Virat Kohli 0th Ball Wicket: ಕ್ರಿಕೆಟ್ ಚರಿತ್ರೆಯಲ್ಲಿ ಹೆಚ್ಚಿನವರು ತಿಳಿಯದೇ ಇರುವ ಅನೇಕ ದಾಖಲೆಗಳಿವೆ. ಇವುಗಳ ಬಗ್ಗೆ ಅರಿತರೆ ನಿಜಕ್ಕೂ ಇಂತಹ ದಾಖಲೆಗಳು ಕ್ರಿಕೆಟ್ನಲ್ಲಿ ಸೃಷ್ಟಿಯಾಗಿದೆಯೇ ಎನಿಸುತ್ತದೆ. ಅಂತಹ ಅಚ್ಚರಿಯ ದಾಖಲೆಗಳಲ್ಲಿ ಒಂದು ಭಾರತ ಕ್ರಿಕೆಟ್ ತಂಡದ ಬ್ಯಾಟರ್ ಶೂನ್ಯ ಬಾಲ್ನಲ್ಲಿ ವಿಕೆಟ್ ಪಡೆದಿರುವುದು. ಅದೂ ಕೂಡ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಎಂಬುದು ಗಮನಾರ್ಹ.
ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ: 2011ರಲ್ಲಿ ಭಾರತ ತಂಡ ಇಂಗ್ಲೆಂಡ್ಗೆ ಪ್ರವಾಸ ಬೆಳೆಸಿತ್ತು. ಉಭಯ ತಂಡಗಳ ಮಧ್ಯೆ ಏಕೈಕ ಟಿ20 ಪಂದ್ಯ ನಡೆದಿತ್ತು. ಆಗಸ್ಟ್ 31ರಂದು ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಟೀಂ ಇಂಡಿಯಾ, ನಿಗದಿತ 20 ಓವರ್ಗಳಲ್ಲಿ 165 ರನ್ಗಳಿಗೆ ಸರ್ವಪತನ ಕಂಡಿತ್ತು. 166 ರನ್ ಗುರಿ ಪಡೆದಿದ್ದ ಆಂಗ್ಲರು ಒಂದು ವಿಕೆಟ್ ಕಳೆದುಕೊಂಡರೂ ಪವರ್ ಪ್ಲೇನಲ್ಲಿ 61 ರನ್ ಸಿಡಿಸಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದರು.
ಆಂಗ್ಲ ಬ್ಯಾಟರ್ಗಳ ಅಬ್ಬರಕ್ಕೆ ಕಡಿವಾಣ ಹಾಕಿ ಪಂದ್ಯದ ಗತಿ ಬದಲಿಸಬೇಕು ಎಂದು ಟೀಂ ಇಂಡಿಯಾ ನಾಯಕ ಧೋನಿ ಯೋಚಿಸಿದರು. ಅದರಂತೆ, ಪಾರ್ಟ್ಟೈಮ್ ಬೌಲರ್ ಆಗಿ 8ನೇ ಓವರ್ನಲ್ಲಿ ಬೌಲಿಂಗ್ ಮಾಡುವಂತೆ ಕೊಹ್ಲಿ ಕೈಗೆ ಚೆಂಡು ನೀಡಿದ್ದರು. ಬೌಲಿಂಗ್ಗೆ ಬಂದ ವಿರಾಟ್ ಇತಿಹಾಸ ಸೃಷ್ಟಿಸಿದರು.
Virat Kohli is the only bowler to take a wicket without bowling a single ball 🔥🐐.#ViratKohli pic.twitter.com/jt1JpI55aR
— ENGINEERING🚁 (@Appuro45_) April 29, 2023
ಇದನ್ನೂ ಓದಿ: 1 ಎಸೆತದಲ್ಲಿ 286 ರನ್ ಕಲೆಹಾಕಿದ ತಂಡ: ಕ್ರಿಕೆಟ್ ಇತಿಹಾಸದಲ್ಲೇ ಯಾರು ಕೇಳರಿಯದ ವಿಚಿತ್ರ ದಾಖಲೆ ಇದು! - 1 ball 286 run
ಮಾನ್ಯವಲ್ಲದ ಎಸೆತಕ್ಕೆ ವಿಕೆಟ್: ವಿರಾಟ್ ಕೊಹ್ಲಿ ತಮ್ಮ ಮೊದಲ ಓವರ್ನ ಮೊದಲ ಎಸೆತದಲ್ಲೇ ಕೆವಿನ್ ಪೀಟರ್ಸನ್ ವಿಕೆಟ್ ಪಡೆದರು. ಕೊಹ್ಲಿ ಎಸೆದ ಮೊದಲ ಚೆಂಡು ಲೆಗ್ ಸ್ಟಂಪ್‌ನ ಹೊರಗೆ ಹೋಗಿತ್ತು. ಈ ಬಾಲ್ ಹೊಡೆಯಲೆಂದು ಪೀಟರ್ಸನ್ ಕ್ರೀಸ್ ಬಿಟ್ಟು ಹೊರಬಂದಿದ್ದರು. ಆದರೆ ಆ ಬೌಲ್ ಅವರ ಬ್ಯಾಟ್ಗೆ ತಾಗದೇ ವಿಕೆಟ್ ಕೀಪರ್ ಧೋನಿ ಕೈ ಸೇರಿತ್ತು. ಆಗ ಚೆಂಡನ್ನು ತಕ್ಷಣವೇ ಸ್ಟಂಪ್‌ಗಳಿಗೆ ತಾಗಿಸಿ ಪೀಟರ್ಸನ್ ಅವರನ್ನು ಔಟ್ ಮಾಡಿದ್ದರು. ಆದರೆ ಕೊಹ್ಲಿ ಎಸೆದ ಈ ಚೆಂಡು ಲೆಗ್ ಸ್ಟಂಪ್‌ನ ಹೊರಗಿದ್ದುದರಿಂದ ಅಂಪೈರ್ ವೈಡ್ ಬಾಲ್ ಎಂದು ಘೋಷಿಸಿದರು.
ಟಿ20ಯಲ್ಲಿ 4 ವಿಕೆಟ್: ವಿರಾಟ್ ಕೊಹ್ಲಿ ಒಟ್ಟು 125 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ್ದು, 4 ವಿಕೆಟ್ ಪಡೆದಿದ್ದಾರೆ.
ಇದನ್ನೂ ಓದಿ: ಒಂದೇ ಓವರ್ನಲ್ಲಿ 36 ಅಲ್ಲ 77ರನ್ ಬಿಟ್ಟುಕೊಟ್ಟ ಬೌಲರ್: ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಓವರ್ ದಾಖಲು!