ಲಾಹೋರ್ (ಪಾಕಿಸ್ತಾನ): ಪ್ಯಾರಿಸ್ ಒಲಿಂಪಿಕ್ನ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಯಾರು ಊಹಿಸದ ಸಾಧನೆ ಮಾಡಿ ಚಿನ್ನ ಗೆದ್ದ ಪಾಕಿಸ್ತಾನದ ಅರ್ಷದ್ ನದೀಮ್ಗೆ ತವರಿನಲ್ಲಿ ಭರ್ಜರಿ ಸ್ವಾಗತ ಸಿಕ್ಕಿದೆ. ಪ್ಯಾರಿಸ್ನಿಂದ ಚಿನ್ನದ ಪದಕದೊಂದಿಗೆ ಹಿಂತಿರುಗಿದ ಅವರಿಗೆ ಲಾಹೋರ್ ವಿಮಾನ ನಿಲ್ದಾಣದಲ್ಲಿ ಜಲ ಫಿರಂಗಿ ಮೂಲಕ ಸ್ವಾಗತ ಕೋರಲಾಯಿತು.
Water canon salute to Turkish Airline plane at Lahore airport carrying Pakistans 🇵🇰 first ever individual Olympic Gold Medalist🥇 Arshad Nadeem. pic.twitter.com/BXTIaGZ8tu
— 🇵🇰عمران غنی (@Imranghani77) August 10, 2024
ಒಲಿಂಪಿಕ್ ಜಾವೆಲಿನ್ ಥ್ರೋ ಫೈನಲ್ ಸ್ಪರ್ಧೆಯಲ್ಲಿ 92.97 ಮೀಟರ್ ದೂರಕ್ಕೆ ಭರ್ಚಿ ಎಸೆದ ಅರ್ಷದ್ ಒಲಿಂಪಿಕ್ ಹಳೆಯ ದಾಖಲೆಯನ್ನು ಮುರಿದಿದ್ದಾರೆ. 2008ರ ಬೀಜಿಂಗ್ ಕ್ರೀಡಾಕೂಟದಲ್ಲಿ ನಾರ್ವೆಯ ಆಂಡ್ರಿಯಾಸ್ ಥೋರ್ಕಿಲ್ಡ್ಸೆನ್ ನಿರ್ಮಿಸಿದ 90.57 ಮೀಟರ್‌ಗಳ ಒಲಿಂಪಿಕ್ ದಾಖಲೆಯನ್ನು ಮುರಿದರು. ಅಲ್ಲದೆ, ಒಲಿಂಪಿಕ್ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ಮೊದಲ ಪಾಕಿಸ್ತಾನ ಕ್ರೀಡಾಪಟು ಎಂಬ ದಾಖಲೆಯನ್ನು ಬರೆದಿದ್ದಾರೆ. ಈ ಹಿಂದೆ 1992ರಲ್ಲಿ ಬಾರ್ಸಿಲೋನಾದಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಜಾವೆಲಿನ್ ಥ್ರೋನಲ್ಲಿ ಪಾಕಿಸ್ತಾನ ಮೊದಲ ಪದಕ ಗೆದ್ದಿತ್ತು.
27ರ ಹರೆಯದ ಆಟಗಾರ ಅರ್ಷದ್ ನದೀಮ್ ಭಾನುವಾರ ಪ್ಯಾರಿಸ್ನಿಂದ ಲಾಹೋರ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ ಅವರ ವಿಮಾನ ಆಗಮಿಸುತ್ತಿದ್ದಂತೆ ಜಲ ಫಿರಂಗಿ ಮೂಲಕ ಸ್ವಾಗತಿಸಲಾಯಿತು. ಅಲ್ಲೆ ನೆರೆದಿದ್ದ ಅಭಿಮಾನಿಗಳು ಘೋಷಣೆಗಳನ್ನು ಕೂಗಿದರು. ಇದೇ ವೇಳೆ ಅರ್ಷದ್ ತನ್ನ ತಂದೆಯನ್ನು ತಬ್ಬಿಕೊಂಡಿದ್ದ ದೃಶ್ಯ ನೆರೆದಿದ್ದವರ ಗಮನ ಸೆಳೆಯಿತು. ಇದಾದ ಬಳಿಕ ಪಾಕಿಸ್ತಾನದ ಅಥ್ಲೀಟ್ ತೆರೆದ ಬಸ್ ಪರೇಡ್ನಲ್ಲಿ ಪಾಲ್ಗೊಂಡರು.
Huge Huge Huge respect for #Arshad_Nadeem ❤️❤️❤️❤️❤️👌👌👌#ArshadNadeem #Paris2024 pic.twitter.com/5pg7iuuGTL
— Qadir Khawaja (@iamqadirkhawaja) August 11, 2024
ನದೀಮ್ ಸ್ಫೂರ್ತಿದಾಯಕ ಕಥೆ: ನದೀಮ್ ಅವರು ಪಾಕಿಸ್ತಾನದ ಪಂಜಾಬ್ನಲ್ಲಿ ಜನಿಸಿದರು. ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ಕಾರಣ ನದೀಮ್ ಬಾಲ್ಯದಲ್ಲಿ ಹೊಲ ಗದ್ದೆಗಳಲ್ಲಿ ಕಟ್ಟಿಗೆ ಎಸೆಯುವ ಮೂಲಕ ಜಾವೆಲಿನ್ ಅಭ್ಯಾಸ ನಡೆಸುತ್ತಿದ್ದರು. ಇಂದು ಇಡೀ ಪಾಕಿಸ್ತಾನ ಗುರುತಿಸುವಂತಹ ಅಮೋಘ ಸಾಧನೆ ಮಾಡಿ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: ವಿನೇಶ್ ಫೋಗಟ್ ಮೇಲ್ಮನವಿ ತೀರ್ಪಿನ ಗಡುವು ವಿಸ್ತರಣೆ: CAS ನಿರ್ಧಾರ ಪ್ರಕಟ ಯಾವಾಗ? - PARIS OLYMPICS 2024