ಕ್ರೈಸ್ಟ್‌ಚರ್ಚ್ (ನ್ಯೂಜಿಲ್ಯಾಂಡ್ ): ಹ್ಯಾಗ್ಲಿ ಓವಲ್ ಮೈದಾನದಲ್ಲಿ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ನಡುವೆ ನಡೆದ ನಾಲ್ಕನೇ ಟಿ20 ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ತಂಡ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಮಣಿಸಿದೆ. ಈ ಗೆಲುವಿನೊಂದಿಗೆ ನ್ಯೂಜಿಲ್ಯಾಂಡ್ 5 ಪಂದ್ಯಗಳ ಸರಣಿಯಲ್ಲಿ 4-0 ಮುನ್ನಡೆ ಸಾಧಿಸಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಮೊನಚು ಕಳೆದುಕೊಂಡ ಪಾಕ್, ಕಳಪೆ ಪ್ರದರ್ಶನದ ಆಟದಿಂದ ದಂಡ ತೆತ್ತಿದೆ. ನ್ಯೂಜಿಲ್ಯಾಂಡ್ ಇದುವರೆಗೆ ಆಡಿದ ನಾಲ್ಕೂ ಟಿ20 ಪಂದ್ಯಗಳಲ್ಲಿ ಏಕಪಕ್ಷೀಯ ಜಯ ಸಾಧಿಸಿದೆ.
ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 158ರನ್ ಕಲೆಹಾಕಿತ್ತು. ಇದಕ್ಕೆ ಉತ್ತರವಾಗಿ ನ್ಯೂಜಿಲ್ಯಾಂಡ್ ತಂಡ 18.1 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಸುಲಭವಾಗಿ ಗೆಲುವಿನ ದಡ ಸೇರಿತು. ಆರಂಭಿಕ ಆಘಾತ ಎದುರಿಸಿದ ಕಿವೀಸ್, 2.4 ಓವರ್‌ಗಳಲ್ಲಿ 20 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡಿತು. ಆದರೆ, ಇದರ ನಂತರ ಡೇರಿಲ್ ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಅಜೇಯ ಅರ್ಧಶತಕಗಳನ್ನು ಸಿಡಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. 44 ಎಸೆತಗಳನ್ನು ಎದುರಿಸಿದ ಡೇರಿಲ್ ಮಿಚೆಲ್ 7 ಬೌಂಡರಿ ಮತ್ತು 2 ಸಿಕ್ಸ್ ಸಹಿತ 72 ರನ್ ಗಳಿಸಿದರೆ, ಗ್ಲೆನ್ ಫಿಲಿಪ್ಸ್ ಕೂಡ 52 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 3 ಸಿಕ್ಸ್ ನೆರವಿನಿಂದ 70 ರನ್ ಗಳಿಸಿದರು. ಮಿಚೆಲ್ ಮತ್ತು ಗ್ಲೆನ್ ಫಿಲಿಪ್ಸ್ ಜೋಡಿಯು 4ನೇ ವಿಕೆಟ್ಗೆ ಅಜೇಯ 139 ರನ್‌ಗಳ ಜೊತೆಯಾಟ ತಂಡಕ್ಕೆ ಗೆಲುವು ನೀಡಿತು. ಗೆಲುವಿನ ದಡ ಸೇರಿಸಿದ ಮಿಚೆಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. ಪಾಕ್ ಪರ ವೇಗಿ ಶಾಹೀನ್ ಅಫ್ರಿದಿ 3 ವಿಕೆಟ್ ಪಡೆದರು.
-
An unbeaten 90 by Mohammad Rizwan has pushed Pakistan to a modest total.
— ICC (@ICC) January 19, 2024 " class="align-text-top noRightClick twitterSection" data="
Can they defend it?#NZvPAK 📝: https://t.co/YPWDS44dzI pic.twitter.com/ZbXBsu0DfE
">An unbeaten 90 by Mohammad Rizwan has pushed Pakistan to a modest total.
— ICC (@ICC) January 19, 2024
Can they defend it?#NZvPAK 📝: https://t.co/YPWDS44dzI pic.twitter.com/ZbXBsu0DfEAn unbeaten 90 by Mohammad Rizwan has pushed Pakistan to a modest total.
— ICC (@ICC) January 19, 2024
Can they defend it?#NZvPAK 📝: https://t.co/YPWDS44dzI pic.twitter.com/ZbXBsu0DfE
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿತು. ಪಾಕಿಸ್ತಾನ ಪರ ಮೊಹಮ್ಮದ್ ರಿಜ್ವಾನ್ ಗರಿಷ್ಠ 90 ರನ್ ಗಳಿಸಿ ಅಜೇಯರಾಗಿ ಉಳಿದರು. ಇದರಲ್ಲಿ ಆರು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳು ಸೇರಿದ್ದವು. ಆದರೆ, ಅವರನ್ನು ಹೊರತುಪಡಿಸಿ ತಂಡದ ಉಳಿದ ಯಾವುದೇ ಬ್ಯಾಟರ್ಗಳು ಹೆಚ್ಚು ಹೊತ್ತು ಕ್ರೀಸ್ನಲ್ಲಿ ಹೋರಾಡಲಿಲ್ಲ. ಮೊದಲ ಮೂರು ಪಂದ್ಯಗಳಲ್ಲಿ ಅರ್ಧಶತಕಗಳನ್ನು ಗಳಿಸಿದ್ದ ಬಾಬರ್ ಅಜಂ, ಈ ಪಂದ್ಯದಲ್ಲಿ 19 ರನ್ ಗಳಿಸಿ ಔಟಾದರೆ, ಮೊಹಮ್ಮದ್ ನವಾಜ್ ಕೂಡ 9 ಎಸೆತಗಳಲ್ಲಿ 21 ರನ್ ಗಳಿಸಿ ನಿರಾಸೆ ಮೂಡಿಸಿದರು. ಅಗ್ರ ಕ್ರಮಾಂಕದ ಬ್ಯಾಟರ್‌ಗಳೆಲ್ಲ ಒಬ್ಬರ ನಂತರ ಮತ್ತೊಬ್ಬರಂತೆ ಪೆವಿಲಿಯನ್ ಪರೇಡ್ ನಡೆಸಿದರು. ಕಿವೀಸ್ ಪರ ಸೀಮರ್‌ಗಳಾದ ಮ್ಯಾಟ್ ಹೆನ್ರಿ ಮತ್ತು ಲಾಕಿ ಫರ್ಗುಸನ್ ತಲಾ 2 ವಿಕೆಟ್ ಪಡೆದರು.
-
A solid fourth-wicket stand helped New Zealand overcome early stutters and seal their fourth straight T20I win over Pakistan 👊#NZvPAK 📝: https://t.co/6n8vkpYTlk pic.twitter.com/qeXOUS2im3
— ICC (@ICC) January 19, 2024 " class="align-text-top noRightClick twitterSection" data="
">A solid fourth-wicket stand helped New Zealand overcome early stutters and seal their fourth straight T20I win over Pakistan 👊#NZvPAK 📝: https://t.co/6n8vkpYTlk pic.twitter.com/qeXOUS2im3
— ICC (@ICC) January 19, 2024A solid fourth-wicket stand helped New Zealand overcome early stutters and seal their fourth straight T20I win over Pakistan 👊#NZvPAK 📝: https://t.co/6n8vkpYTlk pic.twitter.com/qeXOUS2im3
— ICC (@ICC) January 19, 2024
ಉಭಯ ತಂಡಗಳು ಮುಂದೆ ಹ್ಯಾಗ್ಲಿ ಓವಲ್ ಮೈದಾನದಲ್ಲಿ ಭಾನುವಾರ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಆ ಪಂದ್ಯದಲ್ಲಿ ಗೆದ್ದರೆ ನ್ಯೂಜಿಲ್ಯಾಂಡ್ ಸರಣಿಯಲ್ಲಿ 5-0 ಅಂತರದಲ್ಲಿ ಕ್ಲೀನ್ ಸ್ವೀಪ್ ಸಾಧಿಸಲಿದೆ. ಅದಕ್ಕೆ ಪಾಕ್ ಅವಕಾಶ ಮಾಡಿಕೊಡುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಗಬ್ಬಾ ಕೋಟೆ ಭೇದಿಸಿ ಆಸೀಸ್ ಬಗ್ಗುಬಡಿದ ಭಾರತ: ಐತಿಹಾಸಿಕ ಗೆಲುವಿಗೆ 3 ವರ್ಷ