ETV Bharat / sports

ವಿರಾಟ್ ಕೊಹ್ಲಿ ಭಾರತದಲ್ಲಿ ಅತ್ಯಂತ ಜನಪ್ರಿಯ ಕ್ರೀಡಾಪಟು: 2ನೇ ಸ್ಥಾನದಲ್ಲಿ ಎಂಎಸ್ ಧೋನಿ; 3ನೇ ಸ್ಥಾನದಲ್ಲಿ ಯಾರು? - Virat Kohli

ಭಾರತ ಕ್ರಿಕೆಟ್ ತಂಡದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಇಂದಿಗೂ ಫೇಮಸ್. ವರದಿಯ ಪ್ರಕಾರ, ಅವರು ಭಾರತದ ಅತ್ಯಂತ ಪ್ರಸಿದ್ಧ ಕ್ರೀಡಾಪಟು.

author img

By ETV Bharat Karnataka Team

Published : Jul 22, 2024, 8:33 PM IST

Virat Kohli
ವಿರಾಟ್ ಕೊಹ್ಲಿ (IANS)

ನವದೆಹಲಿ : ಭಾರತೀಯ ಕ್ರಿಕೆಟ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ತಮ್ಮ ಅತ್ಯುತ್ತಮ ಪ್ರದರ್ಶನ ಮತ್ತು ವ್ಯಕ್ತಿತ್ವದಿಂದಾಗಿ ಎಲ್ಲಾ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ. ಕಿಂಗ್ ಕೊಹ್ಲಿ ತಮ್ಮ ಬ್ಯಾಟಿಂಗ್ ಮೂಲಕ ಕೋಟ್ಯಂತರ ಜನರ ಹೃದಯ ಮುಟ್ಟಿದ ಆಟಗಾರ ಆಗಿ ಹೊರ ಹೊಮ್ಮಿದ್ದಾರೆ. ಕೊಹ್ಲಿ ತಮ್ಮ ಬ್ಯಾಟಿಂಗ್ ಮೂಲಕ ಹಲವು ಪ್ರಮುಖ ಸಂದರ್ಭಗಳಲ್ಲಿ ಟೀಂ ಇಂಡಿಯಾವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ. ಮೈದಾನದಲ್ಲಿ ಕೊಹ್ಲಿ ಯಾವಾಗಲೂ ನಂಬರ್ 1. ಆದರೆ ಈಗ ಮೈದಾನದ ಹೊರಗೂ ಕಿಂಗ್ ಕೊಹ್ಲಿಯ ಮೋಡಿ ಮುಂದುವರಿದಿದೆ.

ವರದಿಯ ಪ್ರಕಾರ, ಜೂನ್ 2024ರಲ್ಲಿ ವಿರಾಟ್ ಕೊಹ್ಲಿ ಭಾರತದ ಅತ್ಯಂತ ಪ್ರಸಿದ್ಧ ಆಟಗಾರ. ಖ್ಯಾತಿಯ ವಿಷಯದಲ್ಲಿ ಅವರು ಕ್ರಿಕೆಟ್ ಮಾತ್ರವಲ್ಲದೇ ಕ್ರೀಡಾ ಆಟಗಾರರ ಮೇಲೂ ಗೆಲುವು ಸಾಧಿಸಿದ್ದಾರೆ. ವಿರಾಟ್ ಕೊಹ್ಲಿ ಈ ವರ್ಷದ ವಿಶ್ವದ ಅತ್ಯಂತ ಪ್ರತಿಷ್ಠಿತ ಲೀಗ್ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಇದಲ್ಲದೇ, ಅವರು T20 ವಿಶ್ವಕಪ್ 2024 ರ ಫೈನಲ್‌ನಲ್ಲಿ ಅದ್ಭುತ ಅರ್ಧಶತಕವನ್ನು ಗಳಿಸಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕೊಹ್ಲಿಯನ್ನು ಹೊರತುಪಡಿಸಿ ಟಾಪ್-3 ಅತ್ಯಂತ ಪ್ರಸಿದ್ಧ ಆಟಗಾರರಲ್ಲಿ ಕ್ರಿಕೆಟಿಗರೂ ಇದ್ದಾರೆ. ಕೊಹ್ಲಿ ನಂತರ, ಎಂಎಸ್ ಧೋನಿ ಜೂನ್ ತಿಂಗಳಿನಲ್ಲಿ ಭಾರತದ ಎರಡನೇ ಅತ್ಯಂತ ಪ್ರಸಿದ್ಧ ಆಟಗಾರರಾಗಿ ಹೊರ ಹೊಮ್ಮಿದ್ದಾರೆ. ನಿವೃತ್ತಿಯ ನಂತರವೂ ಎಂಎಸ್ ಧೋನಿ ಆಳ್ವಿಕೆ ಮುಂದುವರೆದಿದೆ. ಆದಾಗ್ಯೂ, ಐಪಿಎಲ್ 2024ರಲ್ಲಿ ಎಂಎಸ್ ಧೋನಿ ಚೆನ್ನೈ ತಂಡದ ನಾಯಕತ್ವವನ್ನು ರಿತುರಾಜ್ ಗಾಯಕ್ವಾಡ್‌ಗೆ ಹಸ್ತಾಂತರಿಸಿದ್ದಾರೆ. ಕ್ರಿಕೆಟ್​ಲೋಕದಲ್ಲಿ ಅವರಿಗೆ ಇಂದಿಗೂ ಅವರದ್ದೇ ಆದ ಅತಿದೊಡ್ಡ ಸ್ಥಾನವಿದೆ. ಮಿಸ್ಟರ್​ ಕೂಲ್​ ಅಂತಲೇ ಅವರು ಜನಜನಿತ.

ಜೂನ್ ತಿಂಗಳಿನಲ್ಲಿ ಧೋನಿ ನಂತರ ರೋಹಿತ್ ಶರ್ಮಾ ಭಾರತದ ಮೂರನೇ ಅತ್ಯಂತ ಪ್ರಸಿದ್ಧ ಆಟಗಾರ. ರೋಹಿತ್ ಶರ್ಮಾ ಭಾರತವನ್ನು T20 ವಿಶ್ವಕಪ್ ಪ್ರಶಸ್ತಿಗೆ ಮುನ್ನಡೆಸಿದ ಎರಡನೇ ಭಾರತೀಯ ನಾಯಕರಾಗಿದ್ದಾರೆ. ಇದಲ್ಲದೇ ಐಸಿಸಿ ಟ್ರೋಫಿ ಗೆದ್ದ ಮೂರನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರ ನಾಯಕತ್ವದಲ್ಲಿ ಭಾರತ ಕಳೆದ ತಿಂಗಳು ಟಿ20 ವಿಶ್ವಕಪ್ ಗೆದ್ದಿತ್ತು.

ಭಾರತ ತಂಡ ಜುಲೈ 27 ರಂದು ಶ್ರೀಲಂಕಾ ವಿರುದ್ಧ ಟಿ 20 ಮತ್ತು ಏಕದಿನ ಸರಣಿಯನ್ನು ಆರಂಭಿಸಲಿದೆ. ಟಿ 20 ವಿಶ್ವಕಪ್ ಬಳಿಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮೊದಲ ಬಾರಿಗೆ ಏಕದಿನ ಸರಣಿಯಲ್ಲಿ ಆಡಲಿದ್ದಾರೆ.

ಇದನ್ನೂ ಓದಿ : ಜಸ್ಪ್ರೀತ್ ಬುಮ್ರಾ 'ವಿಶ್ವದ ಎಂಟನೇ ಅದ್ಭುತ' ಎಂದು ಬಣ್ಣಿಸಿದ ವಿರಾಟ್ ಕೊಹ್ಲಿ - 8th Wonder Of World

ETV Bharat Logo

Copyright © 2024 Ushodaya Enterprises Pvt. Ltd., All Rights Reserved.