ನವದೆಹಲಿ: ಪ್ಯಾರಿಸ್ ಒಲಿಂಪಿಕ್ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಇದೀಗ ಡೈಮಂಡ್ ಲೀಗ್ಗಾಗಿ ತಯಾರಿ ನಡೆಸುತ್ತಿದ್ದಾರೆ. ಇದಕ್ಕಾಗಿ ಸ್ವಿಟ್ಜರ್ಲೆಂಡ್‌ಗೆ ತೆರಳಿದ್ದಾರೆ. ಇದೇ ತಿಂಗಳು ಆಗಸ್ಟ್ 22ರಿಂದ ಲೌಸನ್ನೆಯಲ್ಲಿ ಆರಂಭಗೊಳ್ಳುತ್ತಿರುವ ಡೈಮಂಡ್ ಲೀಗ್ ಅರ್ಹತಾ ಸ್ಪರ್ಧೆಯಲ್ಲಿ ಭಾಗವಹಿಸುವುದಾಗಿಯೂ ನೀರಜ್ ಚೋಪ್ರಾ ತಿಳಿಸಿದ್ದಾರೆ.
ಇತ್ತೀಚಿಗೆ ಪ್ಯಾರಿಸ್ನಲ್ಲಿ ನಡೆದ ಒಲಿಂಪಿಕ್ ವೇಳೆ ಗಾಯಗೊಂಡಿದ್ದರೂ ಅದು ಉಲ್ಬಣಗೊಳ್ಳದಂತೆ ಎಚ್ಚರ ವಹಿಸಿದ್ದೇನೆ ಎಂದು ಚೋಪ್ರಾ ತಿಳಿಸಿದ್ದಾರೆ. 'ಒಲಿಂಪಿಕ್ ನಂತರ ನಾನು ನನ್ನ ಆಟವನ್ನು ವಿಸ್ತರಿಸಬೇಕು ಎಂದು ಭಾವಿಸಿದ್ದೇನೆ. ಹಾಗಾಗಿ ಮುಂಬರುವ ಪ್ರಮುಖ ಲೀಗ್ಗಳಲ್ಲಿ ಭಾಗಿಯಾಗಲು ನಿರ್ಧರಿಸಿದ್ದೇನೆ. ಅದಕ್ಕಾಗಿ ಈಗಿನಿಂದಲೇ ಸಿದ್ಧತೆಯನ್ನು ಮಾಡಿಕೊಳ್ಳಲಿದ್ದೇನೆ ಎಂದಿದ್ದಾರೆ.
#WATCH | On Arshad Nadeem's 92.97 metres throw at the finals of Javelin throw at the Paris Olympics, Neeraj Chopra says, " i never thought i couldn't do it... arshad nadeem's previous best was at 90.18 metres which he threw at the commonwealth games, and my previous best was 89.94… pic.twitter.com/Ips0jrZ3aM
— ANI (@ANI) August 17, 2024
90 ಮೀಟರ್ ಗುರಿಯ ಬಗ್ಗೆ ಕೇಳಿದಾಗ, "ನಾನು ಎಲ್ಲಾ ರೀತಿಯ ಸಿದ್ಧತೆ ನಡೆಸುತ್ತಿದ್ದೇನೆ, ಇದೇ ಪ್ಯಾರಿಸ್ ಒಲಿಂಪಿಕ್ನಲ್ಲಿ 90 ಮೀಟರ್ ಗುರಿಯನ್ನು ದಾಟಬಹುದೆಂದು ಭಾವಿಸಿದ್ದೆ. ಆದ್ರೆ ಈ ಲೀಗ್ನಲ್ಲಿ ಆಗಬಹುದೆಂದು ನಾನು ಭಾವಿಸಿದ್ದೇನೆ. 'ಈಗ ನಾನು ಮುಂದಿನ ಎರಡು ಅಥವಾ ಮೂರು ಸ್ಪರ್ಧೆಗಳಲ್ಲಿ 100 ಪ್ರತಿಶತದಷ್ಟು ಎಲ್ಲಾ ಪ್ರಯತ್ನ ಮಾಡಲಿದ್ದೇನೆ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಈ ಸಮಯದಲ್ಲಿ, ನನ್ನ ನ್ಯೂನತೆಗಳನ್ನು ಸುಧಾರಿಸುವಲ್ಲಿ ಹೆಚ್ಚಿನ ಗಮನ ಹರಿಸಲಿದ್ದೇನೆ ಎಂದು ತಿಳಿಸಿದ್ದಾರೆ.
ನೀರಜ್ ಅವರು ದೀರ್ಘ ಕಾಲ ಬೆನ್ನುನೋವಿನಿಂದ ಬಳಲುತ್ತಿದ್ದರೂ ಅವರು ತಮ್ಮ ಆಟವನ್ನು ಮುಂದುವರೆಸಲು ಬಯಸಿದ್ದಾರೆ. ಹಾಗಾರಿ ಸ್ವಿಟ್ಜರ್ಲೆಂಡ್ ತಲುಪಿರುವ ಅವರು, ಡೈಮಂಡ್ ಲೀಗ್ ಅರ್ಹತಾ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ನಂತರ ಸೆಪ್ಟೆಂಬರ್ 13-14 ರಂದು ಬ್ರಸೆಲ್ಸ್‌ನಲ್ಲಿ ನಡೆಯಲಿರುವ ಡೈಮಂಡ್ ಲೀಗ್ ಫೈನಲ್‌ನಲ್ಲಿ ಭಾಗವಹಿಸಿ ಬಳಿಕ ತಮ್ಮ ಗಾಯದ ಸಮಸ್ಯೆ ಬಗ್ಗೆ ವೈದ್ಯರೊಂದಿಗೆ ಸಮಾಲೋಚನೆ ನಡೆಸುವುದಾಗಿ ತಿಳಿಸಿದ್ದಾರೆ.
ಸತತ ಎರಡು ಒಲಿಂಪಿಕ್ ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದ ನೀರಜ್ ಟೋಕಿಯೋ ಒಲಿಂಪಿಕ್ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಇದಾದ ಬಳಿಕ ಪ್ಯಾರಿಸ್ ಒಲಿಂಪಿಕ್ನಲ್ಲಿ 89.45 ಮೀಟರ್ ದೂರಕ್ಕೆ ಭರ್ಚಿ ಎಸೆದು ಬೆಳ್ಳಿಯನ್ನು ಗೆದ್ದಿದ್ದಾರೆ. ಆದರೆ ಈ ಈವೆಂಟ್ನಲ್ಲಿ ಭಾಗವಹಿಸಿದ್ದ ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್ 92.97 ಮೀಟರ್ ದೂರಕ್ಕೆ ಭರ್ಚಿ ಎಸೆದ ಚಿನ್ನವನ್ನು ಗೆದ್ದುಕೊಂಡಿದ್ದಾರೆ. ಅಲ್ಲದೇ ಈ ಹಿಂದೆ ದಾಖಲಾಗಿದ್ದ ಒಲಿಂಪಿಕ್ ದಾಖಲೆಯನ್ನು ಮುರಿದಿದ್ದಾರೆ. ಜತೆಗೆ ವೈಯಕ್ತಿಕ ಕ್ರೀಡೆಗಳಲ್ಲಿ ಪಾಕಿಸ್ತಾನಕ್ಕೆ ಚಿನ್ನದ ಪದಕ ಗೆದ್ದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಇದನ್ನೂ ಓದಿ: ಕ್ರಿಕೆಟ್ ಮೈದಾನಗಳಿಗೆ ಬಾಡಿಗೆ ಫ್ಲಡ್ಲೈಟ್ ಅಳವಡಿಸಲು ಮುಂದಾದ ಪಾಕಿಸ್ತಾನ: ನೆಟ್ಟಿಗರಿಂದ ಟ್ರೋಲ್ - RENTAL FLOODLIGHTS