ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿರುವ ಭಾರತದ ಏಕೈಕ ರೋಯಿಂಗ್ ಆಟಗಾರ ಬಲರಾಜ್ ಪನ್ವಾರ್, ಶನಿವಾರ ನಡೆದ ಪುರುಷರ ಸಿಂಗಲ್ ರೋಯಿಂಗ್ ಈವೆಂಟ್‌ನ ಮೊದಲ ಹೀಟ್‌ನಲ್ಲಿ (ಆರಂಭಿಕ ರೇಸ್) ನಾಲ್ಕನೇ ಸ್ಥಾನ ಗಳಿಸಿ ರಿಪಿಚೇಜ್ ಸುತ್ತಿಗೆ ಎಂಟ್ರಿ ಪಡೆದಿದ್ದಾರೆ. 25 ವರ್ಷದ ಬಾಲರಾಜ್ 7:7.11 ನಿಮಿಷಗಳಲ್ಲಿ ಗುರಿ ತಲುಪಿದ್ದಾರೆ.
ಇದಕ್ಕೂ ಮೊದಲು ನ್ಯೂಜಿಲೆಂಡ್‌ನ ಥಾಮಸ್ ಮೆಕಿಂತೋಷ್ 6:55.92 ನಿಮಿಷ, ಸ್ಟೆಫಾನೋಸ್ ಆಂಟೊಸ್ಕೋಸ್ 7:1.79 ನಿಮಿಷ ಮತ್ತು ಅಬ್ದೆಲ್‌ಖಲೆಕ್ ಎಲ್ಬಾನಾ 7: 5.06 ನಿಮಿಷಗಳಲ್ಲಿ ಗುರಿ ತಲುಪಿದರು. ಅಗ್ರ ಮೂರು ಆಟಗಾರರು ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದರೆ 4ನೇ ಸ್ಥಾನ ಪಡೆದ ಬಾಲರಾಜ್ ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಲು ಸಾಧ್ಯವಾಗಿಲ್ಲ. ಆದರೆ, ಅವರಿಗೆ ಮತ್ತೊಂದು ಅವಕಾಶ ಇದೆ.
ಪಂದ್ಯ ಆರಂಭದಲ್ಲಿ ಬಲರಾಜ್ ಉತ್ತಮ ಪ್ರದರ್ಶನ ತೋರಿದರು. ಆರಂಭದಲ್ಲಿ ಮೆಕಿಂತೋಷ್ ವಿರುದ್ಧ ಮುನ್ನಡೆ ಸಾಧಿಸಿದರು. ನಂತರ ಭಾರತದ ರೋವರ್ ಮೂರನೇ ಸ್ಥಾನದಲ್ಲಿದ್ದರು, ಆದರೆ ಎಲ್ಬನ್ನಾ ತಕ್ಷಣವೇ ಅವರನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ತಲುಪಿದರು. ಎಲ್ಬನ್ನಾ 1:41.94 ನಿಮಷದಲ್ಲಿ 500 ಮೀಟರ್‌ಗಳ ಮೊದಲ ಹರ್ಡಲ್ಸ್ ಅನ್ನು ಪೂರ್ಣಗೊಳಿಸಿದರೇ ಬಾಲರಾಜ್ 1:43.53 ನಿಮಿಷದಲ್ಲಿ ಪೂರ್ಣಗೊಳಿಸಿದರು. ಭಾರತೀಯ ನಾವಿಕ ಈಜಿಪ್ಟಿನ ಮೇಲೆ ಸಂಪೂರ್ಣ ಒತ್ತಡ ಹೇರುತ್ತಿದ್ದರು.
ಇದರ ನಂತರ, ಬಾಲರಾಜ್ ತನ್ನ ವೇಗವನ್ನು ಹೆಚ್ಚಿಸಲು ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದರಾದರೂ ಮ್ಯಾಕಿಂತೋಷ್ ಬಾಲರಾಜ್ಗೆ ಮುಂದೆ ಸಾಗಲು ಸಾಧ್ಯವಾಗದೇ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟರು. ಎಲ್ಬನ್ನಾ ಮೊದಲ ಸ್ಥಾನದಲ್ಲಿ ಪಂದ್ಯವನ್ನು ಕೊನೆಗೊಳಿಸಿದರು. ನಂತರ ಸ್ಥಾನದಲ್ಲಿ ಸ್ಟೆಫಾನೋಸ್ ಆಂಟೊಸ್ಕೋಸ್, ಅಬ್ದೆಲ್‌ಖಲೆಕ್ ಎಲ್ಬಾನಾ ಇದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ 2024ರ ಭಾರತವು ಕೇವಲ ಒಬ್ಬ ರೋವರ್ ಅನ್ನು ಮಾತ್ರ ಕಣಕ್ಕಿಳಿಸಿದೆ.
ಮತ್ತೊಂದ ಅವಕಾಶ: ಬಾಲರಾಜ್ ಈಗ ರಿಪಿಚೇಜ್ ಸುತ್ತಿನಲ್ಲಿ ಪಾಲ್ಗೊಳ್ಳಲಿದ್ದು, ಅವರು ಈ ಸುತ್ತಿನ ಮೂಲಕ ಸೆಮಿಫೈನಲ್ ಅಥವಾ ಫೈನಲ್‌ಗೆ ಪ್ರವೇಶಿಸಲು ಎರಡನೇ ಅವಕಾಶವನ್ನು ಪಡೆಯಲಿದ್ದಾರೆ. ಬಾಲರಾಜ್ ಅವರು 2022ರಲ್ಲಿ ಚೀನಾದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು ಮತ್ತು ಕೊರಿಯಾದಲ್ಲಿ ನಡೆದ ಏಷ್ಯನ್ ಮತ್ತು ಓಷಿಯಾನಿಯಾ ಒಲಿಂಪಿಕ್ನಲ್ಲಿ ಕಂಚಿನ ಪದಕ ಗೆದ್ದಿದ್ದರು. ಇದೀಗ ಅವರಿಗೆ ಎರಡನೇ ಅವಕಾಶ ವಿದ್ದು ಸೆಮಿಸ್ ಅಥವಾ ಫೈನಲ್ ಪ್ರವೇಶ ಪಡೆಯುವ ಅವಕಾಶವೂ ಇದೆ.
ಇದನ್ನೂ ಓದಿ: ಪ್ಯಾರಿಸ್ ಒಲಿಂಪಿಕ್ಸ್ 2024: ಎರಡನೇ ದಿನದ ಭಾರತದ ಸ್ಪರ್ಧೆಗಳು, ಸಮಯ ಮಾಹಿತಿ ಹೀಗಿದೆ - PARIS OLYMPIC DAY2 SCHEDULE