ಚಾಮರಾಜನಗರ: ರಾಜ್ಯದ ಪ್ರಸಿದ್ಧ ಯಾತ್ರಾ ಸ್ಥಳವಾದ ಹನೂರು ತಾಲೂಕಿನ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಶುಕ್ರವಾರ ಹುಂಡಿ ಹಣ ಎಣಿಕೆ ಕಾರ್ಯ ನಡೆಯಿತು. ಹುಂಡಿ ಹಣ ಎಣಿಕೆಯಲ್ಲಿ 30 ದಿನಗಳಿಗೆ 2.16 ಕೋಟಿ ರೂ. ಸಂಗ್ರಹವಾಗಿದೆ ಎಂದು ಶ್ರೀಕ್ಷೇತ್ರ ಮಲೆ ಮಹದೇಶ್ವರಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಅವರು ಮಾಹಿತಿ ನೀಡಿದ್ದಾರೆ.
![ಹುಂಡಿ ಹಣ](https://etvbharatimages.akamaized.net/etvbharat/prod-images/03-02-2024/kn-cnr-02-mmhills-av-ka10038_03022024123622_0302f_1706943982_1.jpg)
ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಸಮ್ಮುಖದಲ್ಲಿ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿ ರಾತ್ರಿ 7ರ ವರೆಗೂ ಹುಂಡಿ ಎಣಿಕೆ ಕಾರ್ಯ ನಡೆಸಲಾಯಿತು.
![ವಿದೇಶಿ ಕರೆನ್ಸಿಗಳು](https://etvbharatimages.akamaized.net/etvbharat/prod-images/03-02-2024/kn-cnr-02-mmhills-av-ka10038_03022024123622_0302f_1706943982_893.jpg)
ಉಚಿತ ಪ್ರಯಾಣ ಹಾಗೂ ಹುಣ್ಣಿಮೆ, ಅಮಾವಾಸ್ಯೆ, ಸಂಕ್ರಾಂತಿ ಹಬ್ಬದ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರಿಂದ ಹರಕೆಯ ರೂಪದಲ್ಲಿ ಕೋಟ್ಯಂತರ ಹಣ, ಚಿನ್ನ ಹಾಗೂ ಬೆಳ್ಳಿ ಪದಾರ್ಥಗಳನ್ನು ಹುಂಡಿಗೆ ಹಾಕಿದ್ದಾರೆ.
![ಹುಂಡಿ ಹಣ](https://etvbharatimages.akamaized.net/etvbharat/prod-images/03-02-2024/kn-cnr-02-mmhills-av-ka10038_03022024123622_0302f_1706943982_966.jpg)
30 ದಿನಗಳ ಅವಧಿಯಲ್ಲಿ ನಡೆದ ಹುಂಡಿಗಳ ಎಣಿಕೆಯಲ್ಲಿ 2,16,34, 614 ರೂ. ಸಂಗ್ರಹವಾಗಿದೆ. 78 ಗ್ರಾಂ ಚಿನ್ನ ಮತ್ತು 2.35 ಕೆಜಿ ಬೆಳ್ಳಿ ಸಂಗ್ರಹವಾಗಿದೆ. ಅಲ್ಲದೇ, ಈ ಬಾರಿ ವಿದೇಶಿ ಕರೆನ್ಸಿಗಳು ಕೂಡ ಹುಂಡಿಯಲ್ಲಿ ಪತ್ತೆಯಾಗಿದೆ. 4 ಯುಎಸ್ ಡಾಲರ್, ಅಫ್ಘಾನಿಸ್ತಾನದ 10 ಅಫ್ಘಾನಿ , ಮಲೇಷ್ಯಾದ 3 ರಿಂಗಿಟ್, ನೇಪಾಳದ ಮೂರು ನೋಟುಗಳು ಪತ್ತೆಯಾಗಿವೆ. ಜೊತೆಗೆ, ಚಲಾವಣೆಯಲ್ಲಿಲ್ಲದ 2000 ರೂ. ಮುಖಬೆಲೆಯ 12 ನೋಟುಗಳು ಕೂಡ ಹುಂಡಿಯಲ್ಲಿ ಸಿಕ್ಕಿವೆ ಎಂದು ಸರಸ್ವತಿ ಅವರು ಮಾಹಿತಿ ನೀಡಿದ್ದಾರೆ.
![ವಿದೇಶಿ ಕರೆನ್ಸಿಗಳು](https://etvbharatimages.akamaized.net/etvbharat/prod-images/03-02-2024/kn-cnr-02-mmhills-av-ka10038_03022024123622_0302f_1706943982_893.jpg)
ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟದ ಹುಂಡಿಯಲ್ಲಿ 2.90 ಕೋಟಿ ಹಣ: 5 ದೇಶಗಳ ಕರೆನ್ಸಿ ಪತ್ತೆ
ಇದಕ್ಕೂ ಮುನ್ನ ಜನವರಿ 4ರಂದು 33 ದಿನಗಳ ಅವಧಿಯಲ್ಲಿ ನಡೆದ ಹುಂಡಿಗಳ ಎಣಿಕೆಯಲ್ಲಿ 2,90,00,732 ರೂ. ಸಂಗ್ರಹವಾಗಿತ್ತು. 102 ಗ್ರಾಂ ಚಿನ್ನ ಮತ್ತು 3.300 ಕೆಜಿ ಬೆಳ್ಳಿ ಜೊತೆಗೆ ಅಮೆರಿಕದ 22 ಡಾಲರ್, ಕೆನಡಾದ 100, ಥಾಯ್ಲೆಂಡ್ನ 2 ಡಾಲರ್ ವಿದೇಶಿ ನೋಟುಗಳು, ಚಲಾವಣೆಯಲ್ಲಿ ಇಲ್ಲದ 2000 ರೂ. ಮುಖಬೆಲೆಯ 12 ನೋಟುಗಳು ಹುಂಡಿಯಲ್ಲಿ ಸಿಕ್ಕಿದ್ದವು. ಕ್ರಿಸ್ಮಸ್ ರಜೆ, ಹೊಸ ವರ್ಷದ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
![ವಿದೇಶಿ ಕರೆನ್ಸಿಗಳು](https://etvbharatimages.akamaized.net/etvbharat/prod-images/03-02-2024/kn-cnr-02-mmhills-av-ka10038_03022024123622_0302f_1706943982_893.jpg)
ನವೆಂಬರ್ 10 ರಿಂದ 14ರ ವರೆಗೆ ಅದ್ಧೂರಿಯಾಗಿ ದೀಪಾವಳಿ ಜಾತ್ರೆ ನಡೆದಿದ್ದು, ಕೇವಲ 5 ದಿನಗಳ ಅವಧಿಯಲ್ಲಿ ಕ್ಷೇತ್ರಕ್ಕೆ 2.8 ಕೋಟಿ ರೂ. ಆದಾಯ ಹರಿದು ಬಂದಿತ್ತು.