ETV Bharat / sports

ಟೇಬಲ್​ ಟೆನಿಸ್​​: ಸಿಂಗಾಪುರ ವಿರುದ್ಧ ಶ್ರೀಜಾ ಅಕುಲಾಗೆ ಗೆಲುವು: ಪ್ರೀ - ಕ್ವಾರ್ಟರ್​ ಫೈನಲ್​ಗೆ ಪ್ರವೇಶ - paris olympics 2024

ಟೇಬಲ್ ಟೆನ್ನಿಸ್​ ಆಟಗಾರ್ತಿ ಶ್ರೀಜಾ ಅಕುಲಾ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಪ್ರೀ - ಕ್ವಾರ್ಟರ್​ ಫೈನಲ್​ಗೆ ಪ್ರವೇಶ ಪಡೆದಿದ್ದಾರೆ.

ಶ್ರೀಜಾ ಅಕುಲಾ
ಶ್ರೀಜಾ ಅಕುಲಾ (AFP)
author img

By ETV Bharat Sports Team

Published : Jul 31, 2024, 5:14 PM IST

ನವದೆಹಲಿ: ಭಾರತದ ಯುವ ಮಹಿಳಾ ಟೇಬಲ್ ಟೆನ್ನಿಸ್​ ಆಟಗಾರ್ತಿ ಶ್ರೀಜಾ ಅಕುಲಾ ಪ್ಯಾರಿಸ್ ಒಲಿಂಪಿಕ್ಸ್ ದಾಖಲೆ ಬರೆದಿದ್ದಾರೆ. ಅವರು ಬುಧವಾರ ನಡೆದ ಮಹಿಳಾ ಟೇಬಲ್​ ಟೆನ್ನಿಸ್ ಸಿಂಗಲ್ಸ್‌ ಸ್ಪರ್ಧೆಯಲ್ಲಿ ಸಿಂಗಾಪುರದ ಪ್ರತಿಸ್ಪರ್ಧಿ ಜಿಯಾನ್ ಜೆಂಗ್ ಅವರ ವಿರುದ್ಧ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ 16ನೆ ಸುತ್ತಿಗೆ ಪ್ರವೇಶವನ್ನೂ ಪಡೆದಿದ್ದಾರೆ.

26 ವರ್ಷದ ಶ್ರೀಜಾ ತಮ್ಮ ಹುಟ್ಟಿದ ದಿನವಾದ ಇಂದು ಒಲಿಂಪಿಕ್ಸ್‌ನ ಪ್ರಿ-ಕ್ವಾರ್ಟರ್‌ಗೆ ಪ್ರವೇಶಿಸಿದ ಎರಡನೇ ಭಾರತೀಯ ಟೇಬಲ್ ಟೆನಿಸ್ ಆಟಗಾರ್ತಿ ಎಂಬ ಸಾಧನೆಯನ್ನೂ ಮಾಡಿದ್ದಾರೆ. ಇದಕ್ಕೂ ಮೊದಲು ಮಣಿಕಾ ಬಾತ್ರಾ ಕೆಲವು ದಿನಗಳ ಹಿಂದೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಈ ಮೈಲಿಗಲ್ಲು ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದರು. ಇದೀಗ ಶ್ರೀಜಾ ಕೂಡ ಅವರ ಹಾದಿಯಲ್ಲೇ ಸಾಗುತ್ತಿದ್ದಾರೆ.

ಈ ಪಂದ್ಯದಲ್ಲಿ ಶ್ರೀಜಾ ಅಕುಲಾ ಭರ್ಜರಿ ಕಮ್​ಬ್ಯಾಕ್​ ಮಾಡಿದರು. ಮೊದಲ ಸುತ್ತಿನಲ್ಲಿ ಝೆಂಗ್‌ ವಿರುದ್ದ ಸೋಲನುಭವಿಸಿದ್ದ ಶ್ರೀಜಾ ಎರಡನೇ ಸುತ್ತಿನಲ್ಲಿ ಪ್ರತಿ ದಾಳಿ ನಡೆಸುವ ಮೂಲಕ ಎದುರಾಳಿ ಗೆಲುವಿಗೆ ಅವಕಾಶ ನೀಡಲಿಲ್ಲ. ಇಲ್ಲಿಂದ ಪ್ರಾಬಲ್ಯ ಮೆರೆಯಲು ಆರಂಭಿಸಿದ ಶ್ರೀಜಾ ಮೂರನೇ ಸೆಟ್​ನಲ್ಲಿ ಏಕಪಕ್ಷೀಯವಾಗಿ ಜೆಂಕ್ ಅವರನ್ನು ಮಣಿಸಿದರು. ಅಂತಿಮಾವಗಿ ಶ್ರೀಜಾ ಸಿಂಗಾಪುರದ ಜಿಯಾನ್ ಜೆಂಗ್ ವಿರುದ್ಧ 9-11, 12-10, 11-4, 11-5, 10-12, 12-10 ಅಂತರದಿಂದ ಗೆಲುವು ಸಾಧಿಸಿದರು. ಇದರೊಂದಿಗೆ ಶ್ರೀಜಾ ಅಕುಲಾ ಅವರು 16ನೇ ಸುತ್ತಿಗೆ ಅಂದರೆ ಪ್ರಿ-ಕಾರ್ಟರ್ ಫೈನಲ್‌ಗೆ ಪ್ರವೇಶ ಪಡೆದುಕೊಂಡರು.

ಇದನ್ನೂ ಓದಿ: ಶೂಟಿಂಗ್​ನಲ್ಲಿ ಭಾರತಕ್ಕೆ ಮತ್ತೊಂದು ಪದಕದ ನಿರೀಕ್ಷೆ: ಫೈನಲ್​ ಪ್ರವೇಶಿಸಿದ ಸ್ವಪ್ನಿಲ್​ ಕುಸಾಲೆ - Paris olympics 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.