ಹೈದರಾಬಾದ್: ಕ್ರಿಕೆಟ್ ಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಶತಕ ಸಿಡಿಸಿ ದಾಖಲೆ ಬರೆಯಬೇಕೆಂಬುದು ಪ್ರತಿಯೊಬ್ಬ ಬ್ಯಾಟರ್ಗಳ ಕನಸಾಗಿರುತ್ತದೆ. ಈ ಮೈದಾದನಲ್ಲಿ ಯಾರೇ ಕ್ರಿಕೆಟರ್ ಶತಕ ಸಿಡಿಸುವುದಾಗಲೀ ಅಥವಾ ಹೆಚ್ಚು ವಿಕೆಟ್ಗಳನ್ನು ಪಡೆಯುವುಂತಹ ಸಾಧನೆ ಮಾಡಿದರೆ ಮೈದಾನದ ಫಲಕ ಪಟ್ಟಿಯಲ್ಲಿ ಅವರ ಹೆಸರನ್ನು ಸೇರಿಸಿ ವಿಶೇಷ ಗೌರವ ಸಲ್ಲಿಸಲಾಗುತ್ತದೆ. ಹಾಗಾಗಿ ಈ ಮೈದಾನದಲ್ಲಿ ದಾಖಲೆ ಬರೆಯಲು ಬೌಲರ್ ಮತ್ತು ಬ್ಯಾಟರ್ಗಳು ಹವಣಿಸುತ್ತಾರೆ.
ಇಲ್ಲಿಯವರೆಗೆ, ಭಾರತೀಯ ಹತ್ತು ಆಟಗಾರರು ಮಾತ್ರ ಲಾರ್ಡ್ಸ್‌ನಲ್ಲಿ ಶತಕ ಗಳಿಸಿ ಯಶಸ್ವಿಯಾಗಿದ್ದಾರೆ. ಈ ಪೈಕಿ ಕನ್ನಡಿಗ ಕೆ.ಎಲ್ ರಾಹುಲ್ ಕೂಡ ಒಬ್ಬರಾಗಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಇದೇ ದಿನ ಅಂದರೆ 2021 ಆಗಸ್ಟ್ 12ರಂದು ಲಾರ್ಡ್ಸ್ ಕ್ರಿಕೆಟ್ ಮೈದಾನ ಕನ್ನಡಿಗ ಕೆ.ಎಲ್ ರಾಹುಲ್ ಶತಕ ಸಿಡಿಸಿ ಹಲವು ದಾಖಲೆ ಬರೆದಿದ್ದರು. ಜತೆಗೆ ತಂಡದ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.
OTD,KL Rahul shows his class at lord's and helps india to win a brilliant test match at home of Cricket.
— Sujeet Suman (@sujeetsuman1991) August 12, 2024
It's never easy to score runs against Jimmy Anderson & Stuart Broad in cloudy conditions in their backyard and he didn't only score but won the matchpic.twitter.com/Y5jAqbqbyq
ಇಂಗ್ಲೆಂಡ್ ಪ್ರವಾಸದಲ್ಲಿದ್ಧ ಭಾರತ ಕ್ರಿಕೆಟ್ ತಂಡ ಈ ದಿನ ಲಾರ್ಡ್ಸ್ ಮೈದಾನದಲ್ಲಿ ಎರಡನೇ ಟೆಸ್ಟ್ ಪಂದ್ಯವನ್ನಾಡಿತ್ತು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ಬ್ಯಾಟರ್ ಆಗಿ ಕ್ರೀಸಿಗಿಳಿದಿದ್ದ ರಾಹುಲ್ ಆಕರ್ಷಕ ಇನ್ನಿಂಗ್ಸ್ ಆಡಿ ಹಲವು ದಾಖಲೆಗಳನ್ನು ಬರೆದಿದ್ದರು. ಆತಿಥೇಯ ಇಂಗ್ಲೆಂಡ್ ವಿರುದ್ಧ ರಾಹುಲ್ (129 ರನ್) ಶತಕ ಸಿಡಿಸಿ ತಮ್ಮ ಹೆಸಿರಿಗೆ ಹೊಸ ದಾಖಲೆಯನ್ನು ಸೇರಿಸಿಕೊಂಡಿದ್ದರು.
ಒಂದು ಶತಕ ಹಲವು ದಾಖಲೆ: ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಟೀಂ ಇಂಡಿಯಾ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್ ಅವರ ದಾಖಲೆ ಸರಿಗಟ್ಟಿದರು. ಏಷ್ಯಾದಿಂದ ಹೊರಗೆ ನಡೆದ ಕ್ರಿಕೆಟ್ ಪಂದ್ಯಗಳಲ್ಲಿ ಅತಿ ಹೆಚ್ಚು 4 ಶತಕ ಸಿಡಿಸಿದ ವೀರು ದಾಖಲೆಯನ್ನು ರಾಹುಲ್ ಸರಿಗಟ್ಟಿದರು.
ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಭಾರತದ ಪರ ಆರಂಭಿಕರಾಗಿ ಶತಕ ಸಿಡಿಸಿದ್ದ ರಾಹುಲ್ ಮೂರನೇ ಆಟಗಾರ ಎನಿಸಿಕೊಂಡಿದ್ದರು. ಇದಕ್ಕೂ ಮೊದಲು 1952ರಲ್ಲಿ ವಿನೂ ಮಂಕಡ್ ಹಾಗೂ 1990ರಲ್ಲಿ ರವಿಶಾಸ್ತ್ರಿ ಈ ಮೈದಾನದಲ್ಲಿ ಶತಕ ಸಿಡಿಸಿದ್ದರು. ಇದಾದ ಬಳಿಕ ರಾಹುಲ್ ಈ ಸಾಧನೆ ಮಾಡಿದ್ದರು.
ಇದರ ಜೊತೆಗೆ 129ರನ್ ಕಲೆಹಾಕುವ ಮೂಲಕ ಲಾರ್ಡ್ಸ್‌ನಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ಗಳಿಕೆ ಮಾಡಿರುವ ನಾಲ್ಕನೇ ಆಟಗಾರ ಎನಿಸಿಕೊಂಡಿದ್ದರು. ಇದಕ್ಕೂ ಮೊದಲು ವಿನೂ ಮಂಕಡ್(184ರನ್), ದಿಲೀಪ್(157), ಸೌರವ್ ಗಂಗೂಲಿ(131ರನ್) ಈ ಸಾಧನೆ ಮಾಡಿದ್ದರು.
ಕೆಎಲ್ ರಾಹುಲ್ ಅವರ ಭರ್ಜರಿ ಬ್ಯಾಟಿಂಗ್ನಿಂದಾಗಿ ಈ ಪಂದ್ಯದಲ್ಲಿ ಭಾರತ 150 ರನ್ಗಳಿಂದ ಗೆಲುವು ಸಾಧಿಸಿ ದಾಖಲೆ ನಿರ್ಮಿಸಿತ್ತು.