ನವದೆಹಲಿ: 2036ರ ಒಲಿಂಪಿಕ್ಗೆ ಆತಿಥ್ಯ ವಹಿಸುವುದು ಭಾರತದ ಕನಸಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ 2036ರ ಒಲಿಂಪಿಕ್ಗೆ ಆತಿಥ್ಯ ವಹಿಸಲು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
Addressing the nation on Independence Day. https://t.co/KamX6DiI4Y
— Narendra Modi (@narendramodi) August 15, 2024
ಮುಂದುವರೆದು ಮಾತನಾಡುತ್ತ, "ಈ ಬಾರಿ ಪ್ಯಾರಿಸ್ ಒಲಿಂಪಿಕ್ನಲ್ಲಿ ಭಾರತದ ಧ್ವಜವನ್ನು ಹಾರಿಸಿದ ಯುವ ಕ್ರೀಡಾಪಟುಗಳು ನಮ್ಮೊಂದಿಗಿದ್ದಾರೆ. 140 ಕೋಟಿ ಜನರ ಪರವಾಗಿ ನಾನು ಅವರೆಲ್ಲರನ್ನು ಅಭಿನಂದಿಸುತ್ತೇನೆ. ಇನ್ನು ಕೆಲವೇ ದಿನಗಳಲ್ಲಿ ಪ್ಯಾರಾ ಒಲಿಂಪಿಕ್ ನಡೆಯಲಿದ್ದು, ಇದರಲ್ಲೂ ಭಾರತದ ಪ್ಯಾರಾ ಕ್ರೀಡಾಪಟುಗಳು ಭಾಗಿಯಾಗಲಿದ್ದಾರೆ. ಅವರಿಗೆ ಮುಂಚಿತವಾಗಿಯೇ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು. ಭಾರತ ಹೊಸ ಕನಸು, ನಿರ್ಣಯಗಳು ಮತ್ತು ಪ್ರಯತ್ನಗಳೊಂದಿಗೆ ಹೊಸ ಗುರಿಗಳತ್ತ ಸಾಗುತ್ತಲೇ ಇರುತ್ತದೆ" ಎಂದರು.
#WATCH | PM Narendra Modi says, " today, we also have with us the youth who made the indian flag fly high in #Olympics. On behalf of 140 crore countrymen, I congratulate all our athletes and players...In the next few days, a huge contingent of India will leave for Paris to… pic.twitter.com/g9jcsip1Fk
— ANI (@ANI) August 15, 2024
"ಈ ಹಿಂದೆ ನಾವು ಜಿ-20 ಶೃಂಗಸಭೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿದ್ದೇವೆ. ಇದರೊಂದಿಗೆ ದೊಡ್ಡ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸುವ ಶಕ್ತಿ ಭಾರತಕ್ಕಿದೆ ಎಂಬುದನ್ನು ಜಿ-20 ಶೃಂಗಸಭೆ ಮೂಲಕ ಇಡೀ ಜಗತ್ತಿಗೆ ಸಾಬೀತುಪಡಿಸಿದ್ದೇವೆ. ಹಾಗಾಗಿ 2036ರ ಒಲಿಂಪಿಕ್ಸ್‌ಗೂ ಆತಿಥ್ಯ ವಹಿಸುವುದು ಭಾರತದ ಕನಸಾಗಿದ್ದು, ಅದಕ್ಕಾಗಿ ತಯಾರಿ ನಡೆಸುತ್ತಿದ್ದೇವೆ" ಎಂದು ಇದೇ ವೇಳೆ ತಿಳಿಸಿದರು. 2030ರಲ್ಲಿ ಯೂತ್ ಒಲಿಂಪಿಕ್ಗೆ ಆತಿಥ್ಯ ವಹಿಸಲು ಭಾರತ ಬಿಡ್ ಮಾಡುವ ಸಾಧ್ಯತೆಯೂ ಇದೆ.
PM Narendra Modi said, " it's a dream to host the 2036 olympics in india". 🇮🇳 pic.twitter.com/ByiNl8o4Aq
— Mufaddal Vohra (@mufaddal_vohra) August 15, 2024
ಫ್ರೆಂಚ್ ಅಧ್ಯಕ್ಷ ಬೆಂಬಲ: ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರು ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸುವ ಭಾರತದ ಆಸಕ್ತಿಯನ್ನು ಬೆಂಬಲಿಸಿದ್ದಾರೆ. ಪ್ಯಾರಿಸ್ ಒಲಿಂಪಿಕ್ ಮುಕ್ತಾಯದ ನಂತರ ಜಿಯೋಸಿನಿಮಾದೊಂದಿಗೆ ಮಾತನಾಡಿದ ಮ್ಯಾಕ್ರನ್, ಭಾರತವು ಒಲಿಂಪಿಕ್ ಕ್ರೀಡಾಕೂಟದಂತಹ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿಸಿದ್ದರು.
ಪ್ರಧಾನಿ ಪ್ರಶಂಸೆ: ಪ್ಯಾರಿಸ್ ಒಲಿಂಪಿಕ್ನಲ್ಲಿ ಪದಕ ಗೆದ್ದ ಕ್ರೀಡಾಪಟುಗಳನ್ನು ಪ್ರಧಾನಿ ಮೋದಿ ಶ್ಲಾಘಿಸಿದರು. ಸ್ವಾತಂತ್ರ್ಯೋತ್ಸವ ಅಂಗವಾಗಿ ಕೆಂಪು ಕೋಟೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಲೂ ಪದಕ ವಿಜೇತ ಕ್ರೀಡಾಪಟುಗಳಿಗೆ ಆಹ್ವಾನಿಸಲಾಗಿತ್ತು. ಈ ವೇಳೆ ಪ್ರಧಾನಿ ಅವರು ಒಲಿಂಪಿಕ್ ಕ್ರೀಡಾಪಟುಗಳಿಗೆ ಅಭಿನಂದನೆ ತಿಳಿಸಿದರು. ಜತೆಗೆ ಪ್ಯಾರಿಸ್‌ನಲ್ಲಿ ಪ್ಯಾರಾಲಿಂಪಿಕ್ 2024 ರಲ್ಲಿ ಭಾಗಿಯಾಗಲಿರುವ ಭಾರತೀಯ ತಂಡಕ್ಕೂ ಶುಭಾಶಯ ಕೋರಿದರು.
ಇದನ್ನೂ ಓದಿ: ಕಮರಿದ ಕೊನೇಯ ಆಸೆ! ವಿನೇಶ್ ಫೋಗಟ್ ಅನರ್ಹತೆ ಎತ್ತಿಹಿಡಿದ ಕ್ರೀಡಾ ಮಧ್ಯಸ್ಥಿಕೆ ಕೋರ್ಟ್ - Vinesh Phogat