ETV Bharat / state

ಹುಬ್ಬಳ್ಳಿ: ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ 23 ಮಂದಿ ಬಂಧನ, 16 ಪ್ರಕರಣ ದಾಖಲು - METER INTEREST - METER INTEREST

ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಮೀಟರ್ ಬಡ್ಡಿ ದಂಧೆಕೋರರಿಗೆ ಪೊಲೀಸ್ ಇಲಾಖೆ ಬಿಸಿ ಮುಟ್ಟಿಸಿದೆ. ಪೊಲೀಸರು ದಂಧೆ ನಡೆಸುತ್ತಿದ್ದ 23 ಜನರನ್ನು ಬಂಧಿಸಿ, 16 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ 23 ಮಂದಿ ಬಂಧನ
ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ 23 ಮಂದಿ ಬಂಧನ (ETV Bharat)
author img

By ETV Bharat Karnataka Team

Published : Sep 1, 2024, 4:13 PM IST

Updated : Sep 1, 2024, 4:57 PM IST

ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ (ETV Bharat)

ಹುಬ್ಬಳ್ಳಿ: ಸಾರ್ವಜನಿಕರಿಂದ ಬಂದ ದೂರಿನ ಆಧಾರದ ಮೇಲೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್​ ವ್ಯಾಪ್ತಿಯ ವಿವಿಧ ಠಾಣೆಗಳಲ್ಲಿ ಮೀಟರ್ ಬಡ್ಡಿ ದಂಧೆ ನಡೆಸುತ್ತಿದ್ದ 23 ಜನರನ್ನು ಬಂಧಿಸಿ, 16 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಉಪನಗರ ಠಾಣೆ ವ್ಯಾಪ್ತಿಯಲ್ಲಿ ನಾಲ್ವರು ಆರೋಪಿಗಳಾದ ರಾಜೇಶ್ ಮೆಹರವಾಡೆ, ಮೋಹಿತ್ ಮೆಹರವಾಡೆ, ಅನಿತಾ ಹಬೀಬ್, ದೀಪಾ ಶೆಲವಡಿ ಇವರ ಮೇಲೆ ತಲಾ 2 ಪ್ರಕರಣ, ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸತೀಶ್ ದೊಡ್ಡಮನಿ ವಿರುದ್ಧ 1 ಪ್ರಕರಣ, ಕಮರಿಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಧನಲಕ್ಷ್ಮೀ ಮದ್ರಾಸಿ, ಗೋಕುಲ್ ರೋಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಲೋಮನ್ ಬಬ್ಬಾ, ಆನಂದ ರಾಯಚೂರು ವಿರುದ್ಧ ತಲಾ 1 ಪ್ರಕರಣ. ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ನವೀನ್ ಭಾಂಡಗೆ, ದತ್ತು ಪಟ್ಟನ್ ವಿರುದ್ಧ 2 ಪ್ರಕರಣ, ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಸ್ಟೀಫನ್ ಕ್ಷೀರಸಾಗರ ವಿರುದ್ಧ 1 ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದರು.

ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆಯಲ್ಲಿ ಸಮೀರ್, ಸೈಯದಲಿ, ಬಿ.ಕೆ. ಬಾಯಿ, ಹ್ಯಾರಿಶ್ ಪಠಾಣ ವಿರುದ್ಧ 2 ಪ್ರಕರಣ, ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಜಾವೇದ್ ಘೋಡೆಸವಾರ ವಿರುದ್ಧ 1 ಪ್ರಕರಣ, ಧಾರವಾಡ ಶಹರ್​ ಪೊಲೀಸ್ ಠಾಣೆಯಲ್ಲಿ ಶಾಕೀರ ಕರಡಿಗುಡ್ಡ ವಿರುದ್ಧ 1 ಪ್ರಕರಣ, ಹುಬ್ಬಳ್ಳಿ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಗಿರಿಯಪ್ಪ ಬಳ್ಳಾರಿ, ಬಾಲು ಬಳ್ಳಾರಿ, ಅಭಿಲೇಖಾ ತೋಖಾ ವಿರುದ್ಧ 1 ಪ್ರಕರಣ, ಕಸಬಾ ಪೊಲೀಸ್ ಠಾಣೆಯಲ್ಲಿ ತನ್ವೀರ್ ಜಂಗ್ಲಿವಾಲೆ ವಿರುದ್ಧ 1 ಪ್ರಕರಣ, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ನಾರಾಯಣ ಕಾಟಗಾರ ವಿರುದ್ಧ 1 ಪ್ರಕರಣ ದಾಖಲಾಗಿದೆ ಎಂದು ವಿವರಿಸಿದರು.

ಆರೋಪಿತರಿಂದ ಅಂದಾಜು ನಾಲ್ಕು ಲಕ್ಷ ರೂ. ಮೌಲ್ಯದ ಬೆಳ್ಳಿ ಚೈನ್, ಬೈಕ್‍ಗಳು, ಖಾಲಿ ಚೆಕ್‍ಗಳು, ಬಾಂಡ್ ಪೇಪರ್​, ಮೊಬೈಲ್ ಫೋನ್‍ಗಳು, ವಾಹನದ ಮೂಲ ದಾಖಲಾತಿಗಳು ಸೇರಿದಂತೆ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ್ ಸಿ.ಆರ್., ಎಸಿಪಿಗಳಾದ ಶಿವಪ್ರಕಾಶ್ ನಾಯಕ್, ಉಮೇಶ್ ಚಿಕ್ಕಮಠ ಹಾಗೂ ವಿವಿಧ ಠಾಣೆಗಳ ಸಿಪಿಐ ಸಿಬ್ಬಂದಿ ಇದ್ದರು.

ಇದನ್ನೂ ಓದಿ: ಕಾರಿನ ಗಾಜು ಒಡೆದು ಕದಿಯುತ್ತಿದ್ದ ಗ್ಯಾಂಗ್​ ಅರೆಸ್ಟ್​: ಶ್ರೀಮಂತರ ಏರಿಯಾಗಳೇ ಇವರ ಟಾರ್ಗೆಟ್​! - Thieves Arrested

Last Updated : Sep 1, 2024, 4:57 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.