ಹೈದರಾಬಾದ್: ಕ್ರಿಕೆಟ್ ವಿಶ್ವದ ಅತ್ಯಂತ ಪ್ರಸಿದ್ಧ ಕ್ರೀಡೆಗಳಲ್ಲಿ ಒಂದಾಗಿರುವ ಆಟವಾಗಿದೆ. ಈ ಕ್ರೀಡೆ ಇಂಗ್ಲೆಂಡ್ನಲ್ಲಿ ಹುಟ್ಟಿಕೊಂಡಿರುವ ಭಾರತದಲ್ಲಿ ಅತೀ ಹೆಚ್ಚು ಪ್ರಸಿದ್ದಿ ಪಡೆದುಕೊಂಡಿದೆ. ಅಲ್ಲದೇ ಶ್ರೀಮಂತ ಕ್ರೀಡೆ ಆಗಿಯೂ ವಿಶ್ವದಾದ್ಯಂತ ವ್ಯಾಪಿಸಿಕೊಂಡಿದೆ. ಆದರೆ ನಿಮಗೆ ಗೊತ್ತಾ ಈ ಕ್ರಿಕೆಟ್ನಲ್ಲಿ ಇದೂವರೆಗೂ ದುಬಾರಿ ಬೆಲೆ ಬ್ಯಾಟ್ಗಳನ್ನು ಬಳಸಿರುವ ಆಟಗಾರರು ಯಾರು ಮತ್ತು ಬ್ಯಾಟ್ನ ಬೆಲೆ ಎಷ್ಟು ಎಂದು, ಹಾಗಾದರೆ ಈ ಸುದ್ದಿಯಲ್ಲಿ ಅದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ
ಸರ್ ವಿವಿಯನ್ ರಿಚರ್ಡ್ಸ್: ಸರ್ವಶ್ರೇಷ್ಠ ಕ್ರಿಕೆಟ್ ದಿಗ್ಗಜ ಆಟಗಾರ ವೆಸ್ಟ್ ಇಂಡಿಸ್ನ ಸರ್ ವಿವಿಯನ್ ರಿಚರ್ಡ್ಸ್ ಕ್ರಿಕೆಟ್ ಲೋಕದಲ್ಲಿ ಹಲವಾರು ದಾಖಲೆಗಳನ್ನು ಬರೆದಿರುವ ಶ್ರೇಷ್ಠ ಆಟಗಾರರಾಗಿದ್ದಾರೆ. ಅಲ್ಲದೇ ಈ ದಿಗ್ಗಜ ಆಟಗಾರರ ಕ್ರಿಕೆಟ್ನಲ್ಲಿ ಗ್ರೇ-ನಿಕೋಲ್ಸ್ ಲೆಜೆಂಡ್ ಗೊಲ್ಡ್ ಹೆಸರಿನ ದುಬಾರಿ ಬ್ಯಾಟ್ ಬಳಸುತ್ತಿದ್ದರು. ಹೌದು, ಇಂಗ್ಲಿಷ್ ವಿಲ್ಲೊ ಕಟ್ಟಿಗೆಯಿಂದ ತಯಾರಿಸುವ ಈ ಬ್ಯಾಟ್ನ ಬೆಲೆ 14,000 ಡಾಲರ್ ಆಗಿತ್ತು. ಪ್ರಸ್ತುತ ಭಾರತೀಯ ರೂಪಾಯಿಯಲ್ಲಿ ಇದರ ಬೆಲೆ ನೋಡುವುದಾದರೇ 11,74,339 ರೂ ಆಗಿದೆ.
ಹಾರ್ದಿಕ್ ಪಾಂಡ್ಯ: ಭಾರತದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಟಿ-20 ವಿಶ್ವಕಪ್ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಶ್ರೀಮಂತ ಕ್ರಿಕೆಟರ್ಗಳಲ್ಲಿ ಒಬ್ಬರಾಗಿರುವ ಹಾರ್ದಿಕ್ ದುಬಾರಿ ಬೆಲೆಯ ಕಾರು, ಬಂಗ್ಲೆ ಮಾತ್ರವಲ್ಲದೇ ಬ್ಯಾಟ್ ಕೂಡ ಹೊಂದಿದ್ದಾರೆ. ವರದಿಗಳ ಪ್ರಕಾರ ಹಾರ್ದಿಕ್ ಪಾಂಡ್ಯ ಕ್ರಿಕೆಟ್ನಲ್ಲಿ SG (Sanspareil Greenlands) ಹೆಸರಿನ ಬ್ಯಾಟ್ ಬಳಸುತ್ತಾರೆ. ಇದರ ಬೆಲೆ 1,79,999 ರೂ ಆಗಿದೆ.
ಸ್ಟೀವ್ ಸ್ಮಿತ್: ಆಸ್ಟ್ರೇಲಿಯಾದ ಟಾಪ್ ಬ್ಯಾಟರ್ ಸ್ಟೀವ್ ಸ್ಮಿತ್ ಕೂಡ ಕ್ರಿಕೆಟ್ನಲ್ಲಿ ದುಬಾರಿ ಬೆಲೆಯ ಬ್ಯಾಟ್ ಬಳಸುತ್ತಾರೆ. ಇವರು NB (New Ballance) ಹೆಸರಿನ ಬ್ಯಾಟ್ ಬಳಸುತ್ತಿದ್ದು, ಇದರ ಬೆಲೆ 11 ಲಕ್ಷ ರೂಪಾಯಿಗೂ ಅಧಿಕವಾಗಿದೆ.
ಕ್ರಿಸ್ ಗೇಲ್: ವೆಸ್ಟ್ ಇಂಡೀಸ್ನ ದೈತ್ಯ ಕ್ರಿಕೆಟರ್ ಕ್ರಿಸ್ಗೆಲ್ ತಮ್ಮ ಸ್ಪೋಟಕ್ ಬ್ಯಾಟಿಂಗ್ನಿಂದಲೇ ಕ್ರಿಕೆಟ್ನಲ್ಲಿ ಹಲವಾರು ದಾಖಲೆಗಳನ್ನು ಬರೆದಿದ್ದಾರೆ. ಅಲ್ಲದೇ ಐಪಿಎಲ್ನಲ್ಲಿ ಅತೀ ಹೆಚ್ಚು ರನ್ (175 ರನ್) ಗಳಿಸಿದ ಬ್ಯಾಟರ್ ಎಂಬ ದಾಖಲೆ ಬರೆದಿದ್ದಾರೆ. ಈ ದೈತ್ಯ ಬ್ಯಾಟರ್ ಕ್ರಿಕೆಟ್ನಲ್ಲಿ Spartan ಹೆಸರಿನ ಬ್ಯಾಟ್ ಬಳಸಿದ್ದು ಇದರ ಬೆಲೆ 1 ಲಕ್ಷ ರೂಪಾಯಿ ಆಗಿದೆ.
ಜೋಸ್ ಬಟ್ಲರ್: ಇಂಗ್ಲೆಂಡ್ನ ಸ್ಟಾರ್ ಬ್ಯಾಟರ್ ಜೋಸ್ ಬಟ್ಲರ್ ಕೂಡ ದುಬಾರಿ ಬೆಲೆಯ ಬ್ಯಾಟ್ ಬಳಸುತ್ತಾರೆ. ಇವರು Kookaburra ಹೆಸರಿನ ಬ್ಯಾಟ್ ಬಳಸುತ್ತಿದ್ದು ಇದರ ಬೆಲೆ 97 ಸಾವಿರ ರೂ ಆಗಿದೆ.
ಸೂರ್ಯಕುಮಾರ್ ಯಾದವ್: ಭಾರತದ ಸ್ಪೋಟಕ ಬ್ಯಾಟರ್ ಮತ್ತು ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಕೂಡ ಹೆಚ್ಚಿನ ಬೆಲೆಯ ಬ್ಯಾಟ್ ಬಳಸುತ್ತಾರೆ. ಇವರು SS (Sareen Sports) ಹೆಸರಿನ 92 ಸಾವಿರ ಬೆಲೆಯ ಬ್ಯಾಟ್ ಬಳಕೆ ಮಾಡುತ್ತಾರೆ.
ಡೆವಿಡ್ ವಾರ್ನರ್: ಆಸ್ಟ್ರೇಕಿಯಾದ ಆರಂಭಿಕ ಬ್ಯಾಟರ್ ಡೆವಿಡ್ ವಾರ್ನರ್ ಕೂಡ ದುಬಾರಿ ಬೆಲೆಯ ಬ್ಯಾಟ್ ಬಳಸುವ ಆಟಗಾರರ ಪಟ್ಟಿಯಲ್ಲಿದ್ದಾರೆ. ಇವರು DSC (Delux Sports Company) ಹೆಸರಿನ 95 ಸಾವಿರ ರೂ ಬೆಲೆಯ ಬ್ಯಾಟ್ ಬಳಸುತ್ತಾರೆ. ಅಲ್ಲದೇ ಇಂಗ್ಲೆಂಡ್ನ ಆಲ್ರೌಂಡರ್ ಬೆನ್ ಸ್ಟೋಕ್ಸ್ ಕೂಡ ಇದೆ ಬೆಲೆಯ GM (Gunn & Moore) ಹೆಸರಿನ ಬ್ಯಾಟ್ ಉಪಯೋಗಿಸುತ್ತಾರೆ.
ವಿರಾಟ್ ಕೊಹ್ಲಿ: ಟೀಂ ಇಂಡಿಯಾದ ರನ್ ಮಷಿನ್ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿಯೂ ಕ್ರಿಕೆಟ್ನಲ್ಲಿ ದುಬಾರಿ ಬೆಲೆಯ ಬ್ಯಾಟ್ ಬಳಸುವ ಆಟಗಾರರಾಗಿದ್ದಾರೆ. ಇವರು ಬಳಸುವ ಬ್ಯಾಟ್ MRF ಹೆಸರಿನದಾಗಿದ್ದು ಇದು 77 ಸಾವಿರ ರೂಪಾಯಿದ್ದಾಗಿದೆ .
ಉಳಿದಂತೆ ಕೇನ್ ವಿಲಿಯಮ್ಸ್ (83,000 ರೂ), ಮಹಿಳಾ ಆಟಗಾರ್ತಿ ಗಾರ್ಡನರ್ (91 ಸಾವಿರ ರೂ) ಕೂಡ ಈ ಪಟ್ಟಿಯಲ್ಲಿ ಸೇರಿದ್ದಾರೆ.