ETV Bharat / sports

IPL: ಹೈದರಾಬಾದ್‌ ವಿರುದ್ಧ ರಸೆಲ್, ರಾಣಾ ಅಬ್ಬರ; ಕೆಕೆಆರ್‌ಗೆ 4 ರನ್‌ಗಳ ರೋಚಕ ಗೆಲುವು - Kolkata Knight Riders - KOLKATA KNIGHT RIDERS

KKR vs SRH: ಸನ್ ರೈಸರ್ಸ್ ಹೈದರಾಬಾದ್​ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ನೀಡಿದ ಬೃಹತ್ ಸ್ಕೋರ್ ಬೆನ್ನಟ್ಟುವಲ್ಲಿ ವಿಫಲವಾಯಿತು. ಹೆನ್ರಿಕ್ ಕ್ಲಾಸೆನ್ ಬಿರುಸಿನ ಇನ್ನಿಂಗ್ಸ್ ಫಲ ನೀಡಲಿಲ್ಲ.

Etv Bharat
Etv Bharat
author img

By PTI

Published : Mar 24, 2024, 7:27 AM IST

ಕೋಲ್ಕತ್ತಾ: ಈಡನ್ ಗಾರ್ಡನ್ಸ್‌ನಲ್ಲಿ ಶನಿವಾರ ರಾತ್ರಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಹಾಗೂ ಸನ್‌ರೈಸರ್ಸ್ ಹೈದರಾಬಾದ್ (SRH) ನಡುವಿನ ಐಪಿಎಲ್ ಪಂದ್ಯ ಸಾಕಷ್ಟು ರೋಚಕತೆಯಿಂದ ಕೂಡಿತ್ತು. ಹರ್ಷಿತ್ ರಾಣಾ ಅವರ ಅಂತಿಮ ಓವರ್ ಬೌಲಿಂಗ್ ಮತ್ತು ಆಂಡ್ರೆ ರಸೆಲ್ ಅವರ ಅದ್ಭುತ ಅರ್ಧಶತಕದ ನೆರವಿನಿಂದ ಕೋಲ್ಕತ್ತಾ ತಂಡ, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ರೋಚಕ ಗೆಲುವು ಸಾಧಿಸಿತು.

ಪಂದ್ಯದಲ್ಲಿ ಕೆಕೆಆರ್ ಮೊದಲು ಬ್ಯಾಟ್ ಮಾಡಿತು. ರಸೆಲ್ ಬಿರುಸಿನ ಇನ್ನಿಂಗ್ಸ್‌ ಬಲದಿಂದ ತಂಡ 208 ರನ್ ಗಳಿಸಿತು. ಇದಕ್ಕುತ್ತರವಾಗಿ ಚೇಸಿಂಗ್ ಆರಂಭಿಸಿದ ಸನ್ ರೈಸರ್ಸ್ 16 ಓವರ್​ಗಳಲ್ಲಿ ಕೇವಲ 133 ರನ್ ಗಳಿಸಿತು. ಆದರೆ ಕೊನೆಯ ನಾಲ್ಕು ಓವರ್‌ಗಳಲ್ಲಿ ಗೆಲ್ಲಲು 20ರ ಸರಾಸರಿಯಲ್ಲಿ ರನ್ ಗಳಿಸಬೇಕಿತ್ತು. ಹೆನ್ರಿಚ್ ಕ್ಲಾಸೆನ್ ಹೊಡಿಬಡಿ ಆಟಕ್ಕೆ ಮುಂದಾದರು. ಏಕಾಂಗಿಯಾಗಿ ಇಡೀ ಪಂದ್ಯವನ್ನು ಅಂತಿಮ ಹಂತದವರೆಗೆ ತೆಗೆದುಕೊಂಡು ಹೋದರು.

ಕೊನೆಯ ಐದು ಎಸೆತಗಳಲ್ಲಿ ಹೈದರಾಬಾದ್ ಕೇವಲ ಏಳು ರನ್ ಗಳಿಸಬೇಕಿತ್ತು. ಈ ಸಂದರ್ಭದಲ್ಲಿ ಶಹಬಾಜ್ ಮತ್ತು ಕ್ಲಾಸೆನ್ ಔಟಾದರು. ಕ್ಲಾಸೆನ್ 29 ಎಸೆತಗಳಲ್ಲಿ 8 ಸಿಕ್ಸರ್‌ಗಳ ನೆರವಿನಿಂದ 63 ರನ್ ಪೇರಿಸಿದರು. ಆದರೆ, ತಂಡವನ್ನು ಗೆಲುವಿನ ದಡ ಮುಟ್ಟಿಸಲು ಸಾಧ್ಯವಾಗಲಿಲ್ಲ.

ಟಾಸ್ ಗೆದ್ದ ನಂತರ ಎಸ್​ಆರ್​ಹೆಚ್​​ ನಾಯಕ ಪ್ಯಾಟ್ ಕಮ್ಮಿನ್ಸ್ ಬೌಲಿಂಗ್ ಆಯ್ಕೆ ಮಾಡಿದರು. ಆರಂಭದಲ್ಲಿ ತಂಡದ ಬೌಲರ್‌ಗಳು ಕೋಲ್ಕತ್ತಾ ಬ್ಯಾಟರ್‌ಗಳನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಆದರೆ ರಸೆಲ್ ಬಿರುಗಾಳಿ ಆಟದಿಂದ ಕೋಲ್ಕತ್ತಾ ರನ್ ಶಿಖರ ಕಟ್ಟಿತು. 208 ರನ್‌ ಗುರಿ ಬೆನ್ನಟ್ಟಿದ ಸನ್‌ರೈಸರ್ಸ್ ಉತ್ತಮ ಆರಂಭ ಪಡೆದರೂ, ದೊಡ್ಡ ಸ್ಕೋರ್ ಸಾಧಿಸುವ ಒತ್ತಡದಲ್ಲಿ ತಂಡ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಸಾಗಿತು. ಕೊನೆಯ ಹಂತದಲ್ಲಿ ಕ್ಲಾಸೆನ್ ಅಬ್ಬರದಾಟವು ತಂಡಕ್ಕೆ ಭರವಸೆ ನೀಡಿತು. ಅಂತಿಮವಾಗಿ ಎಸ್​ಆರ್​ಹೆಚ್ 4 ರನ್‌ಗಳ ಅಂತರದ ಸೋಲು ಎದುರಿಸಬೇಕಾಯಿತು.

ಇದನ್ನೂ ಓದಿ: ಐಪಿಎಲ್​ 2024: ಡೆಲ್ಲಿ ವಿರುದ್ಧ ಶುಭಾರಂಭ ಮಾಡಿದ ಪಂಜಾಬ್​: ನಾಲ್ಕು ವಿಕೆಟ್​ಗಳ ಭರ್ಜರಿ ಜಯ - IPL 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.