ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬಳಿಕ ಕ್ರಿಕೆಟ್ ಜಗತ್ತು ಒಂಬತ್ತನೇ ಆವೃತ್ತಿಯ ಟಿ20 ವಿಶ್ವಕಪ್‌ಗೆ ಸಜ್ಜುಗೊಂಡಿದ್ದು, ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಜೂನ್ 2ರಂದು ಟೆಕ್ಸಾಸ್‌ನ ಗ್ರ್ಯಾಂಡ್ ಪ್ರೈರೀ ಮೈದಾನದಲ್ಲಿ ಆತಿಥೇಯ ಯುಎಸ್ಎ ಹಾಗೂ ನೆರೆಯ ಕೆನಡಾ ನಡುವಿನ ಪಂದ್ಯದೊಂದಿಗೆ ಪಂದ್ಯಾವಳಿ ಪ್ರಾರಂಭವಾಗಲಿದೆ. ಪ್ರತಿಷ್ಠಿತ ಐಸಿಸಿ ಟೂರ್ನಿಯು ಕೆರಿಬಿಯನ್ ದ್ವೀಪಗಳು ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದಲ್ಲಿ ಆಯೋಜನೆಗೊಂಡಿದೆ.
ಆರಂಭದಿಂದಲೂ ಜಾಗತಿಕ ಮಟ್ಟದಲ್ಲಿ ಅಭಿಮಾನಿಗಳ ಮನಸೆಳೆದಿರುವ ಚುಟುಕು ಕ್ರಿಕೆಟ್ ಟೂರ್ನಮೆಂಟ್ನಲ್ಲಿ ಇದುವರೆಗೆ ಹತ್ತು ಹಲವು ದಾಖಲೆಗಳು ಮೂಡಿಬಂದಿವೆ. ಹಲವಾರು ಕ್ರಿಕೆಟ್ ದಂತಕಥೆಗಳು ಮೈದಾನದಲ್ಲಿ ಮಿಂಚಿದ್ದಾರೆ. ಟಿ20 ವಿಶ್ವಕಪ್‌ಗಳ ಇತಿಹಾಸವನ್ನೊಮ್ಮೆ ಹಿಂತಿರುಗಿ ವಿಶ್ಲೇಷಿಸಿದಾಗ ಅವು ನಮ್ಮ ಗಮನ ಸೆಳೆಯುತ್ತವೆ. ಹೆಚ್ಚು ಟ್ರೋಫಿ ಜಯಿಸಿದ ತಂಡಗಳು, ಯಶಸ್ವಿ ನಾಯಕರು, ಅತಿ ಹೆಚ್ಚು ರನ್ ಗಳಿಸಿದವರು, ವಿಕೆಟ್ ಕಬಳಿಸಿದವರು ಮತ್ತು ಅತ್ಯುತ್ತಮ ಫೀಲ್ಡಿಂಗ್ ಪ್ರದರ್ಶನ ಸೇರಿದಂತೆ ದಾಖಲೆಗಳ ಮಾಹಿತಿ ಈ ಕೆಳಗಿನಂತಿದೆ.
ತಂಡಗಳ ದಾಖಲೆಗಳು:
ಹೆಚ್ಚು ಸಲ ವಿಜೇತರು
ಇಂಗ್ಲೆಂಡ್ (2) - 2010 ಮತ್ತು 2022
ವೆಸ್ಟ್ ಇಂಡೀಸ್ (2) - 2012 ಮತ್ತು 2016
ಹೆಚ್ಚು ಪಂದ್ಯ ಜಯಿಸಿದವರು
ಶ್ರೀಲಂಕಾ - 31 (51 ಪಂದ್ಯಗಳು)
ಪಾಕಿಸ್ತಾನ - 28 (47 ಪಂದ್ಯಗಳು)
ಭಾರತ - 27 (44 ಪಂದ್ಯಗಳು)
ಶೇಕಡಾವಾರು ಅಧಿಕ ಗೆಲುವು
ಭಾರತ - 63.95 %
ಆಸ್ಟ್ರೇಲಿಯಾ - 62.5 %
ಶ್ರೀಲಂಕಾ - 61.76 %
ತಂಡದ ಅತ್ಯಧಿಕ ಮೊತ್ತ
ಶ್ರೀಲಂಕಾ - 260/6 vs ಕೀನ್ಯಾ (2007)
ಇಂಗ್ಲೆಂಡ್ - 230/8 vs ದಕ್ಷಿಣ ಆಫ್ರಿಕಾ (2016)
ದಕ್ಷಿಣ ಆಫ್ರಿಕಾ - 229/4 vs ಇಂಗ್ಲೆಂಡ್ (2016)
ಕಡಿಮೆ ಮೊತ್ತ ಗಳಿಕೆ
ನೆದರ್ಲ್ಯಾಂಡ್ಸ್ - 39 ರನ್ vs ಶ್ರೀಲಂಕಾ (2014)
ನೆದರ್ಲ್ಯಾಂಡ್ಸ್ - 44 ರನ್ vs ಶ್ರೀಲಂಕಾ (2021)
ವೆಸ್ಟ್ ಇಂಡೀಸ್ - 55 ರನ್ vs ಇಂಗ್ಲೆಂಡ್ (2021)
ಅತಿ ದೊಡ್ಡ ಗೆಲುವು (ರನ್‌ಗಳ ಪ್ರಕಾರ)
ಶ್ರೀಲಂಕಾ - 172 ರನ್ vs ಕೀನ್ಯಾ (2007)
ದಕ್ಷಿಣ ಆಫ್ರಿಕಾ - 130 ರನ್ vs ಸ್ಕಾಟ್ಲೆಂಡ್ (2009)
ಅಫ್ಘಾನಿಸ್ತಾನ - 130 ರನ್ vs ಸ್ಕಾಟ್ಲೆಂಡ್ (2021)
ಅತಿ ದೊಡ್ಡ ಗೆಲುವು (ವಿಕೆಟ್‌ಗಳ ಪ್ರಕಾರ)
ದಕ್ಷಿಣ ಆಫ್ರಿಕಾ - 10 ವಿಕೆಟ್ ಜಯ vs ಪಾಕಿಸ್ತಾನ (11.3 ಓವರ್‌ಗಳಲ್ಲಿ 130 ರನ್ ಬೆನ್ನಟ್ಟಿರುವುದು)
ಆಸ್ಟ್ರೇಲಿಯಾ - 10 ವಿಕೆಟ್ ಗೆಲುವು vs ಶ್ರೀಲಂಕಾ (10.2 ಓವರ್‌ಗಳಲ್ಲಿ 102 ರನ್ ಗುರಿ ತಲುಪಿರುವುದು)
ಕೀನ್ಯಾ - 10 ವಿಕೆಟ್ ಜಯ vs ಸ್ಕಾಟ್ಲೆಂಡ್ (12.3 ಓವರ್‌ಗಳಲ್ಲಿ 110 ರನ್ ಚೇಸ್)
ಆಟಗಾರರ ಸಾಧನೆಗಳು:
ಹೆಚ್ಚು ಪಂದ್ಯಗಳು
ರೋಹಿತ್ ಶರ್ಮಾ - 39
ಶಕೀಬ್ ಅಲ್ ಹಸನ್ - 36
ತಿಲಕರತ್ನೆ ದಿಲ್ಶಾನ್ - 35
ಅತಿ ಹೆಚ್ಚು ರನ್
ವಿರಾಟ್ ಕೊಹ್ಲಿ - 1141 (25 ಇನ್ನಿಂಗ್ಸ್)
ಮಹೇಲಾ ಜಯವರ್ಧನೆ -1016 (31 ಇನ್ನಿಂಗ್ಸ್)
ಕ್ರಿಸ್ ಗೇಲ್ - 965 (31 ಇನ್ನಿಂಗ್ಸ್)
ಅಧಿಕ ಬೌಂಡರಿಗಳು
ಮಹೇಲಾ ಜಯವರ್ಧನೆ - 111
ವಿರಾಟ್ ಕೊಹ್ಲಿ - 103
ತಿಲಕರತ್ನೆ ದಿಲ್ಶಾನ್ - 101
ಹೆಚ್ಚು ಸಿಕ್ಸರ್
ಕ್ರಿಸ್ ಗೇಲ್ - 63
ರೋಹಿತ್ ಶರ್ಮಾ - 35
ಜೋಸ್ ಬಟ್ಲರ್ - 33
ಹೆಚ್ಚು ಶೂನ್ಯ ರನ್
ಶಾಹಿದ್ ಅಫ್ರಿದಿ - 5
ತಿಲಕರತ್ನೆ ದಿಲ್ಶಾನ್ - 5
ಜಾರ್ಜ್ ಡಾಕ್ರೆಲ್ - 4
ಅತಿ ಹೆಚ್ಚು ಅರ್ಧಶತಕಗಳು
ವಿರಾಟ್ ಕೊಹ್ಲಿ - 14
ಕ್ರಿಸ್ ಗೇಲ್ - 9
ರೋಹಿತ್ ಶರ್ಮಾ - 9
ಅಧಿಕ ಶತಕ ಗಳಿಕೆ
ಕ್ರಿಸ್ ಗೇಲ್ - 2
ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್
ವಿರಾಟ್ ಕೊಹ್ಲಿ - 319 (2014)
ತಿಲಕರತ್ನೆ ದಿಲ್ಶಾನ್ - 317 (2009)
ಬಾಬರ್ ಅಜಮ್ - 303 (2021)
ಅತ್ಯುತ್ತಮ ಜೊತೆಯಾಟ
ಅಲೆಕ್ಸ್ ಹೇಲ್ಸ್-ಜೋಸ್ ಬಟ್ಲರ್ - 170* ರನ್ vs ಭಾರತ (2022)
ರಿಲೀ ರೊಸ್ಸೊ-ಕ್ವಿಂಟನ್ ಡಿ ಕಾಕ್ - 168 ರನ್ vs ಬಾಂಗ್ಲಾದೇಶ (2022)
ಕುಮಾರ ಸಂಗಕ್ಕಾರ-ಮಹೇಲಾ ಜಯವರ್ಧನೆ - 166 ರನ್ vs ವೆಸ್ಟ್ ಇಂಡೀಸ್ (2010)
ಗರಿಷ್ಠ ಸ್ಕೋರ್
ಬ್ರೆಂಡನ್ ಮೆಕಲಮ್ - 58 ಎಸೆತಗಳಲ್ಲಿ 123 vs ಬಾಂಗ್ಲಾದೇಶ (2012)
ಕ್ರಿಸ್ ಗೇಲ್ - 57 ಬಾಲ್ಗಳಲ್ಲಿ 117 vs ದಕ್ಷಿಣ ಆಫ್ರಿಕಾ (2007)
ಅಲೆಕ್ಸ್ ಹೇಲ್ಸ್ - 64 ಚೆಂಡುಗಳಲ್ಲಿ 116* vs ಶ್ರೀಲಂಕಾ (2014)
ಗರಿಷ್ಠ ಸರಾಸರಿ (ಕನಿಷ್ಠ 10 ಪಂದ್ಯಗಳು)
ವಿರಾಟ್ ಕೊಹ್ಲಿ - 81.50
ಸೂರ್ಯಕುಮಾರ್ ಯಾದವ್ - 56.20
ಮೈಕೆಲ್ ಹಸ್ಸಿ - 54.62
ಅತ್ಯಧಿಕ ಸ್ಟ್ರೈಕ್ ರೇಟ್ (ಕನಿಷ್ಠ 10 ಪಂದ್ಯಗಳು)
ಸೂರ್ಯಕುಮಾರ್ ಯಾದವ್ - 181.29
ಡರೆನ್ ಸಮಿ - 164.12
ಶಾಹಿದ್ ಅಫ್ರಿದಿ - 154.23
ಹೆಚ್ಚು ವಿಕೆಟ್
ಶಕೀಬ್ ಅಲ್ ಹಸನ್ - 47 (35 ಇನ್ನಿಂಗ್ಸ್)
ಶಾಹಿದ್ ಅಫ್ರಿದಿ - 39 (34 ಇನ್ನಿಂಗ್ಸ್)
ಲಸಿತ್ ಮಾಲಿಂಗ - 38 (31 ಇನ್ನಿಂಗ್ಸ್)
ಅತ್ಯುತ್ತಮ ಎಕಾನಮಿ ದರ (ಕನಿಷ್ಠ 10 ಪಂದ್ಯಗಳು)
ಸುನಿಲ್ ನರೈನ್ - 5.17
ಸ್ಯಾಮ್ಯುಯೆಲ್ ಬದ್ರಿ - 5.52
ವನಿಂದು ಹಸರಂಗ - 5.81
ಅತ್ಯುತ್ತಮ ಬೌಲಿಂಗ್ ಅಂಕಿ-ಅಂಶಗಳು
ಅಜಂತಾ ಮೆಂಡಿಸ್ - 4 ಓವರ್ | 8 ರನ್ | 6 ವಿಕೆಟ್‌ಗಳು vs ಜಿಂಬಾಬ್ವೆ (2012)
ರಂಗನಾ ಹೆರಾತ್ - 3.3 ಓವರ್ | 3 ರನ್ | 5 ವಿಕೆಟ್‌ಗಳು vs ನ್ಯೂಜಿಲೆಂಡ್ (2014)
ಉಮರ್ ಗುಲ್ - 3 ಓವರ್ | 6 ರನ್ | 5 ವಿಕೆಟ್ vs ನ್ಯೂಜಿಲೆಂಡ್ (2009)
ಏಕ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್
ವನಿಂದು ಹಸರಂಗ - 16 ವಿಕೆಟ್ (2021)
ಅಜಂತಾ ಮೆಂಡಿಸ್ - 15 ವಿಕೆಟ್ (2012)
ವನಿಂದು ಹಸರಂಗ - 15 ವಿಕೆಟ್ (2022)
ಕ್ಷೇತ್ರರಕ್ಷಣೆಯಲ್ಲಿನ ದಾಖಲೆಗಳು:
ಅತಿ ಹೆಚ್ಚು ಔಟ್ (ವಿಕೆಟ್ ಕೀಪರ್)
ಮಹೇಂದ್ರ ಸಿಂಗ್ ಧೋನಿ - 32
ಕಮ್ರಾನ್ ಅಕ್ಮಲ್ - 30
ದಿನೇಶ್ ರಾಮ್ದಿನ್ - 27
ಅಧಿಕ ಕ್ಯಾಚ್‌ಗಳು
ಎಬಿ ಡಿವಿಲಿಯರ್ಸ್ - 23
ಡೇವಿಡ್ ವಾರ್ನರ್ - 21
ಮಾರ್ಟಿನ್ ಗಪ್ಟಿಲ್ - 19
ಹೆಚ್ಚು ರನೌಟ್
ಡ್ವೇನ್ ಬ್ರಾವೋ - 6
ಬ್ರೆಂಡನ್ ಮೆಕಲಮ್ - 4
ಉಮರ್ ಗುಲ್ - 3
ನಾಯಕತ್ವ ದಾಖಲೆ:
ನಾಯಕನಾಗಿ ಹೆಚ್ಚು ಗೆಲುವು - ಮಹೇಂದ್ರ ಸಿಂಗ್ ಧೋನಿ (21)
ಅತ್ಯಂತ ಯಶಸ್ವಿ ನಾಯಕ - ಡರೆನ್ ಸಮಿ (ನಾಯಕನಾಗಿ 2 ಪ್ರಶಸ್ತಿ ಗೆದ್ದಿರುವುದು)
ಇದನ್ನೂ ಓದಿ: 2007 ರಿಂದ 2022 ರವರೆಗಿನ ಟಿ20 ವಿಶ್ವಕಪ್ ಆವೃತ್ತಿಗಳಲ್ಲಿ ಭಾಗವಹಿಸಿದ ಆಟಗಾರರು ಎಷ್ಟು? - T20 world cup