ETV Bharat / sports

ಮಳೆ ಭೀತಿ ಪಂದ್ಯದಲ್ಲಿ ಆರ್​ಸಿಬಿಯಿಂದ ರನ್ ಸುರಿಮಳೆ: ಸಿಎಸ್​ಕೆಗೆ 219 ರನ್​​ಗಳ​ ಬೃಹತ್​ ಗುರಿ - RCB vs CSK match - RCB VS CSK MATCH

ಬೆಂಗಳೂರು ವಿರುದ್ಧದ ಮಹತ್ವದ ಪಂದ್ಯದಲ್ಲಿ ಚೆನ್ನೈ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡಿದೆ.

ಆರ್​ಸಿಬಿ ವಿರುದ್ಧ ಟಾಸ್​ ಗೆದ್ದ ಸಿಎಸ್​ಕೆ ಬೌಲಿಂಗ್​ ಆಯ್ಕೆ
ಆರ್​ಸಿಬಿ ವಿರುದ್ಧ ಟಾಸ್​ ಗೆದ್ದ ಸಿಎಸ್​ಕೆ ಬೌಲಿಂಗ್​ ಆಯ್ಕೆ (video grab)
author img

By ETV Bharat Karnataka Team

Published : May 18, 2024, 7:17 PM IST

Updated : May 18, 2024, 10:06 PM IST

ಬೆಂಗಳೂರು: ಕ್ರಿಕೆಟ್​ ಲೋಕದ ಗಮನ ಸೆಳೆದಿರುವ ಐಪಿಎಲ್​ನ ಅತಿ ರೋಚಕ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮತ್ತು ಚೆನ್ನೈ ಸೂಪರ್​ ಕಿಂಗ್ಸ್​ ತಂಡಗಳು ಸೆಣಸಾಡುತ್ತಿವೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್​ ಮಾಡಿದ ಆರ್​ಸಿಬಿ 20 ಓವರ್​ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 218 ರನ್​ಗಳ ಬೃಹತ್​ ಮೊತ್ತ ದಾಖಲಿಸಿದೆ.

ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದು ಆಡುತ್ತಿರುವ ಆಟಗಾರರು ಪ್ರತಿ ಹಂತದಲ್ಲೂ ಮೇಲುಗೈ ಸಾಧಿಸಿದರು. ತಂಡದ ಆಪತ್ಬಾಂಧವ ವಿರಾಟ್​ ಕೊಹ್ಲಿ ಎಂದಿನಂತೆ ಬಿರುಸಾದ ಬ್ಯಾಟಿಂಗ್​ ಮೂಲಕ 29 ಎಸೆತಗಳಲ್ಲಿ 47 ರನ್​ ಬಾರಿಸಿದರು. ನಾಯಕ ಪಾಫ್​ ಡು ಪ್ಲೆಸಿಸ್​ ನಿಧಾನವಾಗಿ ಬ್ಯಾಟ್​ ಆರಂಭಿಸಿದರೂ, 39 ಎಸೆತಗಳಲ್ಲಿ 54 ರನ್​ ಗಳಿಸಿದರು. ಇಬ್ಬರೂ ಸೇರಿ ಮೊದಲ ವಿಕೆಟ್​ಗೆ 78 ರನ್​ ಸೇರಿಸಿ ಭದ್ರ ಬುನಾದಿ ಹಾಕಿದರು.

ಅರ್ಧಶತಕ ಹೊಸ್ತಿಲಲ್ಲಿ ವಿರಾಟ್​ ಔಟಾದ ಬಳಿಕ ಬಂದ ರಜ್​ತ ಪಾಟೀದಾರ್​ ಮತ್ತೊಮ್ಮೆ ಅಬ್ಬರಿಸಿ 41 ರನ್​ ಗಳಿಸಿದರೆ, ಕ್ಯಾಮರೂನ್​ ಗ್ರೀನ್​ ಔಟಾಗದೆ 38, ದಿನೇಶ್​ ಕಾರ್ತಿಕ್​ 14, ಗ್ಲೆನ್​ ಮ್ಯಾಕ್ಸ್​ವೆಲ್​ 16 ರನ್​ ಗಳಿಸಿ ತಂಡ ಬೃಹತ್​​ ಮೊತ್ತ ದಾಖಲಿಸಲು ನೆರವಾದರು.

ಅಡ್ಡಿಯಾಗಿದ್ದ ಮಳೆ: ಪಂದ್ಯ ಆರಂಭವಾಗಿ ಬ್ಯಾಟಿಂಗ್​ ಮಾಡುತ್ತಿದ್ದಾಗ ಆರ್​ಸಿಬಿಗೆ ಮಳೆರಾಯ ಅಲ್ಪ ಅಡ್ಡಿ ಉಂಟು ಮಾಡಿದ್ದ. 3 ಓವರ್​ಗಳಲ್ಲಿ 31 ರನ್​ ಗಳಿಸಿದ್ದಾಗ ಮಳೆ ಬಂದಿತು. ಇದರಿಂದ ಆಟ 20 ನಿಮಿಷ ನಿಂತಿತು. ಮಳೆ ನಿಂತ ಬಳಿಕ ಆರ್​ಸಿಬಿ ಬ್ಯಾಟರ್​ಗಳು ರನ್​ ಮಳೆ ಸುರಿಸಿದರು.

ಮಳೆ ಭೀತಿ ಇರುವ ಪಂದ್ಯದಲ್ಲಿ ಸಿಎಸ್​ಕೆ ನಾಯಕ ಋತುರಾಜ್​ ಗಾಯಕ್ವಾಡ್​ ಬ್ಯಾಟಿಂಗ್ ಮೊರೆ ಹೋಗದೇ ಚಾಣಾಕ್ಷತನ ಮೆರೆದರು. ಇತ್ತಂಡಗಳಿಗೂ ಗೆಲುವು ಅನಿವಾರ್ಯವಾಗಿರುವ ಪಂದ್ಯದಲ್ಲಿ ರೋಚಕತೆ ಸಿಗುವುದು ಪಕ್ಕಾ. ಮೇ 18 ರಂದು ನಡೆದ ಈವರೆಗಿನ ಹಣಾಹಣಿಯಲ್ಲಿ ಆರ್​ಸಿಬಿ ತಂಡ ಸೋತೇ ಇಲ್ಲ. ಇದೇ ದಾಖಲೆಯನ್ನು ಮುಂದುವರಿಸಿದಲ್ಲಿ ಟ್ರೋಫಿ ಎತ್ತುವ ಕೋಟಿ ಕಂಗಳ ಕನಸುಗಳಿಗೆ ಇನ್ನಷ್ಟು ಹತ್ತಿರವಾಗಲಿದೆ.

ತಂಡಗಳು ಇಂತಿವೆ - ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟಿದಾರ್, ಕ್ಯಾಮರೂನ್ ಗ್ರೀನ್, ಮಹಿಪಾಲ್ ಲೊಮ್ರೊರ್, ದಿನೇಶ್ ಕಾರ್ತಿಕ್, ಕರಣ್​ ಶರ್ಮಾ, ಯಶ್ ದಯಾಲ್, ಲೂಕಿ ಫರ್ಗುಸನ್, ಮೊಹಮ್ಮದ್ ಸಿರಾಜ್.

ಚೆನ್ನೈ ಸೂಪರ್ ಕಿಂಗ್ಸ್: ರಚಿನ್ ರವೀಂದ್ರ, ಋತುರಾಜ್ ಗಾಯಕ್ವಾಡ್ (ನಾಯಕ), ಡೇರಿಯಲ್ ಮಿಚೆಲ್, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಎಂಎಸ್ ಧೋನಿ, ಮಿಚೆಲ್ ಸ್ಯಾಂಟ್ನರ್, ಶಾರ್ದೂಲ್ ಠಾಕೂರ್, ತುಷಾರ್ ದೇಶಪಾಂಡೆ, ಸಮರ್ಜೀತ್ ಸಿಂಗ್, ಮಹೇಶ್ ತೀಕ್ಷಣ.

ಇದನ್ನೂ ಓದಿ: ಆರ್​ಸಿಬಿ - ಸಿಎಸ್​ಕೆ ಪಂದ್ಯ: ಸಂಜೆ 7 ರಿಂದ ಮಳೆ ಬರುವ ಸಾಧ್ಯತೆ, ಪಂದ್ಯದ ಆರಂಭ ಸಮಯ 7.30! - CSK vs RCB

Last Updated : May 18, 2024, 10:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.