ಹರಾರೆ (ಜಿಂಬಾಬ್ವೆ): ಟಿ-20 ವಿಶ್ವಕಪ್ ಗೆಲುವಿನ ಬಳಿಕ ಭಾರತ ಯುವ ತಂಡ ಮತ್ತೊಂದು ಸರಣಿ ಜಯಿಸಿತು. ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಸರಣಿಯಲ್ಲಿ 3-1 ರಿಂದ ಸರಣಿ ಕೈವಶ ಮಾಡಿಕೊಂಡಿತು. ಶನಿವಾರ ನಡೆದ ನಾಲ್ಕನೇ ಪಂದ್ಯದಲ್ಲಿ ನಾಯಕ ಶುಭ್ಮನ್ ಗಿಲ್ ಮತ್ತು ಯಶಸ್ವಿ ಜೈಸ್ವಾಲ್ರ ಭರ್ಜರಿ ಆಟಕ್ಕೆ 10 ವಿಕೆಟ್ಗಳ ಗೆಲುವು ಒಲಿಯಿತು.
ಹರಾರೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದರೂ ಜಿಂಬಾಬ್ವೆಗೆ ಬ್ಯಾಟಿಂಗ್ ಅವಕಾಶ ನೀಡಲಾಯಿತು. ಸಿಕಂದರ್ ರಾಜಾ ನೇತೃತ್ವದ ತಂಡ 20 ಓವರ್ಗಳಲ್ಲಿ 152 ರನ್ ಗಳಿಸಿತು. ಸಾಧಾರಣ ಗುರಿ ಬೆನ್ನತ್ತಿದ ಭಾರತ, ಒಂದೂ ವಿಕೆಟ್ ನಷ್ಟವಿಲ್ಲದೇ 15.2 ಓವರ್ಗಳಲ್ಲಿ 156 ರನ್ ಗಳಿಸಿ ವಿಜಯ ಸಾಧಿಸಿತು.
A sparkling 🔟-wicket win in 4th T20I ✅
— BCCI (@BCCI) July 13, 2024
An unbeaten opening partnership between Captain Shubman Gill (58*) & Yashasvi Jaiswal (93*) seals the series for #TeamIndia with one match to go!
Scorecard ▶️ https://t.co/AaZlvFY7x7#ZIMvIND | @ShubmanGill | @ybj_19 pic.twitter.com/xJrBXlXLwM
ಗಿಲ್-ಯಶಸ್ವಿ ಆಟ: 153 ರನ್ಗಳ ಗುರಿ ಸವಾಲೇ ಅಲ್ಲ ಎಂಬಂತೆ ಆಡಿದ ಯಶಸ್ವಿ ಜೈಸ್ವಾಲ್ ಮತ್ತು ನಾಯಕ ಶುಭ್ಮನ್ ಗಿಲ್ ತಮ್ಮ ಹೊಡಿಬಡಿ ಆಟ ಪ್ರದರ್ಶಿಸಿದರು. ಟಿ-20 ವಿಶ್ವಕಪ್ ತಂಡದಲ್ಲಿದ್ದರೂ ಒಂದೇ ಒಂದು ಪಂದ್ಯವಾಡಲು ಅವಕಾಶ ಸಿಗದೆ ಬೆಂಚ್ ಕಾದಿದ್ದ ಜೈಸ್ವಾಲ್, ಈ ಸರಣಿಯಲ್ಲಿ ಮೊದಲ ಬಾರಿಗೆ ತಮ್ಮ ಅಸಲಿ ಬ್ಯಾಟಿಂಗ್ ಶಕ್ತಿ ತೋರಿಸಿದರು. ಔಟಾಗದೆ 93 ರನ್ ಗಳಿಸಿದ ಜೈಸ್ವಾಲ್ ಇನಿಂಗ್ಸ್ನಲ್ಲಿ 13 ಬೌಂಡರಿ, 2 ಸಿಕ್ಸರ್ ಇದ್ದವು. ಇದಕ್ಕೆ ಬಳಸಿದ್ದು 53 ಎಸೆತಗಳು ಮಾತ್ರ.
ಇನ್ನೊಂದು ತುದಿಯಲ್ಲಿ ಗಿಲ್ ಕೂಡ ಅಬ್ಬರಿಸಿ ಸತತ ಎರಡನೇ ಅರ್ಧಶತಕ ದಾಖಲಿಸಿದರು. 39 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ಗಳಿಂದ ಔಟಾಗದೆ 58 ರನ್ ಮಾಡಿದರು. ಜಿಂಬಾಬ್ವೆ ಪರವಾಗಿ ನಾಯಕ ರಾಜಾ ಸೇರಿದಂತೆ 6 ಜನರು ಬೌಲಿಂಗ್ ಮಾಡಿದರೂ ಒಂದು ವಿಕೆಟ್ ಪಡೆಯಲೂ ಸಾಧ್ಯವಾಗಲಿಲ್ಲ.
For his opening brilliance of 9⃣3⃣* off just 5⃣3⃣ deliveries, @ybj_19 is named the Player of the Match 👏👏
— BCCI (@BCCI) July 13, 2024
Scorecard ▶️ https://t.co/AaZlvFY7x7#TeamIndia | #ZIMvIND pic.twitter.com/yqiiMsFAgF
ಜೈಸ್ವಾಲ್ ಶತಕ ತಪ್ಪಿಸಿದ ಗಿಲ್: ಅಬ್ಬರದ ಬ್ಯಾಟಿಂಗ್ ಮೂಲಕ ಟಿ-20ಯಲ್ಲಿ ಮತ್ತೊಂದು ಶತಕ ಗಳಿಸುವ ಗುರಿಯಲ್ಲಿದ್ದ ಜೈಸ್ವಾಲ್ಗೆ ನಾಯಕ ಗಿಲ್ ಖಳನಾಯಕರಾದರು. 50 ಎಸೆತಗಳಲ್ಲಿ 83 ರನ್ ಗಳಿಸಿ ಆಡುತ್ತಿದ್ದ ಜೈಸ್ವಾಲ್ ಶತಕಕ್ಕೆ 17 ರನ್ ಬೇಕಿತ್ತು. ತಂಡದ ಗೆಲುವಿಗೆ ಬಾಕಿ ಉಳಿದಿದ್ದು 18 ರನ್. ಈ ವೇಳೆ ತಮ್ಮ ಅರ್ಧಶತಕ ಪೂರೈಸಿದ ಗಿಲ್, ಬಳಿಕ ಒಂಟಿ ರನ್ ಗಳಿಸಿ ಜೈಸ್ವಾಲ್ಗೆ ಬ್ಯಾಟ್ ನೀಡದೆ ಸಿಕ್ಸ್ ಬಾರಿಸಿದರು. ಇದರಿಂದ ಜೈಸ್ವಾಲ್ ಶತಕದಾಸೆಯೂ ಕಮರಿತು. ಬಳಿಕ ಜೈಸ್ವಾಲ್ ಸಿಕ್ಸರ್, ಗೆಲುವಿನ ಬೌಂಡರಿ ಬಾರಿಸಿದರೂ ಶತಕ ಗಳಿಸಲು ಸಾಧ್ಯವಾಗಲಿಲ್ಲ. 53 ಎಸೆತಗಳಲ್ಲಿ 93 ರನ್ ಮಾತ್ರ ದಾಖಲಾದವು.
ಇದಕ್ಕೂ ಮೊದಲು ಬ್ಯಾಟ್ ಮಾಡಿದ್ದ ಜಿಂಬಾಬ್ವೆ ಉತ್ತಮ ಆರಂಭ ಪಡೆದರೂ, ಬಳಿಕ ವಿಕೆಟ್ ಕಳೆದುಕೊಂಡು ರನ್ ಗಳಿಸಲು ಪರದಾಡಿತು. ಆರಂಭಿಕರಾದ ಮಧೆವೆರೆ (25) ಮತ್ತು ಮರುಮನಿ(32) ಮೊದಲ ವಿಕೆಟ್ಗೆ 63 ರನ್ ದಾಖಲಿಸಿದರು. ಬಳಿಕ ನಾಯಕ ಸಿಕಂದರ್ ರಾಜಾ ಅಬ್ಬರಿಸಿ 46 ರನ್ ಮಾಡಿದರು. ನಂತರದಲ್ಲಿ ಮತ್ತಷ್ಟು ವಿಕೆಟ್ ಉದುರಿ 7 ವಿಕೆಟ್ಗೆ 152 ರನ್ ಮಾತ್ರ ಪೇರಿಸಿದರು.
ಸರಣಿಯ ಐದನೇ ಮತ್ತು ಕೊನೆಯ ಪಂದ್ಯ ನಾಳೆ (ಭಾನುವಾರ) ನಡೆಯಲಿದೆ.
ಇದನ್ನೂ ಓದಿ: ವಿಂಬಲ್ಡನ್ ಫೈನಲ್: ಇಂದು ಜ್ಯಾಸ್ಮಿನ್ v/s ಬಾರ್ಬೊವಾ, ನಾಳೆ ಜೊಕೊವಿಕ್ v/s ಅಲ್ಕರಜ್ ಸೆಣಸು - Wimbledon final