ETV Bharat / sports

ಟೀಂ ಇಂಡಿಯಾ ಹೆಸರಲ್ಲಿದ್ದ ದೊಡ್ಡ ದಾಖಲೆ ಮುರಿದ ಪಾಕಿಸ್ತಾನ: ಇದೀಗ ಈ ರೆಕಾರ್ಡ್​ ಬರೆದ ಏಷ್ಯಾದ ಮೊದಲ ತಂಡ ಪಾಕ್​!

ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿ ಭಾರತದ ಹೆಸರಲ್ಲಿದ್ದ ದಾಖಲೆಯೊಂದನ್ನು ಮುರಿದುಹಾಕಿದೆ.

ಪಾಕಿಸ್ತಾನ ತಂಡ
ಪಾಕಿಸ್ತಾನ ತಂಡ (IANS)
author img

By ETV Bharat Sports Team

Published : Nov 9, 2024, 2:53 PM IST

ಹೈದರಾಬಾದ್​: ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವೆ ಮೂರು ಪಂದ್ಯಗಳ ಏಕದಿನ (ODI) ಸರಣಿ ನಡೆಯುತ್ತಿದೆ. ಎರಡನೇ ಪಂದ್ಯದಲ್ಲಿ ಪಾಕಿಸ್ತಾನ 9 ವಿಕೆಟ್​ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಭಾರತದ ಹೆಸರಿನಲ್ಲಿದ್ದ ಅಪರೂಪದ ದಾಖಲೆ ಮುರಿದಿದೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ್ದ ಆಸೀಸ್​ ಅಲ್ಪಮೊತ್ತಕ್ಕೆ ಸರ್ವಪತನ ಕಂಡಿತ್ತು. ಪಾಕಿಸ್ತಾನದ ಬೌಲಿಂಗ್​ ದಾಳಿ ಎದುರಿಸಲು ಆಸೀಸ್​ ಆಟಗಾರರು ವಿಫಲರಾದರು. ಸ್ಟೀವ್​ ಸ್ಮಿತ್​ (35) ಹೊರತು ಪಡಿಸಿ ಉಳಿದ ಆಟಗಾರರು ಕನಿಷ್ಠ 20 ರನ್​ಗಳಿಸಲು ಸಾಧ್ಯವಾಗಲಿಲ್ಲ. ಆರಂಭಿಕರಾಗಿ ಬಂದ ಜೇಕ್​ ಫ್ರೆಸರ್​ (13) ಮತ್ತು ಮ್ಯಾಥ್ಯು ಶಾರ್ಟ್​ (19) ಶಹೀನ್​ ಆಫ್ರಿದಿ ಬೌಲಿಂಗ್​ ಬಲೆಗೆ ಬಿದ್ದು ಬಹುಬೇಗ ನಿರ್ಗಮಿಸಿದರು.

ಮೊಹ್ಮದ್​ ರಿಜ್ವಾನ್​
ಮೊಹ್ಮದ್​ ರಿಜ್ವಾನ್​ (IANS)

ನಂತರ ಬಂದ ಆಟಗಾರರು ಕ್ರೀಸ್​ಗೆ ಕಚ್ಚಿಕೊಳ್ಳಲು ಸಾಧ್ಯವಾಗದೇ ಪೆವಿಲಿಯನ್​ ಪರೆಡ್​ ಮಾಡಿದರು. ಜೋಶ್​ ಇಂಗ್ಲಿಸ್​ (18), ಲ್ಯಾಬುಸ್ಚಾಗ್ನೆ (6), ಹರ್ಡಿ (14), ಮ್ಯಾಕ್ಸ್​ವೆಲ್(16)​, ಕಮಿನ್ಸ್​ (13), ಸ್ಟಾರ್ಕ್ (1)​, ಜಾಂಪ (18) ರನ್​ಗಳಿಸುವಲ್ಲಿ ವಿಫಲರಾದರು. ಇದರೊಂದಿಗೆ ಪಾಕಿಸ್ತಾನಕ್ಕೆ 163 ರನ್​ಗಳ ಸಾಮಾನ್ಯ ಗುರಿ ನೀಡಿತು.

ಪಾಕಿಸ್ತಾನ ತಂಡ
ಪಾಕಿಸ್ತಾನ ತಂಡ (IANS)

ಇದನ್ನು ಬೆನ್ನಟಿದ ಪಾಕ್​, ಆರಂಭಿಕ ಬ್ಯಾಟರ್​ಗಳಾದ ಅಯ್ಯೂಬ್​ (82) ಮತ್ತು ಅಬ್ದುಲ್ಲಾ ಶಫಿಖ್​ (64) ಬ್ಯಾಟಿಂಗ್​ ನೆರವಿನಿಂದ 1 ವಿಕೆಟ್​ ಕಳೆದುಕೊಂಡು ಸುಲಭವಾಗಿ ಪಂದ್ಯವನ್ನು ಗೆದ್ದುಕೊಂಡಿತು. ಇದರೊಂದಿಗೆ 1-1 ಅಂತರದಿಂದ ಸರಣಿ ಸಮಬಲ ಸಾಧಿಸಿದ ಪಾಕ್​ ಭಾರತದ ಹೆಸರಿನಲ್ಲಿದ್ದ ದಾಖಲೆಯೊಂದನ್ನು ಮುರಿದಿದೆ.

ಟೀಂ ಇಂಡಿಯಾ
ಟೀಂ ಇಂಡಿಯಾ (IANS)

ಏಷ್ಯಾದ ಮೊದಲ ತಂಡ: ಇದು ಆಸ್ಟ್ರೇಲಿಯಾ ನೆಲದಲ್ಲಿ ಏಕದಿನ ಪಂದ್ಯಗಳಲ್ಲಿ ಪಾಕಿಸ್ತಾನಕ್ಕೆ 41ನೇ ಜಯವಾಗಿದೆ. ಇದರೊಂದಿಗೆ ಆಸ್ಟ್ರೇಲಿಯದಲ್ಲಿ 40ಕ್ಕೂ ಹೆಚ್ಚು ಏಕದಿನ ಪಂದ್ಯಗಳನ್ನು ಗೆದ್ದ ಏಷ್ಯಾದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾಕಿಸ್ತಾನ ತಂಡ ಪಾತ್ರವಾಗಿದ್ದು, ಭಾರತದ ದಾಖಲೆಯನ್ನು ಮುರಿದಿದೆ. ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಒಟ್ಟು 40 ಏಕದಿನ ಪಂದ್ಯಗಳನ್ನು ಗೆದ್ದಿತ್ತು.

ಇದೀಗ ಪಾಕಿಸ್ತಾನ ತಂಡ ಭಾರತ ತಂಡಕ್ಕಿಂತ ಒಂದು ಹೆಜ್ಜೆ ಮುಂದೆ ಸಾಗಿದೆ. ಈ ಪಟ್ಟಿಯಲ್ಲಿ ಶ್ರೀಲಂಕಾ ಮೂರನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ನೆಲದಲ್ಲಿ ಲಂಕಾ ಒಟ್ಟು 29 ಏಕದಿನ ಪಂದ್ಯಗಳನ್ನು ಗೆದ್ದಿದೆ. ನಾಲ್ಕನೇ ಸ್ಥಾನದಲ್ಲಿ ಬಾಂಗ್ಲಾದೇಶ ಇದ್ದು ಇದುವರೆಗೂ ಆಸೀಸ್​ ನೆಲದಲ್ಲಿ ಎರಡು ಪಂದ್ಯಗಳನ್ನು ಗೆದ್ದುಕೊಂಡಿದೆ.

ಆಸ್ಟ್ರೇಲಿಯಾ
ಆಸ್ಟ್ರೇಲಿಯಾ (IANS)

ಆಸ್ಟ್ರೇಲಿಯಾ ನೆಲದಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಗೆದ್ದ ಏಷ್ಯಾದ ತಂಡಗಳು

  • ಪಾಕಿಸ್ತಾನ - 41
  • ಭಾರತ - 40
  • ಶ್ರೀಲಂಕಾ - 29
  • ಬಾಂಗ್ಲಾದೇಶ - 2

ಇದನ್ನೂ ಓದಿ: ಆಸ್ಟ್ರೇಲಿಯಾ ಆಟಗಾರನ ಮಾತು ಕೇಳಿ DRS ತೆಗೆದುಕೊಂಡು ಮಂಗನಾದ ಪಾಕ್​ ನಾಯಕ: ವಿಡಿಯೋ ವೈರಲ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.