ETV Bharat / sports

ಶೂಟಿಂಗ್​ನಲ್ಲಿ ಭಾರತಕ್ಕೆ ಮತ್ತೊಂದು ಪದಕದ ನಿರೀಕ್ಷೆ: ಫೈನಲ್​ ಪ್ರವೇಶಿಸಿದ ಸ್ವಪ್ನಿಲ್​ ಕುಸಾಲೆ - Paris olympics 2024 - PARIS OLYMPICS 2024

ಪ್ಯಾರಿಸ್​ ಒಲಿಂಪಿಕ್ಸ್​ನ 50 ಮೀಟರ್ ಏರ್ ರೈಫಲ್ 3 ಪೊಸಿಶನ್ ಫೈನಲ್​ಗೆ ಭಾರತದ ಶೂಟರ್​ ಸ್ವಪ್ನಿಲ್​ ಸಿಂಗ್​ ಅರ್ಹತೆ ಪಡೆದಿದ್ದಾರೆ. ​ ​

ಐಶ್ವರ್ಯಾ ಪ್ರತಾಪ್ ಸಿಂಗ್ ತೋಮರ್ ಮತ್ತು ಸ್ವಪ್ನಿಲ್ ಕುಸಾಲೆ
ಐಶ್ವರ್ಯಾ ಪ್ರತಾಪ್ ಸಿಂಗ್ ತೋಮರ್ ಮತ್ತು ಸ್ವಪ್ನಿಲ್ ಕುಸಾಲೆ (ANI)
author img

By ETV Bharat Karnataka Team

Published : Jul 31, 2024, 4:03 PM IST

ಪ್ಯಾರಿಸ್​​: ಭಾರತದ ಶೂಟರ್ ಸ್ವಪ್ನಿಲ್ ಕುಸಾಲೆ 50 ಮೀಟರ್ ಏರ್ ರೈಫಲ್ 3 ಪೊಸಿಶನ್​ ಅರ್ಹತಾ ಪಂದ್ಯದಲ್ಲಿ 7ನೇ ಸ್ಥಾನ ಪಡೆಯುವ ಮೂಲಕ ಫೈನಲ್​ಗೆ ಪ್ರವೇಶ ಪಡೆದಿದ್ದಾರೆ. ಬುಧವಾರ ನಡೆದ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಸ್ವಪ್ನಿಲ್​ 590 ಅಂಕಗಳನ್ನು ಕಲೆಹಾಕಿದರು. ಅಗ್ರ - 8ರಲ್ಲಿ ಸ್ಥಾನ ಪಡೆದವರು ಮಾತ್ರ ಫೈನಲ್‌ಗೆ ಅರ್ಹತೆ ಪಡೆದುಕೊಳ್ಳುತ್ತಾರೆ. ಉಳಿದಂತೆ ಇದೇ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಭಾರತದ ಮತ್ತೊಬ್ಬ ಶೂಟರ್​ ಐಶ್ವರ್ಯಾ ಪ್ರತಾಪ್ ಸಿಂಗ್ ತೋಮರ್ 589 ಅಂಕಗಳನ್ನು ಗಳಿಸುವ ಮೂಲಕ 11ನೇ ಸ್ಥಾನ ಪಡೆದು ಫೈನಲ್​ಗೆ ಅರ್ಹತೆ ಪಡೆಯುವಲ್ಲಿ ವಿಫಲರಾದರು. ಚೀನಾದ ಲಿಯು ಯುಕುನ್ 594 ಅಂಕ ಗಳಿಸುವ ಮೂಲಕ ಅಗ್ರಸ್ಥಾನ ಪಡೆದರು.

ತ್ರೀ ಪೋಸಿಶನ್​ ಗೇಮ್​: ಈ ಸ್ಪರ್ಧೆಯಲ್ಲಿ ಶೂಟರ್‌ಗಳು ಮೂರು ಭಂಗಿಯಲ್ಲಿ ಶೂಟ್​ ಮಾಡಬೇಕು. ಇವುಗಳಲ್ಲಿ ಕುಗ್ಗಿ ಅಥವಾ ಕುಳಿತುಕೊಂಡು, ಮಲಗಿಕೊಂಡು ಮತ್ತು ನಿಂತುಕೊಂಡು ಗುರಿ ಇಡಬೇಕು.

ಸ್ವಪ್ನಿಲ್​ ದಾಖಲೆ: 28 ವರ್ಷದ ಸ್ವಪ್ನಿಲ್​ 2022ರಲ್ಲಿ ಕೈರೋದಲ್ಲಿ ನಡೆದ ವಿಶ್ವ ಚಾಂಪಿಯನ್​ಶಿಪ್​ನಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು. ಇದರೊಂದಿಗೆ ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಪಡೆದಿದ್ದರು. ಇದಕ್ಕೂ ಮೊದಲು 2015ರಲ್ಲಿ ಕುವೈತನಲ್ಲಿ ನಡೆದ ಏಷ್ಯನ್​ ಶೂಟಿಂಗ್​ ಚಾಂಪಿಯನ್​ಶಿಪ್​ನಲ್ಲಿ 50 ಮೀಟರ್​​ ರೈಫಲ್​ ಪ್ರೋನ್​ 3 ಸ್ಫರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದರು. ಇದಾದ ಬಳಿಕ 59ನೇ ರಾಷ್ಟ್ರೀಯ ಶೂಟಿಂಗ್​ ಚಾಂಪಿಯನ್​ಶಿಪ್​ನಲ್ಲೂ ಗೆಲುವು ಸಾಧಿಸಿದ್ದರು.​

ಫೈನಲ್​ ಪಂದ್ಯ: 50 ಮೀಟರ್​ ರೈಫಲ್​ 3 ಪೊಸಿಶನ್​ ಫೈನಲ್​ ಪಂದ್ಯ ನಾಳೆ ಮಧ್ಯಾಹ್ನ 1 ಗಂಟೆಗೆ ನಡೆಯಲಿದೆ.

ಇದನ್ನೂ ಓದಿ: ವಿಶ್ವದ 4ನೇ ಶ್ರೇಂಯಾಕದ ಶಟ್ಲರ್​ ಮಣಿಸಿದ ಭಾರತದ ಲಕ್ಷ್ಯ ಸೇನ್​: ಪ್ರೀ ಕ್ವಾರ್ಟ್​ರ್​ ಫೈನಲ್​ಗೆ ಲಗ್ಗೆ - Paris olympics 2024

ETV Bharat Logo

Copyright © 2025 Ushodaya Enterprises Pvt. Ltd., All Rights Reserved.