ETV Bharat / sports

ಶ್ವಾಸನಾಳದಲ್ಲಿ ಆಹಾರ ಸಿಲುಕಿ 5 ಬಾರಿಯ ಒಲಿಂಪಿಯನ್​ ಅಥ್ಲೀಟ್​ ಸಾವು - Olympian Athlete Dies

ಶ್ವಾಸನಾಳದಲ್ಲಿ ಆಹಾರ​ ಸಿಲುಕಿಕೊಂಡು ಮಾಜಿ ಒಲಿಂಪಿಕ್ಸ್​ ಅಥ್ಲೀಟ್​ ಸಾವನ್ನಪ್ಪಿರುವ ಘಟನೆ ಅಮೆರಿಕದ ಲಾಸ್ ವೇಗಾಸ್​ನಲ್ಲಿ ನಡೆದಿದೆ.

ಡೇನಿಯಲಾ ಲಾರಿಯಲ್ ಚಿರಿನೋಸ್
ಡೇನಿಯಲಾ ಲಾರಿಯಲ್ ಚಿರಿನೋಸ್ (AFP)
author img

By ETV Bharat Sports Team

Published : Aug 20, 2024, 5:39 PM IST

ನವದೆಹಲಿ: ಐದು ಬಾರಿಯ ಒಲಿಂಪಿಯನ್​ ಮತ್ತು ವೆನೆಜುವೆಲಾದ ಮಾಜಿ ಒಲಿಂಪಿಕ್ಸ್​ ಅಥ್ಲೀಟ್​ ಡೇನಿಯಲಾ ಲಾರಿಯಲ್ ಚಿರಿನೋಸ್ (50) ಎಂಬವರು ಶ್ವಾಸನಾಳದಲ್ಲಿ ಆಹಾರ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.

ಒಲಿಂಪಿಕ್ಸ್ ಸೈಕ್ಲಿಸ್ಟ್ ಆಗಿದ್ದ ಡೇನಿಯೆಲಾ ಅಮೆರಿಕದ ಲಾಸ್ ವೇಗಾಸ್​ನಲ್ಲಿರುವ ತಮ್ಮ ಅಪಾರ್ಟ್ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಫಾಕ್ಸ್ ಸ್ಪೋರ್ಟ್ಸ್ ವರದಿ ಮಾಡಿದೆ.

ಡೇನಿಯಲಾ ಲಾರಿಯಲ್ ಚಿರಿನೋಸ್
ಡೇನಿಯಲಾ ಲಾರಿಯಲ್ ಚಿರಿನೋಸ್ (AFP)

ಡೇನಿಯಾಲ್​ ಅವರು ಹೋಟೆಲ್​ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕಳೆದೊಂದು ವಾರದಿಂದ ಕೆಲಸಕ್ಕೆ ಗೈರಾಗಿದ್ದರು. ಕರೆ ಮಾಡಿದರೆ ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ವಿಷಯ ತಿಳಿಸಲಾಗಿತ್ತು.

ಈ ಮಾಹಿತಿ ಆಧರಿಸಿ ತನಿಖೆ ನಡೆಸಿದ ಪೊಲೀಸರು ಅಪಾರ್ಟ್‌ಮೆಂಟ್​ನಲ್ಲಿ ಅಥ್ಲೀಟ್‌ನ ಮೃತದೇಹವನ್ನು ಪತ್ತೆ ಮಾಡಿದ್ದಾರೆ. ಮರಣೋತ್ತರ ವರದಿಯಲ್ಲಿ, ಶ್ವಾಸನಾಳದಲ್ಲಿ ಆಹಾರ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿರುವುದಾಗಿ ಎಂದು ತಿಳಿದು ಬಂದಿದೆ.

ವೆನೆಜುವೆಲಾದ ಒಲಿಂಪಿಕ್ ಸಮಿತಿ ಶುಕ್ರವಾರ ಸಾಮಾಜಿಕ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಸಾವಿನ ಸುದ್ದಿಯನ್ನು ದೃಢಪಡಿಸಿದೆ. ಸ್ಪ್ಯಾನಿಷ್ ಭಾಷೆಯಲ್ಲಿ ಮಾಡಿರುವ ಈ ಪೋಸ್ಟ್‌ನಲ್ಲಿ, ವೆನೆಜುವೆಲಾದ ಒಲಿಂಪಿಕ್ ಸಮಿತಿ ನಿರ್ದೇಶಕರ ಮಂಡಳಿಯು ಡೇನಿಯಲಾ ಲಾರಿಯಲ್ ಅವರ ಆಕಸ್ಮಿಕ ಸಾವಿಗೆ ವಿಷಾದಿಸುತ್ತೇವೆ. ಐದು ಒಲಿಂಪಿಕ್ ಕ್ರೀಡಾಕೂಟಗಳ ಟ್ರ್ಯಾಕ್ ಸೈಕ್ಲಿಂಗ್‌ ಸ್ಪರ್ಧೆಯಲ್ಲಿ ಅವರು ಭಾಗಿಯಾಗಿದ್ದರು, ನಾಲ್ಕು ಒಲಂಪಿಕ್ಸ್ ಡಿಪ್ಲೊಮಾಗಳನ್ನು ಗೆದ್ದುಕೊಂಡಿದ್ದರು. ಅವರ ಈ ಗೆಲುವು ನಮ್ಮನ್ನು ಹೆಮ್ಮೆ ಪಡುವಂತೆ ಮಾಡಿದೆ ಎಂದು ಬರೆದುಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.