ETV Bharat / sports

ಒಲಿಂಪಿಕ್ಸ್​ ಕುಸ್ತಿ: ವಿನೇಶ್​ ಫೋಗಟ್​ಗೆ 2ನೇ ಗೆಲುವು; ಸೆಮಿಫೈನಲ್ ಪ್ರವೇಶ - Vinesh Phogat - VINESH PHOGAT

ಪ್ಯಾರಿಸ್ ಒಲಿಂಪಿಕ್ಸ್​ ಮಹಿಳೆಯರ 50 ಕೆ.ಜಿ. ವಿಭಾಗದ ಕುಸ್ತಿ ಪಂದ್ಯದಲ್ಲಿ ವಿನೇಶ್​ ಫೋಗಟ್ 7-5 ಅಂತರದಿಂದ ​ಉಕ್ರೇನ್​ನ ಸ್ಪರ್ಧಿಯನ್ನು ಮಣಿಸಿ ಸೆಮಿ ಫೈನಲ್​ಗೆ ಪ್ರವೇಶ ಪಡೆದಿದ್ದಾರೆ.

ನೀಶ್​ ಫೋಗಟ್​ಗೆ ಎರಡನೇ ಗೆಲುವು
ವಿನೀಶ್​ ಫೋಗಟ್​ (AP)
author img

By ETV Bharat Sports Team

Published : Aug 6, 2024, 4:58 PM IST

ಪ್ಯಾರಿಸ್(ಫ್ರಾನ್ಸ್​): ಭಾರತದ ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ ಮಹಿಳೆಯರ 50 ಕೆ.ಜಿ. ಫ್ರೀಸ್ಟೈಲ್ ಕುಸ್ತಿ ಪಂದ್ಯದಲ್ಲಿ ಸೆಮಿಫೈನಲ್ ಪ್ರವೇಶಿಸಿದರು. ಇಂದು ನಡೆದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಉಕ್ರೇನ್​ನ ಒಕ್ಸಾನಾ ಲಿವಾಚ್ ಅವರನ್ನು 7-5 ಅಂತರದಿಂದ ಮಣಿಸಿದ ಅವರು ಸೆಮಿಸ್​ಗೆ ಪ್ರವೇಶ ಪಡೆದರು.

ಇದಕ್ಕೂ ಮೊದಲು ನಡೆದ ಮಹಿಳೆಯರ 50 ಕೆ.ಜಿ. ಕುಸ್ತಿಯ 16ನೇ ಸುತ್ತಿನ ಪಂದ್ಯದಲ್ಲಿ ವಿನೇಶ್ ಫೋಗಟ್ ಜಪಾನ್‌ನ ಯುಯಿ ಸುಸಾಕಿ ಅವರನ್ನು 3-2 ಅಂತರದಿಂದ ಸೋಲಿಸಿದ್ದರು. ನಾಲ್ಕು ಬಾರಿಯ ವಿಶ್ವ ಚಾಂಪಿಯನ್ ಸುಸಾಕಿ ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದರು.

ಇದು ಅಂತರಾಷ್ಟ್ರೀಯ ಕುಸ್ತಿಯಲ್ಲಿ ಜಪಾನ್ ಕುಸ್ತಿಪಟುವಿನ ಮೊದಲ ಸೋಲು ಎಂಬುದು ಗಮನಾರ್ಹ. ವಿನೇಶ್ ವಿರುದ್ಧದ ಪಂದ್ಯದ ಆರಂಭದಲ್ಲಿ ಸುಸಾಕಿ 2-0 ಮುನ್ನಡೆ ಸಾಧಿಸಿದ್ದರು. ಬಳಿಕ ಬಲವಾದ ಕಮ್​ಬ್ಯಾಕ್​ ಮಾಡಿದ ಫೋಗಟ್​ 3-2 ಅಂತರದಿಂದ ಎದುರಾಳಿಯನ್ನು ಬಗ್ಗು ಬಡಿದರು. ಇದರೊಂದಿಗೆ ಮುಂದಿನ ಸುತ್ತಿಗೆ ಅರ್ಹತೆ ಪಡೆದಿದ್ದರು.

ಮಹಿಳೆಯರ 50 ಕೆ.ಜಿ. ವಿಭಾಗದ ಸೆಮಿಫೈನಲ್ ಕುಸ್ತಿ ಪಂದ್ಯ ಇಂದು ರಾತ್ರಿ 10.15ಕ್ಕೆ ನಡೆಯಲಿದೆ. ಈ ಪಂದ್ಯ ವಿನೇಶ್​ ಫೋಗಟ್ ಮತ್ತು​ ಗುಜ್ಮನ್ ಲೋಪೆಜ್ ಮಧ್ಯೆ ನಡೆಯಲಿದೆ.

ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ ನೀರಜ್​ ಚೋಪ್ರಾ ಕಮಾಲ್​: 89.34 ಮೀ ಜಾವೆಲಿನ್‌ ಎಸೆದು ಫೈನಲ್​ ಪ್ರವೇಶ! - Neeraj Chopra

ETV Bharat Logo

Copyright © 2025 Ushodaya Enterprises Pvt. Ltd., All Rights Reserved.