ಹೈದರಾಬಾದ್: ಭಾರತ ಕ್ರಿಕೆಟ್ ತಂಡದ ಆರಂಭಿಕ ಯುವ ಬ್ಯಾಟರ್ ಶುಭಮನ್ ಗಿಲ್ ಟೆಸ್ಟ್ ಕ್ರಿಕೆಟ್ನಲ್ಲಿ 1,500 ರನ್ಗಳನ್ನು ಪೂರೈಸಿದ್ದಾರೆ. ಬಾಂಗ್ಲಾದೇಶ ವಿರುದ್ಧ ಚೆನ್ನೈನ ಎಂಎ ಚಿದಂಬರಂ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ ಶೂನ್ಯಕ್ಕೆ ಔಟ್ ಆಗಿದ್ದ ಗಿಲ್, ಎರಡನೇ ಇನ್ನಿಂಗ್ಸ್ನಲ್ಲಿ 8 ರನ್ಗಳನ್ನು ಕಲೆ ಹಾಕುತ್ತಿದ್ದಂತೆ ಈ ಮೈಲಿಗಲ್ಲು ತಲುಪಿದರು.
1,500 ರನ್ಗಳನ್ನು ಪೂರೈಸಲು ಗಿಲ್ 47 ಇನ್ನಿಂಗ್ಸ್ಗಳನ್ನು ತೆಗೆದುಕೊಂಡಿದ್ದಾರೆ. 26 ಡಿಸೆಂಬರ್ 2020ರಂದು ಬಾರ್ಡರ್ ಗವಾಸ್ಕರ್ ಟ್ರೋಫಿ ಮೂಲಕ ಈ ಬ್ಯಾಟರ್ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ನಲ್ಲಿ ನಡೆದ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ 45 ಮತ್ತು ಎರಡನೇ ಇನ್ನಿಂಗ್ಸ್ನಲ್ಲಿ 35 ರನ್ಗಳ ಕಾಣಿಕೆ ನೀಡಿದ್ದರು.
ಈ ಪಂದ್ಯವನ್ನು ಭಾರತ 8 ವಿಕೆಟ್ಗಳಿಂದ ಗೆದ್ದುಕೊಂಡಿತ್ತು. ನಂತರ ಬ್ರಿಸ್ಬೇನ್ನ ಗಬ್ಬಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ 91 ರನ್ಗಳನ್ನು ಸಿಡಿಸಿದ್ದ ಗಿಲ್ 9 ರನ್ಗಳಿಂದ ಶತಕ ವಂಚಿತಾರಗಿದ್ದರು. ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಗಿಲ್ 51.89 ಸರಾಸರಿಯೊಂದಿಗೆ 259 ರನ್ಗಳನ್ನು ಗಳಿಸಿದ್ದರು. ಈ ಸರಣಿಯನ್ನು ಭಾರತ 2-1 ಅಂತರದಿಂದ ಗೆದ್ದುಕೊಂಡಿತ್ತು.
ಒಟ್ಟು 26 ಟೆಸ್ಟ್ ಪಂದ್ಯಗಳನ್ನು ಆಡಿರುವ ಗಿಲ್ ಏಷ್ಯದ ಹೊರಗೆ ನಡೆದ ಟೆಸ್ಟ್ ಪಂದ್ಯಗಳಲ್ಲಿ ಒಂದೇ ಒಂದು ಶತಕ ಸಿಡಿಸಲು ಇದೂವರೆಗೂ ಸಾಧ್ಯವಾಗಿಲ್ಲ. 128 ಅತ್ಯುತ್ತಮ ಟೆಸ್ಟ್ ಸ್ಕೋರ್ ಆಗಿದೆ. ಉಳಿದಂತೆ ಏಕದಿನ ಸ್ವರೂಪದಲ್ಲಿ ಒಟ್ಟು 47 ಪಂದ್ಯಗಳನ್ನು ಆಡಿ 2,328 ರನ್ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ 1 ದ್ವಿಶತಕ, 6 ಶತಕ ಮತ್ತು 13 ಅರ್ಧಶತಕಗಳು ಸೇರಿವೆ. 208 ಹೈಸ್ಕೋರ್ ಆಗಿದೆ. ಟಿ20ಯಲ್ಲಿ 21 ಪಂದ್ಯಗಳಲ್ಲಿ 1 ಶತಕ ಮತ್ತು 3 ಅರ್ಧಶತಕದೊಂದಿಗೆ 578 ರನ್ಗಳನ್ನು ಕಲೆ ಹಾಕಿದ್ದಾರೆ.
ಇದನ್ನೂ ಓದಿ: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಮತ್ತೊಂದು ದಾಖಲೆ ಬರೆದ ಜಸ್ಪ್ರೀತ್ ಬುಮ್ರಾ! - Jasprit Bumrah