ETV Bharat / sports

ಆರ್​ಸಿಬಿ ವಿರುದ್ಧ ರಾಹುಲ್​ ಪಡೆಗೆ 28 ರನ್​ ಗೆಲುವು: ಬೆಂಗಳೂರಿಗೆ ಮೂರನೇ ಸೋಲು - IPL 2024

ಇಂಡಿಯನ್​ ಪ್ರೀಮಿಯರ್​ ಲೀಗ್​ ಟೂರ್ನಿಯ 15ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು 28 ರನ್​ಗಳ ಸೋಲು ಕಂಡಿದೆ.

Royal Challengers Bengaluru
ರಾಯಲ್​ ಚಾಲೆಂಜರ್ಸ್​ ಬೆಂಗಳೂರು
author img

By ETV Bharat Karnataka Team

Published : Apr 3, 2024, 6:21 AM IST

Updated : Apr 3, 2024, 7:26 AM IST

ಬೆಂಗಳೂರು: ಬ್ಯಾಟಿಂಗ್​ ಹಾಗೂ ಬೌಲಿಂಗ್​ನಲ್ಲಿ ಸಾಧಾರಣ ಪ್ರದರ್ಶನ ತೋರಿದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ತವರಿನಲ್ಲಿ ಮತ್ತೊಂದು ಸೋಲು ಕಂಡಿದೆ. 182 ರನ್​ಗಳ​ ಗುರಿ ಬೆನ್ನಟ್ಟಿದ ಆರ್​ಸಿಬಿ 28 ರನ್​ಗಳಿಂದ ಮುಖಭಂಗ ಅನುಭವಿಸಿದೆ. ಇದು ಬೆಂಗಳೂರು ತಂಡಕ್ಕೆ ಮೂರನೇ ಹಿನ್ನಡೆಯಾಗಿದೆ.

ಮಂಗಳವಾರ ರಾತ್ರಿ ನಡೆದ ಐಪಿಎಲ್​ನ 15ನೇ ಪಂದ್ಯದಲ್ಲಿ ಟಾಸ್​ ಗೆದ್ದ ರಾಯಲ್​ ಚಾಲೆಂಜರ್ಸ್ ತಂಡ ಲಕ್ನೋ ಸೂಪರ್ ಜೈಂಟ್ಸ್​ಗೆ ಮೊದಲು ಬ್ಯಾಟಿಂಗ್​ಗೆ ಆಹ್ವಾನಿಸಿತು. ಕೆಎಲ್​ ರಾಹುಲ್ ಪಡೆ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್​ಗೆ ಕ್ವಿಂಟನ್​ ಡಿ ಕಾಕ್ (81)​ ಹಾಗೂ ರಾಹುಲ್​ 53 ರನ್​ ಸೇರಿಸಿದರು. ಈ ಹಂತದಲ್ಲಿ 20 ರನ್​ ಬಾರಿಸಿದ್ದ ಕೆಎಲ್ ಗ್ಲೆನ್​​​ ಮಾಕ್ಸ್​ವೆಲ್​ ಬೌಲಿಂಗ್​ನಲ್ಲಿ ವಿಕೆಟ್​ ಒಪ್ಪಿಸಿದರು. ಬಳಿಕ ದೇವದತ್ತ ಪಡಿಕ್ಕಲ್​ ಕೂಡ ಹೆಚ್ಚು ಪರಿಣಾಮ ಬೀರದೆ ಕೇವಲ 6 ರನ್​ಗೆ ಪೆವಿಲಿಯನ್​ಗೆ ಮರಳಿದರು.

ಈ ನಡುವೆ ಉತ್ತಮ ಆಟವಾಡಿದ ಕ್ವಿಂಟನ್​ ಡಿ ಕಾಕ್ ಭರ್ಜರಿ ಅರ್ಧಶತಕ (81) ಬಾರಿಸಿ ಆರ್​ಸಿಬಿ ಬೌಲರ್​​ಗಳನ್ನು ಕಾಡಿದರು. 8 ಬೌಂಡರಿ ಹಾಗೂ 5 ಸಿಕ್ಸರ್​ ಸಿಡಿಸಿದ ಕ್ವಿಂಟನ್​ ಟಾಪ್ಲಿ ಬೌಲಿಂಗ್​​ನಲ್ಲಿ ಔಟಾದರು. ಮಾರ್ಕಸ್​ ಸ್ಟೋಯ್ನಿಸ್​ 24 ಹಾಗೂ ಅಂತಿಮ ಹಂತದಲ್ಲಿ 21 ಎಸೆತಗಳಲ್ಲಿ 40 ರನ್​ ಚಚ್ಚಿದ ನಿಕೋಲಸ್​ ಪೂರನ್​ ಸೂಪರ್ ಜೈಂಟ್ಸ್ ಮೊತ್ತವನ್ನು 181 ರನ್​ಗೆ ಹಿಗ್ಗಿಸಿದರು. ಬೆಂಗಳೂರು ಪರ ಮ್ಯಾಕ್ಸ್​ವೆಲ್​ 23 ರನ್​ಗೆ 2 ವಿಕೆಟ್​ ಪಡೆದರು.

182 ರನ್​ ಗುರಿ ಬೆನ್ನಟ್ಟಿದ ರಾಯಲ್​ ಚಾಲೆಂಜರ್ಸ್ ಉತ್ತಮ ಆರಂಭವನ್ನೇ ಪಡೆಯಿತು. ವಿರಾಟ್​ ಕೊಹ್ಲಿ (22) ಹಾಗೂ ನಾಯಕ ಫಾಫ್​ ಡುಪ್ಲೆಸಿಸ್​ (19) 40 ರನ್​ ಸೇರಿಸಿದರು. ಆದರೆ, ಇವರಿಬ್ಬರ ವಿಕೆಟ್​ ಪತನದ ಬಳಿಕ ತಂಡವು ಕುಸಿತದ ಹಾದಿ ಹಿಡಿಯಿತು. ಕೊಹ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿ ಪಡಿಕ್ಕಲ್​ಗೆ ಕ್ಯಾಚ್​ ನೀಡಿದರೆ, ಕೆಲಹೊತ್ತಲ್ಲೇ ಡುಪ್ಲೆಸಿಸ್ ಕೂಡ​ ಪಡಿಕ್ಕಲ್​ ಅವರ ಅದ್ಭುತ ಫೀಲ್ಡಿಂಗ್​ನಿಂದ ರನೌಟ್​ ಬಲೆಗೆ ಬಿದ್ದರು.

ಇದಾದ ಬೆನ್ನಲ್ಲೇ ಯುವ ವೇಗಿ ಮಯಾಂಕ್​ ಯಾದವ್​ ಮ್ಯಾಕ್ಸ್​ವೆಲ್​ರನ್ನು ಶೂನ್ಯಕ್ಕೆ ಹಾಗೂ ಗ್ರೀನ್​ರನ್ನು 8 ರನ್​ಗೆ ಬೌಲ್ಡ್ ಮಾಡುವ ಮೂಲಕ ಆರ್​ಸಿಬಿಗೆ ಡಬಲ್​ ಶಾಕ್​ ನೀಡಿದರು. ಬಳಿಕ ​ಚೇತರಿಕೆ ಕಾಣದ ಬೆಂಗಳೂರು ತಂಡದ ರನ್​ಗತಿ ಇಳಿಮುಖವಾಯಿತು. ರನ್​ ಗಳಿಕೆಗೆ ಪರದಾಡಿದ ಅನುಜ್​ ರಾವತ್​ 21 ಎಸೆತಗಳಲ್ಲಿ 11 ರನ್​ ಬಾರಿಸಿ ಔಟಾದರು.

ಕೆಲ ಆಕರ್ಷಕ ಹೊಡೆತಗಳ ಮೂಲಕ ಭರವಸೆ ಮೂಡಿಸಿದ ರಜತ್​ ಪಟಿದಾರ್​ ಕೂಡ 29 ರನ್​ಗೆ ವಿಕೆಟ್​ ಒಪ್ಪಿಸಿದರು. ಬಳಿಕ ಯುವ ಬ್ಯಾಟರ್​ ಮಹಿಪಾಲ್​ ಲೊಮ್ರೋರ್ (13 ಎಸೆತಗಳಲ್ಲಿ 33)​ ಅಬ್ಬರದ ಬ್ಯಾಟಿಂಗ್​ ತೋರಿದರೂ ಕೂಡ ತಂಡವನ್ನು ಗೆಲುವಿನ ಸಮೀಪ ಕೊಂಡೊಯ್ಯಲಾಗಲಿಲ್ಲ. ಫಿನಿಶರ್​​ ದಿನೇಶ್​ ಕಾರ್ತಿಕ್​ 4 ರನ್​ಗೆ ವಿಕೆಟ್​ ಒಪ್ಪಿಸುತ್ತಿದ್ದಂತೆ ತಂಡದ ಸೋಲು ಖಚಿತವಾಯಿತು. ಅಂತಿಮವಾಗಿ ಆರ್​ಸಿಬಿ 19.4 ಓವರ್​ಗಳಲ್ಲಿ 153 ರನ್​ಗಳಿಗೆ ಆಲೌಟ್​ ಆಗುವ ಮೂಲಕ 28 ರನ್​ಗಳ ಸೋಲು ಅನುಭವಿಸಿತು. ಬೆಂಗಳೂರು ತಂಡ 4 ಪಂದ್ಯಗಳಲ್ಲಿ ಮೂರು ಸೋಲುಗಳೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.

ಇದನ್ನೂ ಓದಿ: ಕೋಲ್ಕತ್ತಾ​-ರಾಜಸ್ಥಾನ​ ಪಂದ್ಯ ಒಂದಿನ ಹಿಂದ, ಗುಜರಾತ್​-ಡೆಲ್ಲಿ ಪಂದ್ಯ ಒಂದಿನ ಮುಂದ

Last Updated : Apr 3, 2024, 7:26 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.