ETV Bharat / sports

ರಾಜಕೀಯ ಬಿಟ್ಟು ಮತ್ತೆ ಕ್ರಿಕೆಟ್​ ಜಗತ್ತಿನತ್ತ ಮುಖ ಮಾಡಿದ ಸಿಕ್ಸರ್​ ಸಿಧು

author img

By ETV Bharat Karnataka Team

Published : Mar 19, 2024, 2:31 PM IST

2024ರ ಲೋಕಸಭೆ ಚುನಾವಣೆಯಿಂದ ದೂರ ಉಳಿಯಲು ನಿರ್ಧರಿಸಿರುವ ನವಜೋತ್ ಸಿಂಗ್ ಸಿಧು, IPL ಮೂಲಕ ಕಾಮೆಂಟರಿಗೆ ಪುನರಾಗಮನ ಮಾಡುತ್ತಿದ್ದಾರೆ.

Navjot Sidhu Return To The Cricket  Cricket Field From Political Stage  Navjot Sidhu news
ರಾಜಕೀಯ ಬಿಟ್ಟು ಮತ್ತೆ ಕ್ರಿಕೆಟ್​ ಜಗತ್ತಿನತ್ತ ಮುಖ ಮಾಡಿದ ಸಿಕ್ಸರ್​ ಸಿಧು!

ಚಂಡೀಗಢ(ಪಂಜಾಬ್)​: ರಾಜಕೀಯದಲ್ಲಿ ಎದುರಾಳಿಗಳ ವಿರುದ್ಧ ನಿರಂತರವಾಗಿ ಕಟು ಟೀಕೆಗಳನ್ನು ಮಾಡುತ್ತಿರುವ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಮತ್ತೆ ಕ್ರಿಕೆಟ್ ಜಗತ್ತಿನತ್ತ ಒಲವು ತೋರಿಸುತ್ತಿದ್ದಾರೆ. 6 ವರ್ಷಗಳ ನಂತರ ಇವರು ಕ್ರಿಕೆಟ್ ಕ್ಷೇತ್ರಕ್ಕೆ ಮರಳಲಿದ್ದಾರೆ. ಐಪಿಎಲ್ 2024ರ ಆರಂಭಿಕ ಪಂದ್ಯದಲ್ಲಿ ಸಿಧು ಕಾಮೆಂಟರಿ ಮಾಡಲಿದ್ದಾರೆ. ಈ ಕುರಿತು ಸಿಧು ಎಕ್ಸ್‌ನಲ್ಲಿ ಮಾಹಿತಿ ಪೋಸ್ಟ್ ಮಾಡಿದ್ದು, ಸ್ಟಾರ್ ಸ್ಪೋರ್ಟ್ಸ್ ವಾಹಿನಿಯೂ ಹಂಚಿಕೊಂಡಿದೆ.

ನವಜೋತ್ ಸಿಂಗ್ ಸಿಧು ಭಾರತೀಯ ಸ್ಟಾರ್ ಕ್ರಿಕೆಟಿಗರಲ್ಲಿ ಚಿರಪರಿಚಿತ ಮುಖ. ತಮ್ಮ ಬ್ಯಾಟ್‌ನಿಂದ ಕ್ರಿಕೆಟ್‌ನಲ್ಲಿ ಅನೇಕ ಐತಿಹಾಸಿಕ ಇನ್ನಿಂಗ್ಸ್‌ ಆಡಿದವರು. ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ದೀರ್ಘಕಾಲದವರೆಗೆ ಕ್ರಿಕೆಟ್‌ ಕಾಮೆಂಟೇಟರ್‌ ಆಗಿ ಕೆಲಸ ಮಾಡಿದ್ದರು. ನಂತರ ರಾಜಕೀಯಕ್ಕೆ ಸೇರಿದ್ದರಿಂದ ಕ್ರಿಕೆಟ್‌ನಿಂದ ದೂರವಿದ್ದರು.

2018ರ ಐಪಿಎಲ್‌ನಲ್ಲಿ ಕೊನೆಯ ಕಾಮೆಂಟರಿ: ಟೆಸ್ಟ್‌ನಲ್ಲಿ 3,202 ರನ್ ಮತ್ತು ODIಗಳಲ್ಲಿ 4,413 ರನ್ ಗಳಿಸಿರುವ ಸಿಧು ಸುಮಾರು 17 ವರ್ಷಗಳ ಕಾಲ ಕ್ರಿಕೆಟ್ ಜಗತ್ತಿನಲ್ಲಿದ್ದರು. 1999ರಲ್ಲಿ ಕ್ರಿಕೆಟ್‌ನಿಂದ ನಿವೃತ್ತರಾದರು. ಕ್ರಿಕೆಟ್ ಪಯಣ ಮುಗಿದ ನಂತರ ಕಾಮೆಂಟರಿಯಲ್ಲಿ ತಮ್ಮ ಮಾತಿನ ಮೂಲಕ ಜನರ ಮನ ಗೆದ್ದರು. ಕೊನೆಯದಾಗಿ 2018 ಐಪಿಎಲ್‌ನಲ್ಲಿ ಸಿಧು ಕಾಮೆಂಟರಿ ಮಾಡಿದ್ದರು. ಪಂಜಾಬ್ ಸರ್ಕಾರದಲ್ಲಿ ಸಚಿವರಾದ ನಂತರ, ಕಾಮೆಂಟರಿ ಪ್ಯಾನೆಲ್‌ನಿಂದ ಕೈಬಿಡಲಾಗಿತ್ತು. ಇದರ ನಂತರ ತಮ್ಮೆಲ್ಲಾ ಟಿವಿ ಕಾರ್ಯಕ್ರಮಗಳನ್ನು ಸಹ ತೊರೆದಿದ್ದರು.

ಮಾರ್ಚ್ 22ರಿಂದ ಐಪಿಎಲ್ ಶುರು: ಐಪಿಎಲ್ 17ನೇ ಸೀಸನ್ ಮಾರ್ಚ್ 22ರಿಂದ ಪ್ರಾರಂಭವಾಗಲಿದೆ. ಮೊದಲ ಪಂದ್ಯವು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವೆ ಚೆನ್ನೈನಲ್ಲಿ ನಡೆಯಲಿದೆ. ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಟೂರ್ನಿಯ ಮೊದಲ 21 ಪಂದ್ಯಗಳ ವೇಳಾಪಟ್ಟಿ ಮಾತ್ರ ಬಿಡುಗಡೆಯಾಗಿದೆ.

ಇದನ್ನೂ ಓದಿ: ಒಂದು ವರ್ಷದ ಸಿದ್ಧತೆ, ಆಟಗಾರರ ಬದ್ಧತೆ ಆರ್‌ಸಿಬಿ ಯಶಸ್ಸಿಗೆ ಕಾರಣ: ಸ್ಮೃತಿ ಮಂಧಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.