ETV Bharat / sports

ಒಲಿಂಪಿಕ್ಸ್‌ ಚಿನ್ನದ ಬೇಟೆಗೆ ನೀರಜ್ ಚೋಪ್ರಾ ರೆಡಿ: ಪಂದ್ಯ ಯಾವಾಗ? ವೀಕ್ಷಿಸುವುದು ಹೇಗೆ ಗೊತ್ತೇ? - Neeraj Chopra

author img

By ETV Bharat Sports Team

Published : Aug 4, 2024, 2:24 PM IST

Updated : Aug 6, 2024, 1:00 PM IST

ಭಾರತದ ಸ್ಟಾರ್​ ಜಾವೆಲಿನ್​ ಕ್ರೀಡಾಪಟು ನೀರಜ್​ ಚೋಪ್ರಾ ಅವರ ಪಂದ್ಯ ಯಾವಾಗ? ಎಷ್ಟು ಹಂತಗಳಲ್ಲಿ ನಡೆಯಲಿದೆ? ಎಲ್ಲಿ ವೀಕ್ಷಿಸಬಹುದು ಎಂಬುದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ನೀರಜ್ ಚೋಪ್ರಾ
ನೀರಜ್ ಚೋಪ್ರಾ (IANS)

ಪ್ಯಾರಿಸ್​(ಫ್ರಾನ್ಸ್​): ​ಪ್ಯಾರಿಸ್​ ಒಲಿಂಪಿಕ್ಸ್​ ಆರಂಭವಾಗಿ ಇಂದಿಗೆ 11ನೇ ದಿನ. ಬಹುರಾಷ್ಟ್ರೀಯ ಕ್ರೀಡಾಕೂಟದಲ್ಲಿ ಈಗಾಗಲೇ ಹಲವಾರು ಕ್ರೀಡಾಪಟುಗಳು ಸೆಣಸಾಡಿ ಪದಕ ಗೆದ್ದಿದ್ದಾರೆ. ಭಾರತ ಕೂಡ ಈ ರಣರಂಗದಲ್ಲಿ ಎದುರಾಳಿಗಳನ್ನು ಮಣಿಸಿ ಮೂರು ಕಂಚಿನ ಪದಕಗಳನ್ನು ವಶಪಡಿಸಿಕೊಂಡಿದೆ. ಆದರೆ ಬೆಳ್ಳಿ ಮತ್ತು ಚಿನ್ನದ ಪದಕ ಇನ್ನೂ ಖಾತೆ ಸೇರಿಲ್ಲ. ಇದಕ್ಕಾಗಿ ದೇಶ ಕಾತುರದಿಂದ ಎದುರು ನೋಡುತ್ತಿದೆ. ಕೆಲವು ಆಟಗಾರರ ಮೇಲೆ ಚಿನ್ನದ ಪದಕ ಗೆಲ್ಲುವ ನಿರೀಕ್ಷೆಗಳು ಹೆಚ್ಚಿವೆ. ಈ ಪೈಕಿ ಗೋಲ್ಡನ್​ ಬಾಯ್​ ನೀರಜ್​ ಚೋಪ್ರಾ ಕೂಡ ಒಬ್ಬರು.

ಕಳೆದ ಬಾರಿ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜಾವಲಿನ್ ಥ್ರೋ​ ಸ್ಪರ್ಧೆಯಲ್ಲಿ ದೇಶಕ್ಕೆ ಮೊಟ್ಟ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದ ನೀರಜ್​ ಇಡೀ ಪ್ರಪಂಚವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದರು. ಈ ಬಾರಿಯೂ ಅವರು ಮತ್ತೊಮ್ಮ ಚಿನ್ನ ಗೆಲ್ಲುವ ಭರವಸೆ ಇದೆ. ಹಾಗಾಗಿ, ಎಲ್ಲರೂ ಜಾವೆಲಿನ್​ ಪಂದ್ಯಕ್ಕಾಗಿ ಎದುರು ನೋಡುತ್ತಿದ್ದಾರೆ.

ನೀರಜ್ ಚೋಪ್ರಾ ಪಂದ್ಯ: ನೀರಜ್ ಚೋಪ್ರಾ ಆಗಸ್ಟ್ 6ಕ್ಕೆ (ಇಂದು) ಒಲಿಂಪಿಕ್ಸ್​ ಜಾವೆಲಿನ್ ಎಸೆತದಲ್ಲಿ ಭಾಗವಹಿಸಲಿದ್ದಾರೆ. ಎ ಗುಂಪಿನ ಅರ್ಹತಾ ಸುತ್ತು ಮಧ್ಯಾಹ್ನ 1:50ಕ್ಕೆ ಪ್ರಾರಂಭವಾಗುತ್ತದೆ. ಬಿ ಗುಂಪಿನ ಪಂದ್ಯಗಳು ಅದೇ ದಿನ ಮಧ್ಯಾಹ್ನ 3:20ಕ್ಕೆ ನಡೆಯುತ್ತವೆ. ನೀರಜ್ ಅರ್ಹತಾ ಸುತ್ತಿನಿಂದ ಮುನ್ನಡೆ ಸಾಧಿಸಿದರೆ, ಆಗಸ್ಟ್ 8ರಂದು ರಾತ್ರಿ 11:55ಕ್ಕೆ ಫೈನಲ್‌ನಲ್ಲಿ ಭಾಗವಹಿಸುತ್ತಾರೆ.

ಪಂದ್ಯ ಎಲ್ಲಿ ವೀಕ್ಷಿಸಬೇಕು?: ಪ್ಯಾರಿಸ್ ಒಲಿಂಪಿಕ್ಸ್ 2024 ಅನ್ನು ಭಾರತದಲ್ಲಿ, ಸ್ಪೋರ್ಟ್ಸ್ 18 ನೆಟ್‌ವರ್ಕ್ ಟಿವಿ ಚಾನೆಲ್‌ಗಳಲ್ಲಿ ನೇರಪ್ರಸಾರ ಮಾಡಲಾಗುತ್ತಿದೆ. ಪ್ಯಾರಿಸ್ ಒಲಿಂಪಿಕ್ಸ್ ಅನ್ನು Sports18 1 ಮತ್ತು Sports18 1 HD ಇಂಗ್ಲಿಷ್‌ನಲ್ಲಿ ಪ್ರಸಾರ ಮಾಡಲಾಗುತ್ತಿದ್ದು, ತಮಿಳು ಮತ್ತು ತೆಲುಗು ಭಾಷೆ ಆಯ್ಕೆಗಳೂ ಲಭ್ಯವಿವೆ. Sports18 1 ಮತ್ತು Sports18 2 ಹಿಂದಿಯಲ್ಲಿ ಕ್ರೀಡೆಗಳನ್ನೂ ಸಹ ಪ್ರಸ್ತುತಪಡಿಸುತ್ತದೆ. ಈ ಎಲ್ಲಾ ಚಾನಲ್‌ಗಳಲ್ಲಿ ನೀವು ನೀರಜ್ ಚೋಪ್ರಾ ಅವರ ಜಾವೆಲಿನ್​ ಪಂದ್ಯವನ್ನು ಲೈವ್ ಆಗಿ ವೀಕ್ಷಿಸಬಹುದು.

ಇದನ್ನೂ ಓದಿ: ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವರೇ ಲಕ್ಷ್ಯ ಸೇನ್​?​: ತವರಿನಲ್ಲಿ ಭಾರೀ ನಿರೀಕ್ಷೆ - Lakshya Sen

Last Updated : Aug 6, 2024, 1:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.