ETV Bharat / sports

ಈ ಸಲವೂ ಭಾರತ ವಿಶ್ವಕಪ್​​ ಗೆಲ್ಲದಿದ್ರೆ ರೋಹಿತ್​ ಶರ್ಮಾ ಸಮುದ್ರಕ್ಕೆ ಹಾರ್ತಾರೆ: ಸೌರವ್​ ಗಂಗೂಲಿ - IND VS SOUTH AFRICA FINAL

author img

By ETV Bharat Karnataka Team

Published : Jun 29, 2024, 4:17 PM IST

ಟಿ-20 ವಿಶ್ವಕಪ್​ನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಚಾಂಪಿಯನ್​ ಪಟ್ಟಕ್ಕಾಗಿ ಇಂದು ಹೋರಾಡಲಿವೆ. ಬಾರ್ಬಡೋಸ್​ ಮೈದಾನದಲ್ಲಿ ಅಂತಿಮ ಕದನ ನಡೆಯಲಿದೆ.

ಸೌರವ್​ ಗಂಗೂಲಿ
ಸೌರವ್​ ಗಂಗೂಲಿ (ETV Bharat)

ಬಾರ್ಬಡೋಸ್​ (ವೆಸ್ಟ್​ ಇಂಡೀಸ್​): ಅಮೆರಿಕ ಮತ್ತು ವೆಸ್ಟ್​ ಇಂಡೀಸ್​ ಆತಿಥ್ಯದಲ್ಲಿ ನಡೆಯುತ್ತಿರುವ ಟಿ-20 ವಿಶ್ವಕಪ್​ ಅಂತಿಮ ಘಟ್ಟದಲ್ಲಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಪ್ರಶಸ್ತಿ ಸುತ್ತಿಗೆ ಬಂದಿದ್ದು, ಇಂದು ರಾತ್ರಿ ನಡೆಯುವ ಫೈನಲ್​ನಲ್ಲಿ ಗೆಲ್ಲುವ ತಂಡ ಚಾಂಪಿಯನ್​ ಆಗಿ ಹೊರಹೊಮ್ಮಲಿದೆ.

ರೋಹಿತ್​ ಶರ್ಮಾ ನೇತೃತ್ವದಲ್ಲಿ ಭಾರತ ತಂಡ ಕಳೆದ 7 ತಿಂಗಳಲ್ಲಿ ಐಸಿಸಿಯ ದೊಡ್ಡ ಟೂರ್ನಿಯಲ್ಲಿ ಸತತ ಎರಡನೇ ಬಾರಿಗೆ ಫೈನಲ್​​​ಗೆ ಲಗ್ಗೆ ಇಟ್ಟಿದೆ. ಇತ್ತ ದಕ್ಷಿಣ ಆಫ್ರಿಕಾ ಮೂರು ದಶಕಗಳ ಬಳಿಕ ಮೊದಲ ಸಲ ಅಂತಿಮ ಹಂತಕ್ಕೆ ಬಂದಿದ್ದು, ಎರಡು ಮದಗಜ ತಂಡಗಳ ನಡುವಿನ ಹೋರಾಟ ಕ್ರಿಕೆ​​ಟ್​ ರಸಿಕರಿಗೆ ರಸದೌತಣ ನೀಡುವುದು ಪಕ್ಕಾ ಆಗಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಮಾಜಿ ದಿಗ್ಗಜ ಕ್ರಿಕೆಟಿಗ ಸೌರವ್​ ಗಂಗೂಲಿ, ಭಾರತ ತಂಡ ಬಲಿಷ್ಠವಾಗಿದೆ. ಫೈನಲ್​ನಲ್ಲಿ ಗೆಲ್ಲುವ ಎಲ್ಲ ಅರ್ಹತೆಯನ್ನು ಹೊಂದಿದೆ. ದಕ್ಷಿಣ ಆಫ್ರಿಕಾ ಕೂಡ ಮೊದಲ ಸಲ ಫೈನಲ್​ಗೆ ಬಂದಿದ್ದು, ಪಂದ್ಯ ರೋಚಕವಾಗಿರುವ ನಿರೀಕ್ಷೆ ಇದೆ. ರೋಹಿತ್​ ಶರ್ಮಾ ಬಳಗ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಸಮುದ್ರಕ್ಕೆ ಹಾರುವ ರೋಹಿತ್​: ರೋಹಿತ್​ ಶರ್ಮಾ ನಾಯಕತ್ವ ವಿಶೇಷತೆಯಿಂದ ಕೂಡಿದೆ. 2023 ರಲ್ಲಿ ನಡೆದ ಏಕದಿನ ವಿಶ್ವಕಪ್​​ನಲ್ಲೂ ಅವರು ತಂಡವನ್ನು ಫೈನಲ್​ಗೆ ತಂದಿದ್ದು, ದುರಾದೃಷ್ಟವಶಾತ್​ ಸೋಲಾಗಿತ್ತು. 7 ತಿಂಗಳ ಅವಧಿಯಲ್ಲಿ ಬಂದ ಟಿ-20 ವಿಶ್ವಕಪ್​​ನಲ್ಲಿ ತಂಡ ಮತ್ತೆ ಚಾಂಪಿಯನ್​ ಹಂತಕ್ಕೆ ಬಂದಿದೆ. ಈ ಬಾರಿ ತಂಡ ಗೆಲುವು ಸಾಧಿಸದೇ ಇದ್ದಲ್ಲಿ ರೋಹಿತ್​ ಶರ್ಮಾ ಬಾರ್ಬಡೋಸ್​ನಲ್ಲಿನ ಸಮುದ್ರಕ್ಕೆ ಹಾರಲಿದ್ದಾರೆ ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ರೋಹಿತ್​​ ಶರ್ಮಾ ತಂಡವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಇಂತಿಪ್ಪ ತಂಡ ಈ ಬಾರಿ ಟ್ರೋಫಿ ಎತ್ತಿಹಿಡಿಯಲೇಬೇಕು. ಕಾರಣ ರೋಹಿತ್​ಗೆ ಇದು ಕೊನೆಯ ಐಸಿಸಿ ಟೂರ್ನಿಯಾಗಿರಲಿದೆ. ಮುಂದಿನ ವಿಶ್ವಕಪ್​​ವರೆಗೆ ಅವರು ನಾಯಕರಾಗಿ ಮುಂದುವರಿಯಲಿದ್ದಾರೋ ಇಲ್ಲವೋ ತಿಳಿಯದು. ಈ ಸಲದ ಅವಕಾಶವನ್ನು ಅವರು ಬಿಡುವುದಿಲ್ಲ ಎಂಬ ನಂಬಿಕೆ ಇದೆ ಎಂದಿದ್ದಾರೆ.

ರೋಹಿತ್​ ಶರ್ಮಾ ತಂಡವನ್ನು ನಾಯಕರಾಗಿ ಅಲ್ಲದೇ, ಬ್ಯಾಟರ್​ ಆಗಿಯೂ ಮುನ್ನಡೆಸಿದ್ದಾರೆ. ಭಾರತವು ಗೆಲುವಿನ ಮೂಲಕ ವಿಶ್ವಕಪ್​ ಮುಗಿಸಲಿದೆ ಎಂದು ಭಾವಿಸುತ್ತೇನೆ. ಆಟಗಾರರು ಭಯವಿಲ್ಲದೇ ಆಡಬೇಕು. ತಂಡ ಗೆಲ್ಲಲಿ ಎಂದು ನಾನು ಆಶಿಸುತ್ತೇನೆ. ಐಸಿಸಿ ಟೂರ್ನಿಗಳನ್ನು ಗೆಲ್ಲಲು ಸ್ವಲ್ಪ ಅದೃಷ್ಟವೂ ಬೇಕು ಎಂದು ಸೌರವ್​ ಗಂಗೂಲಿ ಹೇಳಿದರು.

ಇದನ್ನೂ ಓದಿ: ವಿಂಡೀಸ್, ಇಂಗ್ಲೆಂಡ್ ಬಳಿಕ ಭಾರತಕ್ಕೆ 2ನೇ ಬಾರಿ T-20 ವಿಶ್ವ ಚಾಂಪಿಯನ್‌ ಆಗುವ ಅವಕಾಶ - T20 world champion

ETV Bharat Logo

Copyright © 2024 Ushodaya Enterprises Pvt. Ltd., All Rights Reserved.