ETV Bharat / sports

ಅತ್ಯಂತ ವೇಗದ ತ್ರಿಶತಕ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ ತನ್ಮಯ್ ಅಗರ್ವಾಲ್​

ಹೈದರಾಬಾದ್‌ನ ಆರಂಭಿಕ ಆಟಗಾರ ತನ್ಮಯ್ ಅಗರ್ವಾಲ್ ಶುಕ್ರವಾರ ಪ್ರಥಮ ದರ್ಜೆ ಕ್ರಿಕೆಟ್‌ನ ಇತಿಹಾಸದಲ್ಲಿ ಅತ್ಯಂತ ವೇಗದ ತ್ರಿಶತಕ ಸಿಡಿಸಿ ನೂತನ ದಾಖಲೆ ನಿರ್ಮಿಸಿದ್ದಾರೆ. ಅಗರ್ವಾಲ್ ಅಜೇಯವಾಗಿ 323 ರನ್ ಗಳಿಸಿದ್ದು, 33 ಬೌಂಡರಿ ಮತ್ತು 21 ಸಿಕ್ಸರ್‌ಗಳು ಬಾರಿಸಿದ್ದಾರೆ.

RANJI TROPHY  TANMAY AGRWAL  HYDERABAD RANJI TEAM  TRIPLE HUNDRED
ಅತ್ಯಂತ ವೇಗದ ತ್ರಿಶತಕ ಬಾರಿಸಿ ವಿಶ್ವದಾಖಲೆ ನಿರ್ಮಿಸಿದ ತನ್ಮಯ್ ಅಗರ್ವಾಲ್​
author img

By ETV Bharat Karnataka Team

Published : Jan 27, 2024, 8:44 AM IST

ಹೈದರಾಬಾದ್: ಹೈದರಾಬಾದ್‌ನ ಆರಂಭಿಕ ಆಟಗಾರ ತನ್ಮಯ್ ಅಗರ್ವಾಲ್ ಶುಕ್ರವಾರ ಇಲ್ಲಿ ನಡೆದ ಅರುಣಾಚಲ ಪ್ರದೇಶ ವಿರುದ್ಧದ ರಣಜಿ ಟ್ರೋಫಿ ಪ್ಲೇಟ್ ಗ್ರೂಪ್ ಪಂದ್ಯದಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ಅತಿವೇಗದ ತ್ರಿಶತಕಗಳ ವಿಶ್ವದಾಖಲೆಯನ್ನು ಮುರಿದರು.

28ರ ಹರೆಯದ ತನ್ಮಯ್ ಅಗರ್ವಾಲ್​ ಕೇವಲ 147 ಎಸೆತಗಳಲ್ಲಿ ಮೈಲಿಗಲ್ಲನ್ನು ತಲುಪಿದರು. ಬಾರ್ಡರ್ ಮತ್ತು ವೆಸ್ಟರ್ನ್ ಪ್ರಾವಿನ್ಸ್ ನಡುವಿನ ಪಂದ್ಯದಲ್ಲಿ 191 ಎಸೆತಗಳಲ್ಲಿ ಸಾಧನೆ ಮಾಡಿದ್ದ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಮಾರ್ಕೊ ಮರೈಸ್ ಅವರ ಹಿಂದಿನ ದಾಖಲೆಯನ್ನು ಮುರಿದರು. ನಗರದ ಹೊರವಲಯದಲ್ಲಿರುವ 'ಜೆನ್-ನೆಕ್ಸ್ಟ್' ಕ್ರಿಕೆಟ್ ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ.

ಹೈದರಾಬಾದ್‌ 357 ರನ್‌ಗಳ ಮುನ್ನಡೆ: ಪ್ಲೇಟ್ ಗ್ರೂಪ್​ ಪಂದ್ಯದಲ್ಲಿ ದಿನದಾಟದ ಅಂತ್ಯಕ್ಕೆ ಕೇವಲ 160 ಎಸೆತಗಳಲ್ಲಿ ಹೈದರಾಬಾದ್​ನ ತನ್ಮಯ್ ಅವರ ಅಜೇಯ 323 ರನ್​ಗಳ ನೆರವಿನಿಂದ ಕೇವಲ 48 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 529 ರನ್​ಗಳ ಬೃಹತ್ ಮೊತ್ತ ಕಲೆಹಾಕಲು ಸಾಕ್ಷಿಯಾಯಿತು. ಮೊದಲ ಇನಿಂಗ್ಸ್​ನಲ್ಲಿ ಅರುಣಾಚಲ 39.1 ಓವರ್‌ಗಳಲ್ಲಿ 172 ರನ್ ಗಳಿಸಿತ್ತು. ನಂತರ ಹೈದರಾಬಾದ್ ಎಡಗೈ ಆಟಗಾರ ತನ್ಮಯ್ ಇನ್ನಿಂಗ್ಸ್ 33 ಬೌಂಡರಿ ಮತ್ತು 21 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಇನ್ನು ರಾಹುಲ್‌ ಸಿಂಗ್‌ ಕೇವಲ 105 ಎಸೆತಗಳಲ್ಲಿ 185 ರನ್‌ ಸಿಡಿಸಿದರು. ಒಂಬತ್ತು ವಿಕೆಟ್‌ ಬಾಕಿ ಉಳಿಸಿಕೊಂಡಿರುವ ಹೈದರಾಬಾದ್‌ 357 ರನ್‌ಗಳ ಮುನ್ನಡೆ ಸಾಧಿಸಿದೆ.

360 ಡಿಗ್ರಿ ಆ್ಯಂಗಲ್​ನಲ್ಲಿ ಬ್ಯಾಟಿಂಗ್: ಅಗರ್ವಾಲ್ ಅವರು ಬೌಲರ್‌ಗಳ ಬೆವರಿಳಿಸಿದ್ದಾರೆ. ಕ್ರೀಡಾಂಗಣದಲ್ಲಿ 360 ಡಿಗ್ರಿ ಆ್ಯಂಗಲ್​ನಲ್ಲಿ ಬ್ಯಾಟಿಂಗ್​ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಈ ಟೆಸ್ಟ್​ ಪಂದ್ಯದಲ್ಲಿ ಮೊತ್ತೊಂದು ದಾಖಲೆಯನ್ನು ಮುರಿದಿದ್ದಾರೆ. ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ವೇಗವಾಗಿ ದ್ವಿಶತಕ ಗಳಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡರು. ಅವರು 39 ವರ್ಷಗಳ ಕಾಲ ಭಾರತದ ಮಾಜಿ ಆಲ್‌ರೌಂಡರ್ ರವಿಶಾಸ್ತ್ರಿ ಅವರ ದಾಖಲೆಯನ್ನು ಮುರಿದರು. ತನ್ಮಯ್ 119 ಎಸೆತಗಳಲ್ಲಿ 200 ರನ್‌ಗಳ ಗಡಿ ದಾಟಿದರು.

ಈ ಪಂದ್ಯದಲ್ಲಿ ಹೈದರಾಬಾದ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅರುಣಾಚಲ ಪ್ರದೇಶ 172 ರನ್‌ಗಳಿಗೆ ಆಲೌಟ್ ಆಯಿತು. ಹೈದರಾಬಾದ್ ಬೌಲರ್‌ಗಳ ಪೈಕಿ ಎಡಗೈ ವೇಗಿ ಸಿವಿ ಮಿಲಿಂದ್ ಮತ್ತು ಬಲಗೈ ಮಧ್ಯಮ ಕಾರ್ತಿಕೇಯ ಕಾಕ್ ಮೂರು ವಿಕೆಟ್‌ಗಳನ್ನು ಪಡೆದರು ಮತ್ತು ಎಡಗೈ ಸ್ಪಿನ್ನರ್ ಟಿ. ತ್ಯಾಗರಾಜನ್ ಎರಡು ವಿಕೆಟ್ ಪಡೆದರು.

ಸ್ಕೋರ್​ ವಿವರ: ಅರುಣಾಚಲ ಪ್ರದೇಶ 39.1 ಓವರ್‌ಗಳಲ್ಲಿ 172. ಹೈದರಾಬಾದ್ 48 ಓವರ್‌ಗಳಲ್ಲಿ 529/1 (ತನ್ಮಯ್ ಅಗರ್ವಾಲ್ ಬ್ಯಾಟಿಂಗ್- 323 , ರಾಹುಲ್ ಸಿಂಗ್- 185).

ಇದನ್ನೂ ಓದಿ: ಜೈಸ್ವಾಲ್, ರಾಹುಲ್​, ಜಡೇಜಾ ಅರ್ಧಶತಕ; 2ನೇ ದಿನದಾಟದ ಅಂತ್ಯಕ್ಕೆ ಭಾರತ 421/7

ETV Bharat Logo

Copyright © 2024 Ushodaya Enterprises Pvt. Ltd., All Rights Reserved.