ETV Bharat / sports

ಪ್ಯಾರಾಲಿಂಪಿಕ್ಸ್​: ಜಾವೆಲಿನ್​ ಥ್ರೋನಲ್ಲಿ ದಾಖಲೆಯ ಚಿನ್ನ ಗೆದ್ದ ಸುಮಿತ್​ - Sumit Antil Won Gold

ಪ್ಯಾರಿಸ್​ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಭಾರತ 3ನೇ ಚಿನ್ನದ ಪದಕ ಗೆದ್ದುಕೊಂಡಿದೆ. ಜಾವೆಲಿನ್​ ಥ್ರೋ ಸ್ಪರ್ಧೆಯಲ್ಲಿ ದೇಶದ ಅಥ್ಲೀಟ್​ ಚಿನ್ನಕ್ಕೆ ಕೊರಳೊಡ್ಡಿದರು.

ಸುಮಿತ್​ ಆಂಟಿಲ್
ಸುಮಿತ್​ ಆಂಟಿಲ್ (ANI)
author img

By ETV Bharat Sports Team

Published : Sep 3, 2024, 11:34 AM IST

ಪ್ಯಾರಿಸ್​(ಫ್ರಾನ್ಸ್​): ಪ್ಯಾರಿಸ್​ ಪ್ಯಾರಾಲಿಂಪಿಕ್ಸ್​ನಲ್ಲಿ ಭಾರತ ಸೋಮವಾರ ರಾತ್ರಿ ಮೂರನೇ ಪದಕ ಸಾಧನೆ ಮಾಡಿದೆ. ಜಾವೆಲಿನ್​ ಎಸೆತ ಸ್ಪರ್ಧೆಯಲ್ಲಿ ಸುಮಿತ್​ ಆಂಟಿಲ್​ ಚಿನ್ನದ ಪದಕ ಗೆದ್ದರು. ಪುರುಷರ F64 ಜಾವೆಲಿನ್​ ಥ್ರೋ ಸ್ಪರ್ಧೆಯಲ್ಲಿ 70.59 ಮೀಟರ್​ ದೂರ ಜಾವೆಲಿನ್​ ಎಸೆದ ಸುಮಿತ್​ ಪ್ಯಾರಾಲಿಂಪಿಕ್ಸ್​ನಲ್ಲಿ ತಮ್ಮದೇ ಆದ ಹಳೆಯ ದಾಖಲೆ ಮುರಿದರು. ಇದಕ್ಕೂ ಮುನ್ನ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲೂ 68.55 ಮೀಟರ್‌ ದೂರ ಜಾವೆಲಿನ್‌ ಎಸೆದ ದಾಖಲೆ ಸುಮಿತ್‌ ಹೆಸರಲ್ಲಿತ್ತು.

ಸುಮಿತ್ ತಮ್ಮ ಮೊದಲ ಪ್ರಯತ್ನದಲ್ಲೇ 69.11 ಮೀಟರ್ ದೂರಕ್ಕೆ ಭರ್ಝಿ ಎಸೆಯುವ ಮೂಲಕ ಹೊಸ ದಾಖಲೆ ಬರೆದರು. ಎರಡನೇ ಪ್ರಯತ್ನದಲ್ಲೂ 70.59 ಮೀಟರ್ ದೂರಕ್ಕೆಸೆದು ದಾಖಲೆ ನಿರ್ಮಿಸಿದರು. ಇದರೊಂದಿಗೆ, ಸುಮಿತ್ ಒಂದೇ ಪಂದ್ಯದಲ್ಲಿ ಎರಡು ಬಾರಿ ಪ್ಯಾರಾಲಿಂಪಿಕ್ ದಾಖಲೆ ಮುರಿದ ಸಾಧನೆ ಮಾಡಿದ್ದಾರೆ. ಉಳಿದಂತೆ, ಶ್ರೀಲಂಕಾದ ದುಲಾನ್​ 67.03 ಮೀಟರ್​ ದೂರ ಜಾವೆಲಿನ್​ ಎಸೆದು ಬೆಳ್ಳಿ ಗೆದ್ದರೆ, ಆಸ್ಟ್ರೇಲಿಯಾದ ಮೈಕಲ್ ಬುರಿಯನ್ 64.89 ಮೀಟರ್ ಎಸೆದು ಕಂಚಿನ ಪದಕ ಪಡೆದುಕೊಂಡರು.

ಪ್ಯಾರಾ ಅಥ್ಲೀಟ್​ ಜಾವೆಲಿನ್​ ಸ್ಪರ್ಧೆಯ ವಿಶ್ವ ದಾಖಲೆ ಕೂಡ ಸುಮಿತ್​ ಹೆಸರಲ್ಲಿದೆ. 2022ರ ಏಷ್ಯನ್​ ಪ್ಯಾರಾ ಗೇಮ್ಸ್​ ಜಾವೆಲಿನ್​ ಸ್ಪರ್ಧೆಯಲ್ಲಿ 73.29 ಮೀಟರ್​ ದೂರಕ್ಕೆಸೆದು ವಿಶ್ವದಾಖಲೆ ನಿರ್ಮಿಸಿದ್ದಾರೆ. ಅವನಿ ಲೆಖರಾ ನಂತರ ಸತತ ಎರಡು ಬಾರಿ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಎರಡನೇ ಭಾರತೀಯ ಅಥ್ಲೀಟ್ ಆಗಿದ್ದಾರೆ. ಈ ಇಬ್ಬರೂ ಟೋಕಿಯೊ ಮತ್ತು ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಇದರೊಂದಿಗೆ ಭಾರತ ಒಟ್ಟು 15 ಪದಕಗಳನ್ನು ಗೆದ್ದುಕೊಂಡಿದೆ. ಇದರಲ್ಲಿ 3 ಚಿನ್ನ, 5 ಬೆಳ್ಳಿ ಮತ್ತು 7 ಕಂಚಿನ ಪದಕ ಸೇರಿದೆ.

ಇದನ್ನೂ ಓದಿ: ಪ್ಯಾರಾಲಿಂಪಿಕ್ಸ್ 2024: ಭಾರತದ ಖಾತೆಗೆ ಎರಡನೇ ಚಿನ್ನ; ಬ್ಯಾಡ್ಮಿಂಟನ್​ನಲ್ಲಿ ನಿತೇಶ್​​ ಕುಮಾರ್​ ಕಮಾಲ್​​ ​ - Nitesh Kumar Clinches Gold

ETV Bharat Logo

Copyright © 2024 Ushodaya Enterprises Pvt. Ltd., All Rights Reserved.