ETV Bharat / sports

ಫ್ಲೋರಿಡಾದಲ್ಲಿ ಮಳೆ ಭೀತಿ: T20 ವಿಶ್ವಕಪ್ ಪಂದ್ಯಗಳ ಮೇಲೆ ಕರಿನೆರಳು - T20 World Cup 2024

author img

By ETV Bharat Karnataka Team

Published : Jun 14, 2024, 2:32 PM IST

ಫ್ಲೋರಿಡಾದಲ್ಲಿ ತೀವ್ರ ಮಳೆಯಾಗುತ್ತಿದ್ದು, ಅದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಮಳೆ ಭೀತಿಯಿಂದ ಕೆಲವು T20 ವಿಶ್ವಕಪ್ ಪಂದ್ಯಗಳು ರದ್ದಾಗಲಿವೆ ಎಂಬ ಅನುಮಾನದ ವರದಿಗಳು ಕೂಡ ಹರಿದಾಡುತ್ತಿವೆ. ಹೀಗೆ ಆದಲ್ಲಿ ಪಾಕಿಸ್ತಾನ ಟೂರ್ನಿಯಿಂದ ಹೊರಬಿದ್ದಂತೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.

T20 World Cup 2024 | Rain Threat Looms Over Florida Leg; Three Matches At Risk Of Washout
ಫ್ಲೋರಿಡಾದ ಲಾಡರ್‌ಹಿಲ್‌ನ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ (AP)

ಹೈದರಾಬಾದ್: ದಕ್ಷಿಣ ಫ್ಲೋರಿಡಾದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ತೀವ್ರ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಪರಿಣಾಮ ಮುಂಬರುವ ಅಂತಾರಾಷ್ಟ್ರೀಯ ಟಿ20 ವಿಶ್ವಕಪ್ ಪಂದ್ಯಗಳು ನಡೆಯುವುದು ಅನುಮಾನ. ಹಾಗಾಗಿ ಫ್ಲೋರಿಡಾದಿಂದ ನ್ಯೂಯಾರ್ಕ್ ಅಥವಾ ಡಲ್ಲಾಸ್‌ನಂತಹ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುವಂತೆ ಕ್ರಿಕೆಟ್ ಉತ್ಸಾಹಿಗಳು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಮೇಲೆ ಒತ್ತಡ ಹೇರುತ್ತಿದ್ದಾರೆ.

ಅಮೆರಿಕ ಮತ್ತು ಕೆನಡಾದಲ್ಲಿ ಟಿ20 ವಿಶ್ವಕಪ್ ಟೂರ್ನಿಗಳು ನಡೆಯುತ್ತಿದ್ದು, ಈಗಾಗಲೇ ಗ್ರೂಪ್ ಹಂತದ ಕೊನೆಯ ಘಟ್ಟಕ್ಕೂ ಬಂದಿವೆ. ಭಾರತ ಸೇರಿದಂತೆ ಕೆಲವು ತಂಡಗಳು ಈಗಾಗಲೇ ಸೂಪರ್​ 8ರ ಪ್ರವೇಶ ಸಹ ಪಡೆದಿವೆ. ಆದರೆ, ಮುಂದಿನ ಕೆಲವು ಪಂದ್ಯಗಳು ಫ್ಲೋರಿಡಾದಲ್ಲಿ ನಿಗದಿಯಾಗಿದ್ದರಿಂದ ಮಳೆ ಭೀತಿ ಎದುರಿಸುತ್ತಿವೆ.

ಭಾರತ ಮತ್ತು ಕೆನಡಾ ನಡುವಿನ ಪಂದ್ಯ ಸೇರಿದಂತೆ ಇನ್ನೂ ಮೂರು ಪಂದ್ಯಗಳು ಫ್ಲೋರಿಡಾದಲ್ಲಿ ನಡೆಯಬೇಕಿದೆ. ಜೂ. 11 ರಂದು ಮಿಯಾಮಿ ಫ್ಲೋರಿಡಾದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದೆ. ಪರಿಣಾಮ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರಿ ಮಳೆಯಿಂದಾಗಿ ರಸ್ತೆಗಳೆಲ್ಲ ನೀರಿನಿಂದ ತುಂಬಿವೆ. ಪ್ರವಾಹದ ಕೆಲವು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಅಲ್ಲದೇ ಮಿಯಾಮಿ ಫ್ಲೋರಿಡಾದಲ್ಲಿ ತುರ್ತು ಪರಿಸ್ಥಿತಿಯನ್ನು ಸಹ ಘೋಷಿಸಲಾಗಿದೆ.

ಹಾಗಾಗಿ ಜೂ. 14, 15 ಮತ್ತು 16 ರಂದು ಫ್ಲೋರಿಡಾದ ಲಾಡರ್‌ಹಿಲ್‌ನಲ್ಲಿರುವ ಸೆಂಟ್ರಲ್ ಬ್ರೋವರ್ಡ್ ಪ್ರಾದೇಶಿಕ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್‌ನಲ್ಲಿ ನಿಗದಿಪಡಿಸಲಾಗಿರುವ ಪಂದ್ಯಗಳ ಬಗ್ಗೆ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಈಗಾಗಲೇ ನಿಗದಿಯಾಗಿರುವ ಪಂದ್ಯಗಳನ್ನು ಫ್ಲೋರಿಡಾದಿಂದ ನ್ಯೂಯಾರ್ಕ್ ಅಥವಾ ಡಲ್ಲಾಸ್‌ನಂತಹ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡುವಂತೆ ಕೆಲವರು ಕ್ರಿಕೆಟ್ ಉತ್ಸಾಹಿಗಳು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮೇಲೆ ಒತ್ತಡ ಸಹ ಹೇರುತ್ತಿದ್ದಾರೆ.

ಜೂ. 11 ರಂದು ನಡೆಯಬೇಕಿದ್ದ ಶ್ರೀಲಂಕಾ ಮತ್ತು ನೇಪಾಳ ನಡುವಿನ ಮೊದಲ ಪಂದ್ಯವು ಈಗಾಗಲೇ ಮಳೆಯಿಂದ ರದ್ದಾಗಿದೆ. ಇದೀಗ ಇನ್ನೂ 3 ಪಂದ್ಯಗಳು ಬಾಕಿಯಿದ್ದು, ಮಳೆಯ ಭೀತಿ ಎದುರಿಸುತ್ತಿವೆ. ಒಂದು ವೇಳೆ ಮಳೆ ಬಂದಿದ್ದೇ ಆದಲ್ಲಿ ಮೂರು ಪಂದ್ಯಗಳು ರದ್ದಾಗಬಲೂಹುದು. ಹೀಗೆ ಆದಲ್ಲಿ ಪಾಕಿಸ್ತಾನ ಟೂರ್ನಿಯಿಂದ ಹೊರಬಿದ್ದಂತೆ!

ನಿಗದಿಪಡಿಸಲಾಗಿರುವ ಪಂದ್ಯಗಳು: ಇದೇ ಸ್ಥಳದಲ್ಲಿ ಈಗಾಗಲೇ (ಶ್ರೀಲಂಕಾ ಮತ್ತು ನೇಪಾಳ) ಒಂದು ಪಂದ್ಯ ರದ್ದಾಗಿದೆ. ಇಂದು ರಾತ್ರಿ (ಜೂ. 14) ಅಮೆರಿಕ ಮತ್ತು ಐರ್ಲೆಂಡ್ ನಡುವೆ ನಡೆಯಬೇಕಿದೆ. ಜೂನ್ 15 ರಂದು ಶನಿವಾರ ಭಾರತವು ಕೆನಡಾವನ್ನು ಎದುರಿಸಲಿದ್ದು, ಜೂನ್ 15 ರಂದು ಭಾನುವಾರ ಪಾಕಿಸ್ತಾನವು ಇದೇ ಸ್ಥಳದಲ್ಲಿ ಐರ್ಲೆಂಡ್ ಅನ್ನು ಎದುರಿಸಲಿದೆ. ಎಲ್ಲ ಪಂದ್ಯಗಳು ರಾತ್ರಿ 8 ಗಂಟೆಗೆ (ಭಾರತೀಯ ಕಾಲಮಾನ) ಪ್ರಾರಂಭವಾಗಲಿವೆ. ಪ್ರತಿಕೂಲ ಹವಾಮಾನ ಪರಿಸ್ಥಿತಿ ಉಳಿದ ಪಂದ್ಯಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು ಎಂಬ ಮಾತುಗಳು ಕೇಳಿ ಬರಲಾಂಭಿಸಿವೆ.

ಪಾಪ್​ ಸೂಪರ್ 8 ಅನುಮಾನ!: ಭಾರತ ಈಗಾಗಲೇ ಸೂಪರ್ 8ಕ್ಕೆ ಅರ್ಹತೆ ಪಡೆದಿದೆ. ಯುಎಸ್ಎ ನಾಲ್ಕು ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಆದರೆ, ಮೂರು ಪಂದ್ಯಗಳಿಂದ ಎರಡು ಅಂಕಗಳೊಂದಿಗೆ ಪ್ರಸ್ತುತ 'ಎ' ಗುಂಪಿನ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಪಾಕಿಸ್ತಾನವು ನಿರ್ಣಾಯಕ ಪಂದ್ಯವನ್ನು ಎದುರಿಸಬೇಕಿದೆ. ಸೂಪರ್ ಸುತ್ತಿಗೇರಲು ಕೊನೆಯ ಅವಕಾಶ ಹೊಂದಿರುವ ಪಾಕಿಸ್ತಾನ ತಂಡ ತನ್ನ ಮುಂದಿನ ಪಂದ್ಯದಲ್ಲಿ ಅಂದರೆ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಶತಾಯಗತಾಯ ಗೆಲ್ಲಲೇಬೇಕಾಗಿದೆ. ಅದರಲ್ಲೂ ಬೃಹತ್ ಅಂತರದಿಂದ ಐರ್ಲೆಂಡ್ ತಂಡವನ್ನು ಮಣಿಸಿದರೆ ಮಾತ್ರ ಮುಂದಿನ ಸುತ್ತಿಗೇರುವ ಅವಕಾಶ ಹೊಂದಿದೆ. ಇದರ ಜೊತೆಗೆ ಇತರ ತಂಡಗಳ ಫಲಿತಾಂಶ ಕೂಡ ಪಾಕ್ ತಂಡದ ಸೂಪರ್ 8 ಸುತ್ತಿನ ಕನಸನ್ನು ನಿರ್ಧರಿಸಲಿವೆ. ಆದರೆ, ಐರ್ಲೆಂಡ್ ವಿರುದ್ಧದ ಈ ನಿರ್ಣಾಯಕ ಪಂದ್ಯ ನಡೆಯುವುದು ಅನುಮಾನ ಎಂದು ಹೇಳಲಾಗುತ್ತಿದ್ದು, ಪಂದ್ಯವನ್ನಾಡದೆ ಬಾಬರ್ ಪಡೆ ಲೀಗ್​ನಿಂದ ಹೊರಗುಳಿಯುವ ಆತಂಕದಲ್ಲಿದೆ ಎಂಬ ಮಾತುಗಳು ಕೇಳಿ ಬರಲಾಂಭಿಸಿವೆ.

ಇದನ್ನೂ ಓದಿ: T20 WORLD CUP 2024: ನೆದರ್ಲೆಂಡ್ಸ್ ವಿರುದ್ಧ ಭರ್ಜರಿ ಗೆಲುವು: ಸೂಪರ್​ -8ರ ಸನಿಹಕ್ಕೆ ಬಾಂಗ್ಲಾದೇಶ - T20 WORLD CUP 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.