ETV Bharat / sports

ಚಹಲ್​, ಬೌಲ್ಟ್​ ಬೌಲಿಂಗ್​ ದಾಳಿಗೆ​ ನಲುಗಿದ ಮುಂಬೈ ಇಂಡಿಯನ್ಸ್​​: ಹ್ಯಾಟ್ರಿಕ್​ ಸೋಲಿನ ಮುಖಭಂಗ - RR Won Against MI

author img

By ETV Bharat Karnataka Team

Published : Apr 2, 2024, 7:05 AM IST

Updated : Apr 2, 2024, 7:27 AM IST

ಸೋಮವಾರ ನಡೆದ ಐಪಿಎಲ್​ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ವಿರುದ್ಧ ಮುಂಬೈ ಇಂಡಿಯನ್ಸ್​ ತಂಡ ಸೋಲನುಭವಿಸಿದೆ.

ಚಹಲ್​, ಬೌಲ್ಟ್​ ಬೌಲಿಂಗ್​ ದಾಳಿಗೆ​ ನಲುಗಿದ ಮುಂಬೈ ಇಂಡಿಯನ್ಸ್​​ಗೆ ಹ್ಯಾಟ್ರಿಕ್​ ಸೋಲಿನ ಮುಖಭಂಗ

ಮುಂಬೈ: ಐಪಿಎಲ್‌ನ 14ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ್​ ರಾಯಲ್ಸ್​ ಆರು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್​ ಮಾಡಿದ ಮುಂಬೈ 9 ವಿಕೆಟ್​ ನಷ್ಟಕ್ಕೆ 126 ರನ್​ಗಳಿಸಲಷ್ಟೇ ಶಕ್ತವಾಯಿತು. ಸಾಮಾನ್ಯ ಗುರಿಯನ್ನು ಬೆನ್ನಟ್ಟಿದ ಸಂಜು ಸ್ಯಾಮ್ಸನ್​ ಪಡೆ ರಿಯಾನ್​ ಪರಾಗ್​ ಅವರ ಅಮೋಘ ಅರ್ಧಶತಕದ ನೆರವಿನಿಂದ 15.3 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ಗೆಲುವಿನ ದಡ ಸೇರಿತು. ರಾಜಸ್ಥಾನ ತಂಡಕ್ಕೆ ಇದು ಸತತ ಮೂರನೇ ಗೆಲುವಾಗಿದ್ದರೆ, 5 ಬಾರಿಯ ಚಾಂಪಿಯನ್ಸ್​ ಮುಂಬೈ ಇಂಡಿಯನ್ಸ್​ಗೆ ಹ್ಯಾಟ್ರಿಕ್​ ಸೋಲಾಗಿದೆ.

ತವರು ನೆಲದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ ಹಾರ್ದಿಕ್​ ಪಡೆ ಟ್ರೆಂಟ್​ ಬೌಲ್ಟ್​, ಯಜುವೇಂದ್ರ ಚಹಲ್ ಮತ್ತು ನಂಡ್ರೆ ಬರ್ಗರ್​ ದಾಳಿಗೆ ಸಿಲುಕಿ ಅಲ್ಪಮೊತ್ತಕ್ಕೆ ಕುಸಿಯಿತು. ಆರಂಭಿಕ ಬ್ಯಾಟರ್​ ರೋಹಿತ್​ ಶರ್ಮಾ ಬೌಲ್ಟ್​ ಬೌಲಿಂಗ್​ ದಾಳಿ ಸಿಲುಕಿ ಮೊದಲ ಓವರ್​ನಲ್ಲೇ ರನ್​ ಖಾತೆ ತೆರೆಯದೆ ಶೂನ್ಯಕ್ಕೆ ನಿರ್ಗಮಿಸಿದರು. ಬಳಿಕ ಬಂದ ನಮನ್​ ಧಿರ್​, ಡೆವಾಲ್ಡ್​ ಬ್ರೇವಿಸ್ ಕೂಡ ಶೂನ್ಯಕ್ಕೆ ಬೌಲ್ಟ್​ ಬಲೆಗೆ ಬಿದ್ದು ಹೊರ ನಡೆದರು. ಈ ಮೂಲಕ ಮೊದಲ ಮೂರು ಓವರ್​ಗಳಲ್ಲೇ ಪ್ರಮುಖ ಬ್ಯಾಟರ್​ಗಳು ಶೂನ್ಯಕ್ಕೆ ನಿರ್ಗಮಿಸುವ ಮೂಲಕ ತಂಡ ದೊಡ್ಡ ಆಘಾತ ಎದುರಿಸಿತು. ಮತ್ತೊಂದೆಡೆ 16ರನ್​ ಗಳಿಸಿದ್ದ ಇಶಾನ್​ ಕಿಶನ್​ ಬರ್ಗರ್​ಗೆ ವಿಕೆಟ್​ ಒಪ್ಪಿಸಿದರು. ಇದರಿಂದ ತಂಡ 20 ರನ್​ಗೆ ಪ್ರಮುಖ ನಾಲ್ಕು ವಿಕೆಟ್​ ಕಳೆದುಕೊಂಡು ಐಪಿಎಲ್​ನಲ್ಲಿ 2ನೇ ಬಾರಿಗೆ ಅತಿ ಕೆಟ್ಟ ಆರಂಭ ಕಂಡಿತು. ಆರ್​ಸಿಬಿ ವಿರುದ್ಧ 7 ರನ್​ಗೆ 4 ವಿಕೆಟ್​ ಕಳೆದುಕೊಂಡಿತ್ತು.

ತಿಲಕ್​-ಪಾಂಡ್ಯ ಅಲ್ಪ ನೆರವು: ತೀವ್ರ ಸಂಕಷ್ಟದಲ್ಲಿದ್ದ ತಂಡವನ್ನು ತಿಲಕ್​ ವರ್ಮಾ ಮತ್ತು ನಾಯಕ ಹಾರ್ದಿಕ್​ ಪಾಂಡ್ಯ ಮೇಲೆತ್ತಲು ಪ್ರಯತ್ನಿಸಿದರು. ವರ್ಮಾ ನಿಧಾನವಾಗಿ ಬ್ಯಾಟ್​ ಮಾಡಿ 29 ಎಸೆತಗಳಲ್ಲಿ 32 ರನ್​ ಗಳಿಸಿದರೆ, ಪಾಂಡ್ಯ ತುಸು ಅಬ್ಬರಿಸಿ 21 ಎಸೆತದಲ್ಲಿ 34 ರನ್​ ಮಾಡಿ ಮುಂಬೈ ಪರ ಗರಿಷ್ಟ ಸ್ಕೋರ್​ರ ಎನಿಸಿಕೊಂಡರು. ಸಮಯೋಚಿತ ಪ್ರದರ್ಶನ ತೋರುತ್ತಿದ್ದ ಇಬ್ಬರೂ ಯಜುವೇಂದ್ರ ಚಹಲ್​ಗೆ ವಿಕೆಟ್​ ನೀಡಿ ನಿರ್ಗಮಿಸಿದರು. ಬಳಿಕ ಮತ್ತೆ ತಂಡ ಕುಸಿತ ಕಂಡಿತು. ಕೊನೆಯಲ್ಲಿ ಟಿಮ್​ ಡೇವಿಡ್​ 17 ರನ್​ ಗಳಿಸಿದರು. ತೀವ್ರ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದ ತಂಡ 20 ಓವರ್​ಗಳಲ್ಲಿ 9 ವಿಕೆಟ್​ ನಷ್ಟಕ್ಕೆ 125 ರನ್​ ಗಳಿಸಿತು. ರಾಜಸ್ಥಾನದ ಪರ ಟ್ರೆಂಟ್​ ಬೌಲ್ಟ್​, ಚಹಲ್​​​ ತಲಾ 3 ವಿಕೆಟ್​ ಪಡೆದರೆ ನಂಡ್ರೆ ಬರ್ಗರ್​ 2, ಆವೇಶ್​ ಖಾನ್​ 1 ವಿಕೆಟ್​ ಉರಳಿಸಿದರು.

126ರನ್​ಗಳ ಸಾಮಾನ್​ ಗುರಿಯನ್ನು ಬೆನ್ನತ್ತಿದ ರಾಜಸ್ಥಾನ ಕೂಡ ಮೊದಲ ಓವರ್​ನಲ್ಲಿ ಜೈಸ್ವಾಲ್​ ವಿಕೆಟ್​ ಕಳೆದುಕೊಂಡಿತು. ಬಳಿಕ ಬಂದ ನಾಯಕ ಸಂಜು ಸ್ಯಾಮ್ಸ್​ನ್​ 12 ರನ್ ಗಳಿಸಿ ಔಟಾದರೇ, ಆರಂಭಿಕ ಬ್ಯಾಟರ್​ ಜೋಸ್ ಬಟ್ಲರ್ (13) ಕೂಡ ಪೆವಿಲಿಯನ್ ಹಾದಿ ಹಿಡಿದರು. ಈ ವೇಳೆ ತಂಡಕ್ಕೆ ನೆರವಾದ ರಿಯಾನ್ ಪರಾಗ್ (ಅಜೇಯ 54; 39 ಎಸೆತಗಳಲ್ಲಿ 5×4, 3×6) ಅಮೋಘ ಆಟದ ನೆರವಿನಿಂದ ರಾಜಸ್ಥಾನ 15.3 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಮುಂಬೈ ಪರ ಆಕಾಶ್ ಮಧ್ವಲ್ 3 ವಿಕೆಟ್​ ಪಡೆದರು.

ಇದನ್ನೂ ಓದಿ: ಟಿ-20 ಮಾದರಿಯಲ್ಲಿ ಮತ್ತೊಂದು ದಾಖಲೆ ಬರೆದ ಧೋನಿ - MS Dhoni T20s Records

Last Updated : Apr 2, 2024, 7:27 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.