ನವದೆಹಲಿ: ವೆಸ್ಟ್ ಇಂಡೀಸ್ನ ಬಾರ್ಬಡೋಸ್ನಲ್ಲಿ ಶನಿವಾರ (ಜೂನ್ 29) ನಡೆದ ಐಸಿಸಿ ಟಿ-20 ವಿಶ್ವಕಪ್‌ನ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್‌ಗಳಿಂದ ಬಗ್ಗುಬಡಿದು ಎರಡನೇ ಬಾರಿಗೆ ಪ್ರಶಸ್ತಿ ಎತ್ತಿಹಿಡಿದ ಭಾರತ ಕ್ರಿಕೆಟ್ ತಂಡಕ್ಕೆ ಮೋದಿ ಶುಭಾಶಯ ಕೋರಿದ್ದಲ್ಲದೇ, ಸ್ವತಃ ಫೋನ್ ಕರೆ ಮಾಡಿ ಪ್ರತಿ ಆಟಗಾರರನ್ನು ಮಾತನಾಡಿಸಿದ್ದಾರೆ.
Dear @ImRo45,
— Narendra Modi (@narendramodi) June 30, 2024
You are excellence personified. Your aggressive mindset, batting and captaincy has given a new dimension to the Indian team. Your T20 career will be remembered fondly. Delighted to have spoken to you earlier today. pic.twitter.com/D5Ue9jHaad
ಸಂಭಾಷಣೆಯ ವೇಳೆ ರೋಹಿತ್ ಶರ್ಮಾ ನಾಯಕತ್ವವನ್ನು ಪ್ರಧಾನಿ ಶ್ಲಾಘಿಸಿದ್ದಾರೆ. ವಿಶ್ವಕಪ್ ಗೆಲುವಿನ ಮೂಲಕ ಟಿ20 ವೃತ್ತಿಜೀವನಕ್ಕೆ ವಿದಾಯ ಹೇಳಿದ್ದನ್ನೂ ಅವರು ಮೆಚ್ಚಿಕೊಂಡಿದ್ದಾರೆ. ಫೈನಲ್ ಪಂದ್ಯದಲ್ಲಿ ಅದ್ಭುತವಾಗಿ ಬ್ಯಾಟ್ ಮಾಡಿದ ವಿರಾಟ್ ಕೊಹ್ಲಿ ಆಟವನ್ನು ಮೋದಿ ಪ್ರಸ್ತಾಪಿಸಿದರು. ಭಾರತೀಯ ಕ್ರಿಕೆಟ್‌ಗೆ ಕೊಹ್ಲಿ ಕೊಡುಗೆಗಳನ್ನು ವಿಶೇಷವಾಗಿ ಹೊಗಳಿದರು.
ದ್ರೋಣ ದ್ರಾವಿಡ್ಗೆ ಬಹುಪರಾಕ್: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ರ ಸಾಧನೆಯನ್ನು ಇದೇ ವೇಳೆ ಪ್ರಧಾನಿ ಬಣ್ಣಿಸಿ, ವಿಶ್ವಕಪ್ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದಕ್ಕೆ ಧನ್ಯವಾದ ಹೇಳಿದರು. ಜೊತೆಗೆ, ತಂಡವನ್ನು ಸಮರ್ಥವಾಗಿ ಕಟ್ಟಿ ಬೆಳೆಸಿದ 'ದ್ರೋಣ'ರ ಕ್ರಿಕೆಟ್ ಜೀವನವನ್ನೂ ಹೊಗಳಿದ್ದಾರೆ.
Rahul Dravid’s incredible coaching journey has shaped the success of Indian cricket.
— Narendra Modi (@narendramodi) June 30, 2024
His unwavering dedication, strategic insights and nurturing the right talent have transformed the team.
India is grateful to him for his contributions and for inspiring generations. We are… pic.twitter.com/8MKSPqztDV
ಫೈನಲ್ ಪಂದ್ಯದ ಹೀರೋಗಳಾದ ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾರ ಬಗ್ಗೆಯೂ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು. ಕೊನೆಯ ಓವರ್ನಲ್ಲಿ ಬೇಕಾಗಿದ್ದ 16 ರನ್‌ಗಳನ್ನು ಬಿಟ್ಟುಕೊಡದೆ ಬೌಲಿಂಗ್ ಮಾಡಿದ ಪಾಂಡ್ಯ, ಬೌಂಡರಿ ಗೆರೆಯಲ್ಲಿ ಅತ್ಯದ್ಭುತವಾಗಿ ಕ್ಯಾಚ್ ಹಿಡಿದು ಪಂದ್ಯವನ್ನೇ ತಿರುಗಿಸಿದ ಸೂರ್ಯಕುಮಾರ್, 18ನೇ ಓವರ್ ಎಸೆದು ತಂಡದ ಗೆಲುವಿನ ಆಸೆಯನ್ನು ಮರು ಚಿಗುರೊಡಿಸಿದ ಬುಮ್ರಾ ಬೌಲಿಂಗ್ ಅನ್ನು ಮೋದಿ ಬಹುವಾಗಿ ಮೆಚ್ಚಿಕೊಂಡರು. ಅದರಲ್ಲೂ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಬುಮ್ರಾಗೆ ವಿಶೇಷ ಹೊಗಳಿಕೆ ಸಿಕ್ಕಿತು.
ಸಾಧನೆ ಬಗ್ಗೆ ಹೆಮ್ಮೆ: ಇದಕ್ಕೂ ಮೊದಲು ಶನಿವಾರದಂದು ತಂಡ ಟಿ-20 ವಿಶ್ವಕಪ್ ಗೆಲುವಿನ ಬಳಿಕ ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಸಂದೇಶವನ್ನು ಹಂಚಿಕೊಂಡು, ಇಡೀ ತಂಡವನ್ನು ಅಭಿನಂದಿಸಿದ್ದರು. ಚಾಂಪಿಯನ್ ಟೀಮ್ ಇಂಡಿಯಾವು ಟಿ-20 ವಿಶ್ವಕಪ್ ಅನ್ನು ತನ್ನದೇ ಸ್ಟೈಲ್ನಲ್ಲಿ ಮನೆಗೆ ತರುತ್ತಿದೆ. "ಭಾರತ ಕ್ರಿಕೆಟ್ ತಂಡದ ಸಾಧನೆ ಬಗ್ಗೆ ಹೆಮ್ಮೆಪಡುತ್ತೇವೆ" ಎಂದು ಹೇಳಿದ್ದರು.
"ನಮ್ಮ ತಂಡವು ವಿಶ್ವಕಪ್ ಗೆಲ್ಲುವ ಜೊತೆಗೆ, ಕೋಟ್ಯಂತರ ಭಾರತೀಯರ ಹೃದಯವನ್ನೂ ಗೆದ್ದಿತು. ಒಂದು ಪಂದ್ಯವನ್ನೂ ಸೋಲದೆ ವಿಶ್ವಕಪ್ ಗೆದ್ದಿದ್ದು ಸಣ್ಣ ಸಾಧನೆಯಲ್ಲ. ಈ ಅದ್ಭುತ ಗೆಲುವಿಗಾಗಿ ಭಾರತ ಕ್ರಿಕೆಟ್ ತಂಡಕ್ಕೆ ಅಭಿನಂದನೆಗಳು" ಎಂದು ಪ್ರಧಾನಿ ಹೇಳಿದ್ದಾರೆ.
Dear @imVkohli,
— Narendra Modi (@narendramodi) June 30, 2024
Glad to have spoken to you. Like the innings in the Finals, you have anchored Indian batting splendidly. You’ve shone in all forms of the game. T20 Cricket will miss you but I am confident you’ll continue to motivate the new generation of players. pic.twitter.com/rw8fKvgTbA
2007ರಲ್ಲಿ ನಡೆದ ಟಿ20 ವಿಶ್ವಕಪ್‌ನ ಚೊಚ್ಚಲ ಆವೃತ್ತಿಯನ್ನು ಭಾರತ ತಂಡ ಗೆದ್ದಿತ್ತು. ಅದಾದ ಬಳಿಕ 17 ವರ್ಷಗಳಲ್ಲಿ ಒಮ್ಮೆಯೂ ಫೈನಲ್ ಗೆಲುವು ಸಿಕ್ಕಿರಲಿಲ್ಲ. 2011ರಲ್ಲಿ ಮಾಜಿ ಆಟಗಾರ ಮಹೇಂದ್ರ ಸಿಂಗ್ ಧೋನಿ ನೇತೃತ್ವದಲ್ಲಿ ಏಕದಿನ ವಿಶ್ವಕಪ್, 2013 ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆಲುವು ಸಿಕ್ಕಿತ್ತು. ಇದರ ಬಳಿಕ ಕಳೆದ 11 ವರ್ಷಗಳಲ್ಲಿ ತಂಡಕ್ಕೆ ಟ್ರೋಫಿ ಮರೀಚಿಕೆಯಾಗಿತ್ತು. 2023ರಲ್ಲಿ ಭಾರತದಲ್ಲೇ ನಡೆದ ಏಕದಿನ ವಿಶ್ವಕಪ್ನಲ್ಲಿ ತಂಡ ಫೈನಲ್ಗೆ ಬಂದಿದ್ದರೂ, ಆಸ್ಟ್ರೇಲಿಯಾದ ಎದುರು ಸೋಲು ಕಂಡಿತ್ತು.
ಇದನ್ನೂ ಓದಿ: ಫೈನಲ್‌ನಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್; ದ್ರಾವಿಡ್-ರೋಹಿತ್ ನಂಬಿಕೆ ಉಳಿಸಿಕೊಂಡ ಕೊಹ್ಲಿ - Virat Kohli