ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ಪ್ರಾರಂಭಕ್ಕೂ ಮೊದಲೇ, ರಾಜಸ್ಥಾನ್ ರಾಯಲ್ಸ್ ತಂಡ ಭಾರತದ ಮಾಜಿ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಅವರನ್ನು ತಂಡದ ಹೊಸ ಬ್ಯಾಟಿಂಗ್ ಕೋಚ್ ಆಗಿ ನೇಮಿಸಿದೆ. ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಮತ್ತು ಆಯ್ಕೆಗಾರರಾಗಿದ್ದ ರಾಥೋಡ್ ಅವರ ಒಪ್ಪಂದವು ಜೂನ್‌ನಲ್ಲಿ ನಡೆದ ಟಿ -20 ವಿಶ್ವಕಪ್ ಗೆಲುವಿನೊಂದಿಗೆ ಮುಕ್ತಾಯಗೊಂಡಿತ್ತು. ಆದರೆ, ಈಗ ಮತ್ತೊಮ್ಮೆ ಅವರು ರಾಹುಲ್ ದ್ರಾವಿಡ್ ಜೊತೆ ಐಪಿಎಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
Rathour bhi, Royal bhi! 💗
— Rajasthan Royals (@rajasthanroyals) September 20, 2024
T20 World Cup winning coach Vikram Rathour joins our support staff and reunites with Rahul Dravid! 🤝🔥 pic.twitter.com/YbGvoMQyrv
ಖುಷಿ ಹಂಚಿಕೊಂಡ ರಾಥೋಡ್: ರಾಜಸ್ಥಾನ ತಂಡದ ನೂತನ ಫ್ರಾಂಚೈಸಿ ಬಿಡುಗಡೆ ಮಾಡಿದ ಬಳಿಕ ಮಾತನಡಿದ ರಾಥೋಡ್, ರಾಜಸ್ಥಾನ ಕುಟುಂಬದ ಭಾಗವಾಗಿರುವುದು ಖುಷಿ ತಂದಿದೆ. ಮತ್ತೊಮ್ಮೆ ದ್ರಾವಿಡ್ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಅಲ್ಲದೇ ಯುವ ಕ್ರಿಕೆಟಿಗರೊಂದಿಗೂ ಕೆಲಸ ಮಾಡುವುದು ಸಂತೋಷದ ವಿಷಯವಾಗಿದೆ. ತಂಡಕ್ಕೆ ಕೊಡುಗೆ ನೀಡಲು ನಾನು ಎದುರು ನೋಡುತ್ತಿದ್ದೇನೆ ಜತೆಗೆ ಮಾಜಿ ಕಪ್ ವಿಜೇತರನ್ನು ಮತ್ತೊಮ್ಮೆ ಚಾಂಪಿಯನ್ಶಿಪ್ ಪಟ್ಟಕ್ಕೆ ಏರಲು ದುಡಿಯುವೆ ಎಂದಿದ್ದಾರೆ.
Hollywood 🤝 Bollywood 😋
— Rajasthan Royals (@rajasthanroyals) September 20, 2024
Bowling Coach 🤝 Batting Coach 🔥
Excited, #RoyalsFamily? 💗 pic.twitter.com/rdz3IwZoaG
ಇವರ ಗರಡಿಯಲ್ಲಿ ಬೆಳದವರು ಮಿಂಚುತ್ತಿದ್ದಾರೆ; 2019 ರಿಂದ 2024ರವರೆಗೆ ಟೀಮ್ ಇಂಡಿಯಾದ ಬ್ಯಾಟಿಂಗ್ ಕೋಚ್ ಆಗಿದ್ದ ರಾಥೋಡ್ ಅವರು ಭಾರತಕ್ಕಾಗಿ 6 ಟೆಸ್ಟ್ ಮತ್ತು 7 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೇ ಇವರ ಗರಡಿಯಲ್ಲಿ ತರಬೇತಿ ಪಡೆದಿರುವ ರಿಷಭ್ ಪಂತ್, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಅವರಂತಹ ಬ್ಯಾಟ್ಸ್‌ಮನ್‌ಗಳು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮಿಂಚುತ್ತಿದ್ದಾರೆ.
ರಾಥೋಡ್ ಸ್ವಾಗತಿಸಿದ ದ್ರಾವಿಡ್: ರಾಥೋಡ್ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ತಂಡಕ್ಕೆ ಸ್ವಾಗತ ಕೋರಿದ್ದಾರೆ. ' ನಾನು ಮತ್ತು ವಿಕ್ರಮ್ ಹಲವು ವರ್ಷಗಳ ಕಾಲ ಜೊತೆಯಾಗಿ ಕೆಲಸ ಮಾಡಿದ್ದೇವೆ. ಶಾಂತ ವರ್ತನೆಯ ರಾಥೋಡ್ ಭಾರತೀಯ ಆಟಗಾರರ ಪರಿಸ್ಥಿತಿಗಳ ಬಗ್ಗೆ ಆಳವಾದ ತಿಳಿವಳಿಕೆ ಹೊಂದಿದ್ದಾರೆ ಎಂದು ಹೇಳಿದ್ದಾರೆ.
Halla Bol, Rathour is coming home to Rajasthan! 🔥💗 pic.twitter.com/jW1Sjax91W
— Rajasthan Royals (@rajasthanroyals) September 20, 2024
ಮುಂದುವರೆದು ಮಾತನಾಡುತ್ತ, 'ನಾವು ಹಲವಾರು ಸಂದರ್ಭಗಳಲ್ಲಿ ಬಲವಾದ ಸ್ಟ್ರೆಟರ್ಜಿ ಮಾಡಿದ್ದೇವೆ, ಭಾರತಕ್ಕೆ ಗಮನಾರ್ಹ ಯಶಸ್ಸನ್ನು ತಂದುಕೊಟ್ಟಿದ್ದೇವೆ. ಇದೀಗ ಮತ್ತೆ ಅವರ ಜೊತೆಯಾಗಿ ಕೆಲಸ ಮಾಡುವುದು ನನಗೆ ಖುಷಿಯನ್ನು ತಂದಿದೆ. ಯುವ ಪ್ರತಿಭೆಗಳನ್ನು ಪೋಷಿಸುವ ಮತ್ತು ಆಟಗಾರರ ಸಾಮರ್ಥ್ಯವನ್ನು ಹೆಚ್ಚಿಸುವ ಶಕ್ತಿ ಅವರಲ್ಲಿದೆ. ಈ ಬಾರಿ ನಾವು ತಂಡವನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು ಹೊಂದಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಚೆನ್ನೈ ಟೆಸ್ಟ್: ಭಾರತ ವಿರುದ್ದ ಹೊಸ ದಾಖಲೆ ಬರೆದ ಬಾಂಗ್ಲಾ ಯುವ ಬೌಲರ್ ಹಸನ್ ಮಹ್ಮೂದ್ - Hasan Mahmood New Record