ETV Bharat / sports

ಒಲಿಂಪಿಕ್ಸ್‌ ಪುರುಷರ ಕುಸ್ತಿ: ಕ್ವಾರ್ಟರ್​ ಫೈನಲ್ ಪ್ರವೇಶಿಸಿದ ಅಮನ್ ಸೆಹ್ರಾವತ್ - Paris Olympics Wrestling - PARIS OLYMPICS WRESTLING

ಒಲಿಂಪಿಕ್ಸ್​ ಪುರುಷರ ಫ್ರೀಸ್ಟೈಲ್ 57 ಕೆ.ಜಿ ಪಂದ್ಯದಲ್ಲಿ ಭಾರತದ ಅಮನ್​ ಸೆಹ್ರಾವತ್​ ಅವರು ನಾರ್ತ್​ ಮೆಸಿಡೋನಿಯಾದ ಕುಸ್ತಿಪಟುವನ್ನು ಮಣಿಸಿ ಕ್ವಾರ್ಟರ್​ ಫೈನಲ್‌ಗೇರಿದರು.

ಅಮನ್ ಸೆಹ್ರಾವತ್
ಅಮನ್ ಸೆಹ್ರಾವತ್ (AP)
author img

By ETV Bharat Sports Team

Published : Aug 8, 2024, 3:23 PM IST

ಪ್ಯಾರಿಸ್(ಫ್ರಾನ್ಸ್): ಭಾರತದ ಕುಸ್ತಿಪಟು ಅಮನ್ ಸೆಹ್ರಾವತ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ ಕುಸ್ತಿ ಪಂದ್ಯದಲ್ಲಿ ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ್ದಾರೆ.

ಇಂದು ನಡೆದ ಪುರುಷರ ಫ್ರೀಸ್ಟೈಲ್ 57 ಕೆ.ಜಿ ಪ್ರೀ-ಕ್ವಾರ್ಟರ್​ ಪಂದ್ಯದಲ್ಲಿ ಯುರೋಪಿಯನ್ ಚಾಂಪಿಯನ್‌ಶಿಪ್‌ ಚಿನ್ನ ವಿಜೇತ ನಾರ್ತ್​ ಮೆಸಿಡೋನಿಯಾದ ವ್ಲಾಡಿಮಿರ್ ಎಗೊರೊವ್ ಅವರನ್ನು ಸೆಹ್ರಾವತ್ ಮಣಿಸಿದರು. ಇದರೊಂದಿಗೆ ಕ್ವಾರ್ಟರ್​ ಫೈನಲ್​ಗೆ ಲಗ್ಗೆಯಿಟ್ಟರು.

ಅಮನ್ ತನ್ನ ಎದುರಾಳಿ ಮೇಲೆ ಆರಂಭದಿಂದಲೇ ಪ್ರಾಬಲ್ಯ ತೋರಿಸಿದರು. ಅಂತಿಮವಾಗಿ, ತಾಂತ್ರಿಕ ಶ್ರೇಷ್ಠತೆಯ ಆಧಾರದ ಮೇಲೆ 10-0 ಅಂತರದಿಂದ ಪಂದ್ಯ ಗೆದ್ದುಕೊಂಡರು. ಅಮನ್ ಸೆಹ್ರಾವತ್ ವಿಶ್ವ ರ‍್ಯಾಂಕಿಂಗ್‌ನಲ್ಲಿ ಆರನೇ ಸ್ಥಾನದಲ್ಲಿದ್ದಾರೆ.

ಪಂದ್ಯಾರಂಭದ ಮೊದಲು ಸುತ್ತಿನಲ್ಲಿ ಅಮನ್ ವ್ಲಾಡಿಮಿರ್ ಅವರನ್ನು ರಿಂಗ್‌ನಿಂದ ಹೊರಕ್ಕೆ ತಳ್ಳಿ 2-0 ಮುನ್ನಡೆ ಕಾಯ್ದುಕೊಂಡರು. ಇದಾದ ನಂತರ ಅಮನ್ ಹಿಂತಿರುಗಿ ನೋಡಲಿಲ್ಲ. ಎರಡನೇ ಅವಧಿಯಲ್ಲಿ 2 ನಿಮಿಷ ಬಾಕಿ ಇರುವಾಗಲೇ ತಾಂತ್ರಿಕ ಶ್ರೇಷ್ಠತೆಯ ಆಧಾರದ ಮೇಲೆ ಮೊದಲ ಬೌಟ್‌ನಲ್ಲಿ 10-0 ಅಂತರದಿಂದ ಜಯಗಳಿಸುವ ಮೂಲಕ ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಪಡೆದರು. ಎಗೊರೊವ್ ರೆಪೆಚೇಜ್ ಸುತ್ತು ತಲುಪುವ ಸಾಧ್ಯತೆ ಇದೆ.

ಇದನ್ನೂ ಓದಿ: ವಿನೇಶ್​ ನೀನು ಸೋತಿಲ್ಲ, ಸೋಲಿಸಲಾಗಿದೆ: ಫೋಗಟ್​ ನಿವೃತ್ತಿಗೆ ಬಜರಂಗ್​ ಪುನಿಯಾ, ಸಾಕ್ಷಿ ಮಲಿಕ್​ ಪ್ರತಿಕ್ರಿಯೆ - Paris Olympics 2024

ETV Bharat Logo

Copyright © 2025 Ushodaya Enterprises Pvt. Ltd., All Rights Reserved.