ETV Bharat / sports

WPL: ಪೆರ್ರಿ ದಾಳಿಗೆ ಬೆದರಿದ ಮುಂಬೈ: 7 ವಿಕೆಟ್​ ಜಯದೊಂದಿಗೆ ಆರ್​ಸಿಬಿ ಪ್ಲೇಆಫ್​ಗೆ ಲಗ್ಗೆ - Womens Premier League 2024

ಮುಂಬೈ ಇಂಡಿಯನ್ಸ್​ ತಂಡದ ವಿರುದ್ಧ 7 ವಿಕೆಟ್​ ಜಯ ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ಪ್ರೀಮಿಯರ್ ಲೀಗ್‌ನ ಪ್ಲೇಆಫ್‌ ಪ್ರವೇಶಿಸಿದೆ.

Etv Bharat
Etv Bharat
author img

By ANI

Published : Mar 13, 2024, 7:17 AM IST

ನವದೆಹಲಿ: ಸ್ಟಾರ್ ಆಟಗಾರ್ತಿ ಎಲ್ಲಿಸ್ ಪೆರ್ರಿ ಆಲ್‌ರೌಂಡ್ ಪ್ರದರ್ಶನದ ನೆರವಿನಿಂದ ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ (WPL) ಮುಂಬೈ ಇಂಡಿಯನ್ಸ್​ ತಂಡವನ್ನು ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್‌ಗೆ ಲಗ್ಗೆ ಇಟ್ಟಿದೆ. ಇಲ್ಲಿನ ಅರುಣ್​ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ವಿರುದ್ಧ ಬೆಂಗಳೂರು ವನಿತೆಯರು 7 ವಿಕೆಟ್​​ ಜಯ ಸಾಧಿಸಿದರು.

ಆಲ್‌ರೌಂಡರ್​​ ಎಲ್ಲಿಸ್ ಪೆರ್ರಿ ಐತಿಹಾಸಿಕ ಚೊಚ್ಚಲ ಆರು ವಿಕೆಟ್‌ ಹಾಗೂ ಅಜೇಯ 40 ರನ್​ ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರಿಗೆ ರಿಚಾ ಘೋಷ್​ 36* ರನ್​​​ ಗಳಿಸಿ ತಕ್ಕ ಸಾಥ್​ ನೀಡಿದರು. ಈ ಗೆಲುವಿನೊಂದಿಗೆ, ಆರ್​​ಸಿಬಿ ಈ ಅಭಿಯಾನದಲ್ಲಿ ಮೂರನೇ ಸ್ಥಾನದೊಂದಿಗೆ ಮುಂದಿನ ಹಂತ ತಲುಪಿದೆ. ನಾಲ್ಕು ಗೆಲುವು ಮತ್ತು ನಾಲ್ಕು ಸೋಲಿನೊಂದಿಗೆ ಒಟ್ಟೂ 8 ಅಂಕ ಗಳಿಸಿದೆ. ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಅಥವಾ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಣಕ್ಕಿಳಿಯಲಿದೆ. ಐದು ಗೆಲುವು ಮತ್ತು ಮೂರು ಸೋಲು ಕಂಡ ಮುಂಬೈ 10 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಸದ್ಯ ಡೆಲ್ಲಿ ಅಗ್ರಸ್ಥಾನದಲ್ಲಿದೆ. ಡೆಲ್ಲಿ ಹಾಗೂ ಗುಜರಾತ್​ ಜೈಂಟ್ಸ್​ ನಡುವಿನ ಅಂತಿಮ ಪಂದ್ಯದಲ್ಲಿ ಅಂಕಪಟ್ಟಿಯ ಟಾಪರ್​ ನಿರ್ಧಾರವಾಗಲಿದೆ.

ಗೆಲುವು ತಂದ ಅಜೇಯ ಜೊತೆಯಾಟ: ಪೆರ್ರಿ ಮಾರಕ ದಾಳಿಗೆ (15ಕ್ಕೆ 6) ಸಿಲುಕಿದ ಮುಂಬೈ ಇಂಡಿಯನ್ಸ್ 19 ಓವರ್​ಗಳಲ್ಲಿ​ 113 ರನ್​ಗಳಿಗೆ ಆಲೌಟ್​ ಆಗಿತ್ತು. 114 ರನ್‌ ಬೆನ್ನತ್ತಿದ ಆರ್‌ಸಿಬಿಗೆ ಆರಂಭದಲ್ಲೇ ಆಘಾತ ಎದುರಾಯಿತು. ಸೋಫಿ ಮೊಲಿನೆಕ್ಸ್‌ 1, ನಾಯಕಿ ಸ್ಮೃತಿ ಮಂಧಾನ 11 ರನ್ ಗಳಿಸಿ ಪೆವಿಲಿಯನ್​ ಸೇರಿಕೊಂಡರು. ನಂತರ ಬಂದ ಸೋಫಿ ಡಿವೈನ್ ಕೂಡ 4 ರನ್​ಗೆ ವಿಕೆಟ್​ ಒಪಪ್ಪಿಸಿದ್ದರಿಂದ ಆರ್​ಸಿಬಿ 39 ರನ್​ ಆಗುವಷ್ಟರಲ್ಲಿ 3 ಪ್ರಮುಖ ವಿಕೆಟ್​ಗಳನ್ನು ಕಳೆದುಕೊಂಡಿತ್ತು.

ಆದರೆ, ಬಳಿಕ ಒಂದಾದ ಎಲ್ಲಿಸ್ ಪೆರ್ರಿ ಹಾಗೂ ರಿಚಾ ಘೋಷ್ ಅಜೇಯ 76 ರನ್​ ಜೊತೆಯಾಟವಾಡಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಪೆರ್ರಿ 5 ಬೌಂಡರಿ ಹಾಗೂ ಸಿಕ್ಸರ್​ ಸಹಿತ 40 ರನ್​ ಬಾರಿಸಿದರೆ, ರಿಚಾ 4 ಬೌಂಡರಿ ಹಾಗೂ 2 ಸಿಕ್ಸರ್​ ಒಳಗೊಂಡ 36 ರನ್​ಗಳೊಂದಿಗೆ ಅಜೇಯರಾಗುಳಿದರು. 15 ಓವರ್​ಗಳಲ್ಲೇ ಬೆಂಗಳೂರು ವನಿತೆಯರು ಜಯದ ನಗು ಬೀರಿದರು. ಈ ಅಮೂಲ್ಯ ಗೆಲುವಿನೊಂದಿಗೆ ಆರ್​ಸಿಬಿ ಮುಂದಿನ ಹಂತಕ್ಕೆ ಕಾಲಿಟ್ಟಿದೆ.

ಪೆರ್ರಿ ಬಿರುಗಾಳಿಗೆ ತತ್ತರಿಸಿದ ಮುಂಬೈ: ಇದಕ್ಕೂ ಮುನ್ನ ಟಾಸ್​ ಸೋತು ಬ್ಯಾಟಿಂಗ್​ ಮಾಡುವ ಅವಕಾಶ ಪಡೆದ ಮುಂಬೈ ಇಂಡಿಯನ್ಸ್​ ವನಿತೆಯರಿಗೆ ಭರ್ಜರಿ ಆರಂಭ ಸಿಕ್ಕಿತು. ಆರಂಭಿಕರಾದ ಹೇಲಿ ಮ್ಯಾಥ್ಯೂಸ್ (26) ಮತ್ತು ಎಸ್ ಸಜನಾ (30) ಮೊದಲ ವಿಕೆಟ್​ಗೆ 43 ರನ್​ ಸೇರಿಸಿದರು. ಆದರೆ, ಮ್ಯಾಥ್ಯೂಸ್ ಹಾಗೂ ಸಜನಾ ವಿಕೆಟ್​ ಪತನದ ಬಳಿಕ ಮುಂಬೈ ದಿಢೀರ್​​ ಕುಸಿತದ ಹಾದಿ ಹಿಡಿಯಿತು.

ನಂತರ ಬಂದ ನಾಯಕಿ ಹರ್ಮನ್​ ಪ್ರೀತ್​ ಕೌರ್​ ಖಾತೆ ತೆರೆಯದೆ ಪೆವಿಲಿಯನ್​ಗೆ ಮರಳಿದರು. ಜೊತೆಗೆ, ಅಮೆಲಿಯಾ ಕೆರ್​ 2, ಅಮನಜೋತ್​ ಕೌಟ್​ 4, ಪೂಜಾ ವಸ್ತ್ರೇಕರ್​ 6, ಹುಮಾರಿಯಾ ಖಾಜಿ 4 ಎರಡಂಕಿ ಮೊತ್ತವನ್ನೂ ಕೂಡ ತಲುಪಲಿಲ್ಲ. ನಾಟ್​ ಸಿವರ್​ ಬ್ರಂಟ್​ 10 ರನ್​ಗೆ ವಿಕೆಟ್​ ಒಪ್ಪಿಸಿದ್ದರಿಂದ ಮುಂಬೈ 82 ರನ್​ಗೆ 7 ವಿಕೆಟ್​ ಕಳೆದುಕೊಂಡಿತ್ತು. ವಿಕೆಟ್​ ಕೀಪರ್​ ಪ್ರಿಯಾಂಕಾ 19 ಹಾಗೂ ವೇಗಿ ಶಬ್ನಿಮ್​ ಇಸ್ಮಾಲ್​ 8 ರನ್​ ಗಳಿಸಿ ತಂಡಕ್ಕೆ ನೆರವಾದರು. ಆರ್​ಸಿಬಿ ಪರ ಮಾರಕ ದಾಳಿ ನಡೆಸಿ 6 ವಿಕೆಟ್​ ಕಿತ್ತ ಪೆರ್ರಿ ಮುಂಬೈ ವನಿತೆಯರನ್ನು ಇನ್ನಿಲ್ಲದಂತೆ ಕಾಡಿದರು.

ಇದನ್ನೂ ಓದಿ: IPL 2024: ಈ ಬಾರಿ ಸನ್‌ರೈಸರ್ಸ್ ಹೈದರಾಬಾದ್ ತಂಡದ SWOT ಏನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.