ನವದೆಹಲಿ: 2024ರ ಮಹಿಳಾ ಏಷ್ಯಾ ಕಪ್‌ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡವು ಬಾಂಗ್ಲಾದೇಶವನ್ನು 10 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಫೈನಲ್‌ಗೆ ಲಗ್ಗೆ ಇಟ್ಟಿದೆ. ಇದರೊಂದಿಗೆ ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ ಭಾರತ 10ನೇ ಬಾರಿಗೆ ಏಷ್ಯಾಕಪ್‌ನಲ್ಲಿ ಫೈನಲ್‌ಗೆ ಪ್ರವೇಶಿಸಿದೆ. ಈ ಪೈಕಿ ಭಾರತ 8 ಬಾರಿ ಏಷ್ಯಾಕಪ್‌ನ ಚಾಂಪಿಯನ್ ಆಗಿತ್ತು. ಒಂದು ಬಾರಿ ಬಾಂಗ್ಲಾದೇಶ ತಂಡ ಏಷ್ಯಾಕಪ್ ಪ್ರಶಸ್ತಿಯನ್ನು ಗೆದ್ದಿತ್ತು.
A look at #TeamIndia's Playing XI for today 👌👌
— BCCI Women (@BCCIWomen) July 26, 2024
Follow the Match ▶️ https://t.co/JwoMEaSoyn#INDvBAN | #WomensAsiaCup2024 | #ACC | #SemiFinal pic.twitter.com/3fqqvRYT5l
ಇಂದು ನಡೆದ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಸೆಮಿಫೈನಲ್ ಪಂದ್ಯದ ಕುರಿತು ತಿಳಿಯುವುದಾದರೆ, ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶವು ಭಾರತಕ್ಕೆ 81 ರನ್‌ಗಳ ಗೆಲುವಿನ ಟಾರ್ಗೆಟ್ ನೀಡಿತ್ತು. ಇದಕ್ಕೆ ಉತ್ತರವಾಗಿ ಭಾರತ 11 ಓವರ್‌ಗಳಲ್ಲಿ 83 ರನ್ ಗಳಿಸುವ ಮೂಲಕ 10 ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತ್ತು.
🚨 Toss 🚨#TeamIndia will field first in the #SemiFinal against Bangladesh
— BCCI Women (@BCCIWomen) July 26, 2024
Follow the Match ▶️ https://t.co/JwoMEaSoyn#INDvBAN | #WomensAsiaCup2024 | #ACC pic.twitter.com/DOvhvpVxvE
10 ವಿಕೆಟ್‌ಗಳಿಂದ ಬಾಂಗ್ಲಾದೇಶವನ್ನು ಮಣಿಸಿದ ಭಾರತ: ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ ನಾಯಕಿ ನಿಗರ್ ಸುಲ್ತಾನ 51 ಎಸೆತಗಳಲ್ಲಿ 2 ಬೌಂಡರಿ ಸಹಿತ 32 ರನ್ ಹಾಗೂ ಶರ್ನಾ ಅಖ್ತರ್ ಅವರ 19 ರನ್‌ಗಳ ನೆರವಿನಿಂದ 20 ಓವರ್‌ಗಳಲ್ಲಿ 10 ವಿಕೆಟ್ ಕಳೆದುಕೊಂಡು 80 ರನ್ ಗಳಿಸಿತು. ಭಾರತ ತಂಡ 11 ಓವರ್‌ಗಳಲ್ಲಿ ಶೆಫಾಲಿ ವರ್ಮಾ 26 ಮತ್ತು ಸ್ಮೃತಿ ಮಂದಾನ 55 ರನ್‌ಗಳ ನೆರವಿನಿಂದ ಯಾವುದೇ ವಿಕೆಟ್ ನಷ್ಟವಿಲ್ಲದೆ ಗೆಲುವು ಸಾಧಿಸಿತು.
Bangladesh will bat first in Semi-Final 1️⃣
— AsianCricketCouncil (@ACCMedia1) July 26, 2024
Can Murshida Khatun get going in the powerplay? 💪#WomensAsiaCup2024 #ACC #HerStory #INDWvBANW pic.twitter.com/qFSd2l0AgM
ತಲಾ ಮೂರು ವಿಕೆಟ್ ಪಡೆದ ರೇಣುಕಾ, ರಾಧಾ: ಬಾಂಗ್ಲಾದೇಶದ ದಿಲಾರಾ ಅಖ್ತರ್ ಮತ್ತು ಮುರ್ಷಿದಾ ಖಾತೂನ್ ಅವರ ವಿಕೆಟ್ ಅನ್ನು ಪಡೆದ ರೇಣುಕಾ ಸಿಂಗ್ ಅವರು, ಮೊದಲ ಓವರ್‌ನಲ್ಲೇ ಭಾರತಕ್ಕೆ ಯಶಸ್ಸನ್ನು ತಂದುಕೊಟ್ಟರು. ಇದಾದ ಬಳಿಕ ಕ್ರೀಸ್ಗೆ ಬಂದ ಇಶ್ಮಾ ತಂಝೀಮ್ 8 ರನ್ ಗಳಿಸಿ ಪೆವಿಲಿಯನ್‌ಗೆ ಕಳುಹಿಸಿದರು. ಭಾರತದ ಬೌಲರ್‌ಗಳು 33 ರನ್‌ಗಳಿಗೆ ಅರ್ಧದಷ್ಟು ಬಾಂಗ್ಲಾದೇಶ ತಂಡವನ್ನು ಪೆವಿಲಿಯನ್‌ಗೆ ಕಳುಹಿಸಿದರು.
ಇದಾದ ಬಳಿಕ ನಾಯಕ ನಿಗರ್ ಸುಲ್ತಾನಾ ತಂಡವನ್ನು ಮುನ್ನಡೆಸಿದರು. ಅವರು 51 ಎಸೆತಗಳಲ್ಲಿ 2 ಬೌಂಡರಿಗಳ ನೆರವಿನಿಂದ 32 ರನ್ ಗಳಿಸಿದರು. ಅವರ ನಂತರ ಶೋರ್ನಾ ಅಖ್ತರ್ 19 ರನ್ ಕೊಡುಗೆ ನೀಡಿ ತಂಡದ ಸ್ಕೋರ್ನ್ನು 80ಕ್ಕೆ ಕೊಂಡೊಯ್ದರು. ಭಾರತದ ಪರ ರಾಧಾ ಯಾದವ್ ಮತ್ತು ರೇಣುಕಾ ಸಿಂಗ್ 3-3 ವಿಕೆಟ್ ಪಡೆದರು.
Here are the lineups for the first Semis 💥#WomensAsiaCup2024 #ACC #HerStory #INDWvBANW pic.twitter.com/V1ttqeaLVa
— AsianCricketCouncil (@ACCMedia1) July 26, 2024
ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ರೇಣುಕಾ: ಬಾಂಗ್ಲಾದೇಶ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಸ್ಫೋಟಕ ಪ್ರದರ್ಶನ ನೀಡಿದ ರೇಣುಕಾ ಸಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ರೇಣುಕಾ ಅದ್ಭುತ ಬೌಲಿಂಗ್ ಮಾಡಿ 4 ಓವರ್ ಗಳಲ್ಲಿ 10 ರನ್ ನೀಡಿ 3 ವಿಕೆಟ್ ಪಡೆದರು. ಈ ಅತ್ಯುತ್ತಮ ಪ್ರದರ್ಶನಕ್ಕಾಗಿ ಅವರು ಪಂದ್ಯ ಶ್ರೇಷ್ಠ ಆಟಗಾರರಾಗಿ ಆಯ್ಕೆಯಾದರು. ಈ ಪಂದ್ಯದಲ್ಲಿ ರೇಣುಕಾ ತಮ್ಮ 50 ಟಿ-20 ಅಂತಾರಾಷ್ಟ್ರೀಯ ವಿಕೆಟ್‌ಗಳನ್ನು ಪೂರೈಸಿದರು. ರೇಣುಕಾ ಹೊರತಾಗಿ, ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ 39 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ 55 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದರು.
2024ರ ಏಷ್ಯಾ ಕಪ್ ಫೈನಲ್ ಯಾವಾಗ?: ಭಾರತೀಯ ಕ್ರಿಕೆಟ್ ತಂಡವು 2024ರ ಮಹಿಳಾ ಏಷ್ಯಾ ಕಪ್‌ನ ಅಂತಿಮ ಪಂದ್ಯವನ್ನು ಹರ್ಮನ್‌ಪ್ರೀತ್ ಕೌರ್ ನಾಯಕತ್ವದಲ್ಲಿ ಜುಲೈ 28 ರಂದು ಅಂದರೆ, ಭಾನುವಾರದಂದು ಆಡಲಿದೆ. ಫೈನಲ್‌ನಲ್ಲಿ ಭಾರತ ಯಾರನ್ನು ಎದುರಿಸಲಿದೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ. ಇಂದು ಸಂಜೆ ಆತಿಥೇಯ ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವೆ ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದ ವಿಜೇತ ತಂಡದೊಂದಿಗೆ ಟೀಂ ಇಂಡಿಯಾ ಫೈನಲ್‌ನಲ್ಲಿ ಆಡಲಿದೆ.
ಇದನ್ನೂ ಓದಿ: ಸಾವಿರಾರು ವರ್ಷಗಳ ಇತಿಹಾಸವಿರುವ ಒಲಿಂಪಿಕ್ ಕ್ರೀಡಾಕೂಟದ ಆಸಕ್ತಿದಾಯಕ ಸಂಗತಿಗಳು - Interesting Facts About Olympics