡಿಸಿದೆ.

ಹೈಕೋರ್ಟ್
ಹೈಕೋರ್ಟ್
author img

By ETV Bharat Karnataka Team

Published : Feb 24, 2024, 8:09 PM IST

ಬೆಂಗಳೂರು : ರಾಜ್ಯದ ನೂತನ ಸಿವಿಲ್​ ನ್ಯಾಯಾಧೀಶರಾಗಿ 33 ಯುವ ವಕೀಲರು ಆಯ್ಕೆಯಾಗಿದ್ದಾರೆ. ಕರ್ನಾಟಕ ನ್ಯಾಯಾಂಗ ಸೇವೆಗಳ (ನೇಮಕಾತಿ) ನಿಯಮಗಳು 2004 ಮತ್ತು ತಿದ್ದುಪಡಿ ನಿಯಮಗಳು 2011, 2015 ಮತ್ತು 2016ರ ಅನ್ವಯ 2023ರ ಮಾರ್ಚ್ 9 ರಂದು ಸಿವಿಲ್ ನ್ಯಾಯಾಧೀಶರನ್ನು ನೇರ ನೇಮಕಾತಿಯ ಮೂಲಕ ನೇಮಕ ಮಾಡಿಕೊಳ್ಳುವ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ.

2023ರ ನವೆಂಬರ್​ನಲ್ಲಿ ನಡೆದಿದ್ದ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ 2024ರ ಜನವರಿಯಲ್ಲಿ ನಡೆದ ಮೌಖಿಕ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಆಧರಿಸಿ ಮೆರಿಟ್ ಮೇಲೆ 33 ಮಂದಿ ಅಭ್ಯರ್ಥಿಗಳು ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ ಎಂದು ಸಿವಿಲ್ ನ್ಯಾಯಾಧೀಶರ ನೇಮಕಾತಿ ಸಮಿತಿಯ ಕಾರ್ಯದರ್ಶಿಯೂ ಆದ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕೆ.ಎಸ್ ಭರತ್ ಕುಮಾರ್ ಅವರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

ಆಯ್ಕೆಯಾದ 33 ಅಭ್ಯರ್ಥಿಗಳ ಹೆಸರು : ಹರ್ಷಿತಾ, ಜಹೀರ್ ಅತನೂರ್, ನಮ್ರತಾ ಎಸ್​. ಹೊಸಮಠ್, ಡಿ. ಭುವನೇಶ್ವರಿ, ಆರ್​.ವರ್ಣಿಕಾ, ಡಿ.ಪುಷ್ಪಾ, ಪೂಜಾ ಎಸ್. ಕುಮಾರ್, ಎಚ್​.ಸಿ.ಸುನಿಲ್, ಕೃಷ್ಣಪ್ಪ ಪಮ್ಮಾರ್, ಡಿ.ಗೀತಾ, ಬಿ.ಆರ್​.ಪುನೀತ್, ಆರ್. ರಂಜಿತ್ ಕುಮಾರ್, ಕೆ.ಕೆ. ಸುರಕ್ಷಾ, ಶರ್ಮಿಳಾ ಇ ಜೆ, ಶ್ರುತಿ ತೇಲಿ, ಪ್ರಹಾನ್ ಸಿಂಗ್ ಎಚ್ ಪಿ, ಮೇಘಾ ಸೋಮಣ್ಣವರ್, ಮಧುಶ್ರೀ ಆರ್ ಎಂ, ವಿಕಾಸ್ ದಳವಾಯಿ, ರಂಜಿತಾ ಎಸ್, ಶ್ರೇಯಾ ಎಚ್ ಜೆ, ಧನಂಜಯ ಹೆಗ್ಡೆ, ತುಷಾರ್ ಸಂಜಯ್ ಸದಲಗೆ, ಐಶ್ವರ್ಯಾ ಗುಡದಿನ್ನಿ, ಶ್ರೀದೇವಿ, ರಮೇಶ್ ಕೆ, ವಿಜಯಕುಮಾರ್ ಎನ್, ಅನಿಲ್ ಜಾನ್ ಸೀಕ್ವೈರಾ, ದಾನಪ್ಪ, ಕೃತಿಕಾ ಪಿ. ಪವಾರ್, ಮಹಾಂತೇಶ್ ಮಠದ್, ಭಾಗ್ಯಶ್ರೀ ಮಾದರ್, ಟಿ.ಸುಮಾ.

ರಾಜ್ಯ ಅತ್ಯಂತ ಕಿರಿಯ ನ್ಯಾಯಾಧೀಶ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೊರಿಮಾರು ಮೂಲದ ಅನಿಲ್ ಜಾನ್ ಸೀಕ್ವೈರಾ 25ನೇ ವರ್ಷಕ್ಕೆ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಯಾಗುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಈ ಮೂಲಕ ಅನಿಲ್ ಅವರು ರಾಜ್ಯದ ಅತ್ಯಂತ ಕಿರಿಯ ನ್ಯಾಯಾಧೀಶರು ಎನ್ನಲಾಗಿದೆ. ಅನಿಲ್‌ ಜಾನ್‌ ಸೀಕ್ವೈರಾ ಮಂಗಳೂರಿನ ಎಸ್​ಡಿಎಂ ಕಾನೂನು ಕಾಲೇಜಿನಲ್ಲಿ ಬಿಬಿಎ ಮತ್ತು ಎಲ್‌ಎಲ್​ಬಿ ಪೂರೈಸಿದ್ದಾರೆ. ಕಾಲೇಜು ದಿನಗಳಲ್ಲಿಯೇ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಇವರು ಬಂಟ್ವಾಳದ ಬೊರಿಮಾರಿನ ಸೈಂಟ್ ಜೋಸೆಫ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಮಾಣಿ ಕರ್ನಾಟಕ ಹೈಸ್ಕೂಲ್​ನಲ್ಲಿ ಪ್ರೌಢ ಶಿಕ್ಷಣ, ಪುತ್ತೂರು ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದಿದ್ದರು.

ಕಾನೂನು ಪದವಿ ಬಳಿಕ ಮಂಗಳೂರಿನಲ್ಲಿ ಬಾ‌ರ್ ಅಸೋಸಿಯೇಶನ್ ಸದಸ್ಯರಾಗಿ ಪ್ರಾಕ್ಟಿಸ್ ಆರಂಭಿಸಿದ್ದರು. ಮಂಗಳೂರಿನ ವಕೀಲರಾದ ದೀಪಕ್ ಡಿಸೋಜ ಮತ್ತು ನವೀನ್ ಪಾಯಸ್ ರೊಂದಿಗೆ ವೃತ್ತಿ ನಿರ್ವಹಿಸುತ್ತಿದ್ದರು. ಅನಿಲ್ ಜಾನ್ ಸೀಕ್ವೈರಾ ಕರ್ನಾಟಕ ಸಿವಿಲ್ ಜಡ್ಜ್ ಪರೀಕ್ಷೆಯನ್ನು ತಮ್ಮ ಎರಡನೇ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದಾರೆ.

ಇದನ್ನೂ ಓದಿ : ನಿತ್ಯಾನಂದ ನೆಲೆಸಿದ ಕೈಲಾಸದ ಸಾಂವಿಧಾನಿಕ ನ್ಯಾಯಾಧೀಶರು ಯಾರು? : ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.