ETV Bharat / sports

ಪ್ಯಾರಿಸ್ ಒಲಿಂಪಿಕ್ಸ್ ಪದಕಗಳ ಪಟ್ಟಿ: ಅಗ್ರಸ್ಥಾನದಲ್ಲಿ ಚೀನಾ, ಭಾರತಕ್ಕೆ 39ನೇ ಸ್ಥಾನ - Paris Olympics Medal Tally - PARIS OLYMPICS MEDAL TALLY

ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಭಾರತ 2 ಕಂಚಿನ ಪದಕಗಳೊಂದಿಗೆ 39ನೇ ಸ್ಥಾನದಲ್ಲಿದೆ. ಚೀನಾ ಎಂಟು ಚಿನ್ನದ ಪದಕಗಳನ್ನು ಪಡೆಯುವ ಮೂಲಕ ಅಗ್ರಸ್ಥಾನದಲ್ಲಿದೆ. ಇನ್ನು ಚೀನಾದಷ್ಟೇ ಬಂಗಾರವನ್ನು ಮುಡಿಗೇರಿಸಿಕೊಂಡಿರುವ ಜಪಾನ್​ ಒಟ್ಟು 15ಪದಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

Paris Olympics, Medal Tally: China climb to the top, India placed 39th
ಪ್ಯಾರಿಸ್ ಒಲಿಂಪಿಕ್ಸ್ ಪದಕಗಳ ಪಟ್ಟಿ: ಅಗ್ರಸ್ಥಾನದಲ್ಲಿ ಚೀನಾ, ಭಾರತಕ್ಕೆ 39ನೇ ಸ್ಥಾನ (IANS)
author img

By ETV Bharat Sports Team

Published : Aug 1, 2024, 6:36 AM IST

ಪ್ಯಾರಿಸ್, ಫ್ರಾನ್ಸ್​: ಪೂಲ್ ಮತ್ತು ಶೂಟಿಂಗ್ ಶ್ರೇಣಿಯಲ್ಲಿ ತಮ್ಮ ಉತ್ತಮ ಪ್ರದರ್ಶನ ಮುಂದುವರೆಸಿರುವ ಚೀನಾ ಪ್ಯಾರಿಸ್ ಒಲಿಂಪಿಕ್ಸ್‌ನ ಐದನೇ ದಿನವಾದ ಬುಧವಾರ ಪದಕಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಈ ಮೂಲಕ ಜಿಮ್ನಾಸ್ಟಿಕ್ಸ್‌ನಲ್ಲಿ ಎರಡು ಬೆಳ್ಳಿ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಬುಧವಾರ ಸಂಜೆಯ ವೇಳಾಪಟ್ಟಿ ಪ್ರಕಾರ ಚೀನಾ 8 ಚಿನ್ನ, 7 ಬೆಳ್ಳಿ ಮತ್ತು 2 ಕಂಚಿನ ಒಟ್ಟು 18 ಪದಕಗಳನ್ನು ಪಡೆದುಕೊಳ್ಳುವ ಮೂಲಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

ಜಿಮ್ನಾಸ್ಟಿಕ್ಸ್‌ನಲ್ಲಿ 15 ಪದಕಗಳು, ಎಂಟು ಚಿನ್ನ, ಮತ್ತೊಂದು ಚಿನ್ನದ ಪದಕದೊಂದಿಗೆ ಜಪಾನ್ ಎರಡನೇ ಸ್ಥಾನಕ್ಕೆ ಕುಸಿದಿದೆ. ಈ ಹಿಂದೆ ಪುರುಷರ ತಂಡ ಚಿನ್ನದ ಪದಕ ಗೆದ್ದುಕೊಂಡಿತ್ತು. ಆತಿಥೇಯ ಫ್ರಾನ್ಸ್, ಮಹಿಳೆಯರ ಟ್ರಯಥ್ಲಾನ್ ಮತ್ತು ರಗ್ಬಿ ಸೆವೆನ್ಸ್‌ನಲ್ಲಿ ಈಜು, ಈಕ್ವೆಸ್ಟ್ರಿಯನ್ ಮತ್ತು ಫೆನ್ಸಿಂಗ್‌ ಸ್ಪರ್ಧೆಗಳಲ್ಲಿ ಏಳು ಚಿನ್ನ ಸೇರಿದಂತೆ ಒಟ್ಟು 24 ಪದಕಗಳನ್ನು ಪಡೆದುಕೊಂಡಿದೆ. ಈ ಮೂಲಕ ಅದು ಪದಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಆಸ್ಟ್ರೇಲಿಯಾ 7 ಚಿನ್ನ, 4 ಬೆಳ್ಳಿ ಮತ್ತು 3 ಕಂಚಿನೊಂದಿಗೆ ಒಟ್ಟು 14 ಪದಕಗಳನ್ನು ಪಡೆಯುವ ಮೂಲಕ ನಾಲ್ಕನೇ ಸ್ಥಾನದಲ್ಲಿದೆ. ಇನ್ನು ಗ್ರೇಟ್ ಬ್ರಿಟನ್ 17 ಪದಕಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಬ್ರಿಟನ್​ ಮಡಿಲಿಗೆ ಆರು ಚಿನ್ನದ ಪದಕಗಳು ಸಂದಿವೆ. ಇನ್ನು ಭಾರತ ಪದಕಪಟ್ಟಿಯಲ್ಲಿ 39ನೇ ಸ್ಥಾನದಲ್ಲಿದೆ. ಎರಡು ಕಂಚಿನ ಪದಕಗಳನ್ನು ಗೆಲ್ಲಲು ಮಾತ್ರ ಯಶಸ್ವಿಯಾಗಿದೆ.

ಶೂಟಿಂಗ್​ ಸಿಂಗಲ್ಸ್ ಮತ್ತು ಮಿಶ್ರ ಶೂಟಿಂಗ್​ನಲ್ಲಿ ಭಾರತ ಎರಡು ಕಂಚಿನ ಪದಕಗಳನ್ನು ಪಡೆದುಕೊಂಡಿದೆ. ಮನು ಬಾಕರ್​​​​​ ವೈಯಕ್ತಿಕ ವಿಭಾಗದಲ್ಲಿ ಹಾಗೂ ಮಿಶ್ರ ವಿಭಾಗದಲ್ಲಿ ಕಂಚು ಗೆಲ್ಲುವು ಮೂಲಕ ದೇಶಕ್ಕೆ ಪದಕ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೆಡಲ್ ಟ್ಯಾಲಿ- ಟಾಪ್ 5 ರಾಷ್ಟ್ರ್ಖಗಳ ಪದಕ ಪಟ್ಟಿ ಮತ್ತು ಭಾರತ:

  • ಚೀನಾ 8 ಚಿನ್ನ 7 ಬೆಳ್ಳಿ 3 ಕಂಚು - ಒಟ್ಟು 18 ಪದಕ
  • ಜಪಾನ್ 8 ಚಿನ್ನ 3 ಬೆಳ್ಳಿ 4ಕಂಚು - ಒಟ್ಟು 15 ಪದಕ
  • ಫ್ರಾನ್ಸ್ 7ಚಿನ್ನ 9ಬೆಳ್ಳಿ 8 ಕಂಚು - ಒಟ್ಟು 24 ಪದಕ
  • ಆಸ್ಟ್ರೇಲಿಯಾ 7ಚಿನ್ನ 4ಬೆಳ್ಳಿ 3 ಕಂಚು - ಒಟ್ಟು 14 ಪದಕ
  • ಗ್ರೇಟ್ ಬ್ರಿಟನ್ 6ಚಿನ್ನ 6ಬೆಳ್ಳಿ 5ಕಂಚು - ಒಟ್ಟು 17 ಪದಕ
  • ಭಾರತ 0ಚಿನ್ನ 0ಬೆಳ್ಳಿ 2ಕಂಚು - ಒಟ್ಟು 2 ಪದಕ

ಇದನ್ನು ಓದಿ: ಆರ್ಚರಿ: ನೆದರ್ಲೆಂಡ್​ ವಿರುದ್ಧ ಗೆದ್ದ ದೀಪಿಕಾ ಕುಮಾರಿ; ಪ್ರೀ-ಕ್ವಾರ್ಟರ್​ ಫೈನಲ್​ಗೆ ಪ್ರವೇಶ - paris olympics 2024

ETV Bharat Logo

Copyright © 2025 Ushodaya Enterprises Pvt. Ltd., All Rights Reserved.