ETV Bharat / sports

ಅದೃಷ್ಟ ಅಂದ್ರೆ ಇದೆ!: 2012ರ ಒಲಿಂಪಿಕ್​ನಲ್ಲಿ 6ನೇ ಸ್ಥಾನ ಪಡೆದಿದ್ದ ಅಥ್ಲೀಟ್​ಗೆ 12 ವರ್ಷಗಳ ಬಳಿಕ ಸಿಕ್ಕಿತು ಪದಕ - athlete got medal after 12 years

author img

By ETV Bharat Sports Team

Published : 3 hours ago

2012ರ ಒಲಿಂಪಿಕ್​ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ 6ನೇ ಸ್ಥಾನ ಪಡೆದಿದ್ದ ಅಥ್ಲೀಟ್​ಗೆ 12 ವರ್ಷಗಳ ನಂತರ ಪದಕ ಸಿಕ್ಕಿದೆ. ಅದು ಹೇಗೆ ಅನ್ನೋದರ ಮಾಹಿತಿ ಈ ಸುದ್ದಿಯಲ್ಲಿದೆ..

ಒಲಿಂಪಿಕ್​ ಪದಕಗಳು
ಒಲಿಂಪಿಕ್​​ ಪದಕಗಳು (AP)

ಹೈದರಾಬಾದ್​: ಒಲಿಂಪಿಕ್​ನಲ್ಲಿ ಪದಕ ಗೆಲ್ಲಬೇಕೆಂಬುದು ಕ್ರೀಡಾಪಟುಗಳ ಬಹುದೊಡ್ಡ ಕನಸಾಗಿರುತ್ತದೆ. ಇದಕ್ಕಾಗಿ ಹಗಲು ರಾತ್ರಿ ಎನ್ನದೇ ಅಭ್ಯಾಸ ಮಾಡಿ ಕೊನೆಗೂ ಕನಸಿನ ವೇದಿಕೆಗೆ ತಲುಪುತ್ತಾರೆ. ಕೆಲವೊಮ್ಮೆ ಆಟಗಾರರು ಉತ್ತಮವಾಗಿ ಆಡಿ ಪದಕ ಸುತ್ತಿಗೆ ಪ್ರವೇಶಿಸಿದರೂ ಕಾರಣಾಂತರಗಳಿಂದ ಅನರ್ಹಗೊಂಡು ಸ್ಪರ್ಧೆಯಿಂದಲೇ ಹೊರಬಿದ್ದ ಅದೆಷ್ಟೋ ನಿದರ್ಶನಗಳು ನಮ್ಮ ಮುಂದಿವೆ. ಆದರೆ, ಇಲ್ಲೊಬ್ಬ ಕ್ರೀಡಾಪಟು ಒಲಿಂಪಿಕ್​ನಲ್ಲಿ ಸ್ಪರ್ಧಿಸಿ 12 ವರ್ಷಗಳ ನಂತರ ಪದಕ ಪಡೆದುಕೊಂಡಿದ್ದಾರೆ. ಹಾಗಾದ್ರೆ ಬನ್ನಿ ಆ ಕ್ರೀಡಾಪಟು ಯಾರು ಮತ್ತು ಪದಕ ಹೇಗೆ ಸಿಕ್ಕಿತು ಎಂದು ಈ ಸುದ್ದಿಯಲ್ಲಿ ತಿಳಿದುಕೊಳ್ಳೋಣ.

ಅಮೆರಿಕದ ಮಹಿಳಾ ಅಥ್ಲೀಟ್​ ಆದ ಶಾನನ್ ರೌಬರಿ ಎಂಬುವರು 2012ರ ಲಂಡನ್ ಒಲಿಂಪಿಕ್ನಲ್ಲಿ ಭಾಗವಹಿಸಿದ್ದರು. ಮಹಿಳೆಯರ 1500 ಮೀಟರ್ ಓಟದಲ್ಲಿ ಸ್ಪರ್ಧಿಸಿದ್ದ ರೌಬರಿ ನಿರಾಸೆ ಅನುಭವಿಸಿದ್ದರು. ಫೈನಲ್​ ಪಂದ್ಯದಲ್ಲಿ ಶಾನನ್ ಆರನೇ ಸ್ಥಾನಕ್ಕೆ ಸೀಮಿತಗೊಂಡು ಪದಕ ಪಡೆಯುವಲ್ಲಿ ವಿಫಲರಾಗಿದ್ದರು. ತಮ್ಮ ಈ ಪ್ರದರ್ಶನದಿಂದಾಗಿ ಶಾನನ್​ ತೀವ್ರ ದುಃಖಿತರಾಗಿದ್ದರು.

ಆದರೆ ಈ ಸ್ಪರ್ಧೆ ಮುಗಿದ ಕೆಲ ದಿನಗಳ ನಂತರವೇ ದೊಡ್ಡ ವಿಷಯವೊಂದು ಬೆಳಕಿಗೆ ಬಂದಿತ್ತು. ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 5 ಕ್ರೀಡಾಪಟುಗಳು ನಿಷೇಧಿತ ಪದಾರ್ಥ ಸೇವಿಸಿ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿತ್ತು. ನಂತರ ಆ ಆಟಗಾರರ ಡೋಪಿಂಗ್‌ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಪಾಸಿಟಿವ್​ ಫಲಿತಾಂಶ ಬಂದಿತ್ತು. ಇತ್ತೀಚೆಗೆ ಪ್ರಕರಣವನ್ನು ಕೈಗೆತ್ತಿಕೊಂಡ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಆ ಐವರು ಆಟಗಾರರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿತು. ಇದರಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದ ಆಟಗಾರರು ಸೇರಿದ್ದರು. ಇದರಿಂದಾಗಿ 6ನೇ ಸ್ಥಾನದಲ್ಲಿ ಶಾನನ್​ ರೌಬರಿ 3ನೇ ಸ್ಥಾನಕ್ಕೆ ತಲುಪಿ ಕಂಚಿನ ಪದಕಕ್ಕೆ ಅರ್ಹತೆ ಪಡೆದರು.

ಈ ಹೊಸ ತೀರ್ಪಿನೊಂದಿಗೆ, ರೌಬರಿಯ ಒಲಿಂಪಿಕ್ ಸ್ಪರ್ಧೆಯಲ್ಲಿ 1,500 ಮೀಟರ್​ ಓಟದ ಸ್ಪರ್ಧೆಯಲ್ಲಿ ಪದಕ ಗೆದ್ದ ಮೊದಲ ಅಮೆರಿಕನ್ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜತೆಗೆ 12 ವರ್ಷಗಳ ನಂತರ ಪದಕ ಸ್ವೀಕರಿಸಲಿದ್ದಾರೆ. ಈ ಸುದ್ದಿಯನ್ನು ಕೇಳಿದ ನಂತರ ಭಾವುಕರಾದ ರೌಬರಿ, "ವರ್ಷಗಳ ನನ್ನ ನೋವಿಗೆ ಇಂದು ಪರಿಹಾರ ಸಿಕ್ಕಿದೆ. ಅಂತಿಮವಾಗಿ ನಾನು ಕಂಡ ಕನಸು ನನಸಾಗಲಿದೆ" ಎಂದು ವಿವರಿಸಿದ್ದಾರೆ.

ಉಳಿದಂತೆ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ (ಸಿಎಎಸ್) ಫೈನಲ್‌ನಲ್ಲಿ ಬೆಳ್ಳಿ ಪದಕ ಗೆದ್ದ ರಷ್ಯಾದ ಅಥ್ಲೀಟ್‌ಗೆ ಡೋಪಿಂಗ್​ ಪ್ರಕರಣದಿಂದಾಗಿ 10 ವರ್ಷಗಳ ಕಾಲ ನಿಷೇಧ ಹೇರಿದೆ.

ಏತನ್ಮಧ್ಯೆ, ಈ ವರ್ಷ ನಡೆದ ಪ್ಯಾರಿಸ್ ಒಲಿಂಪಿಕ್​ನಲ್ಲಿ ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅದ್ಭುತ ಪ್ರದರ್ಶನದಿಂದ ಫೈನಲ್ ಪ್ರವೇಶಿಸಿದ್ದರು. ಆದರೆ ಫೈನಲ್‌ ಪಂದ್ಯಕ್ಕೂ ಮೊದಲು ಅವರ ದೇಹದ ತೂಕ 100 ಗ್ರಾಂನಷ್ಟು ಅಧಿಕವಿದ್ದ ಕಾರಣ ಫೈನಲ್​ನಿಂದ ಅನರ್ಹಗೊಳಿಸಲಾಗಿತ್ತು.

ಇದನ್ನೂ ಓದಿ: 15 ವರ್ಷಗಳ ನಂತರ ನ್ಯೂಜಿಲೆಂಡ್ ​ಮಣಿಸಿ ಟೆಸ್ಟ್​ ಸರಣಿ ಗೆದ್ದ ಶ್ರೀಲಂಕಾ - Sri Lanka Won Test Series

ETV Bharat Logo

Copyright © 2024 Ushodaya Enterprises Pvt. Ltd., All Rights Reserved.