ETV Bharat / sports

ಕೌರ್​ ಗುಡುಗಿಗೆ ನಲುಗಿದ ಗುಜರಾತ್: ಮುಂಬೈ ವನಿತೆಯರಿಗೆ 7 ವಿಕೆಟ್​ ಜಯ, ಪ್ಲೇ ಆಫ್​​ಗೆ ಎಂಟ್ರಿ

author img

By PTI

Published : Mar 10, 2024, 9:23 AM IST

ಡಬ್ಲ್ಯೂಪಿಎಲ್​ನ ಗುಜರಾತ್​ ಜೈಂಟ್ಸ್​ ಮತ್ತು ಮುಂಬೈ ಇಂಡಿಯನ್ಸ್​ ನಡುವಿನ ಪಂದ್ಯದಲ್ಲಿ ರನ್​ ಮಳೆಯೇ ಸುರಿಯಿತು. ಇತ್ತಂಡಗಳು 190 ರನ್​ ಪೇರಿಸಿದವು.

ಮುಂಬೈ ವನಿತೆಯರಿಗೆ 7 ವಿಕೆಟ್​ ಜಯ
ಮುಂಬೈ ವನಿತೆಯರಿಗೆ 7 ವಿಕೆಟ್​ ಜಯ

ನವದೆಹಲಿ: ನಾಯಕಿ ಹರ್ಮನ್​ಪ್ರೀತ್​ ಕೌರ್​ (95) ಅವರ ರೌದ್ರಾವತಾರದ ಬ್ಯಾಟಿಂಗ್​ನಿಂದಾಗಿ ಮಹಿಳಾ ಪ್ರೀಮಿಯರ್​ ಲೀಗ್​ನ (ಡಬ್ಲ್ಯೂಪಿಎಲ್​) ಬಲಿಷ್ಠ ಮತ್ತು ಯಶಸ್ವಿ ತಂಡವಾದ ಮುಂಬೈ ಇಂಡಿಯನ್ಸ್​, ಗುಜರಾತ್​ ಜೈಂಟ್ಸ್​ ವಿರುದ್ಧ 7 ವಿಕೆಟ್​ಗಳ ಅಧಿಕಾರಯುತ ಗೆಲುವು ಸಾಧಿಸಿತು. ಜೊತೆಗೆ ಮೊದಲ ತಂಡವಾಗಿ ಪ್ಲೇಆಫ್​ ಹಂತಕ್ಕೇರಿತು.

ಇಲ್ಲಿನ ಅರುಣ್​ ಜೇಟ್ಲಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯವು ಅಕ್ಷರಶಃ ಮುಂಬೈ ನಾಯಕಿಯ ಬ್ಯಾಟಿಂಗ್​ ಪ್ರದರ್ಶನಕ್ಕೆ ಏರ್ಪಡಿಸಿದ್ದ ವೇದಿಕೆ ಎಂಬಂತಿತ್ತು. ಗುಜರಾತ್​ ವನಿತೆಯರು ನೀಡಿದ 190 ರನ್​ಗಳ ಬೃಹತ್​ ಮೊತ್ತವನ್ನು 1 ಎಸೆತ ಬಾಕಿ ಇರುವಂತೆಯೇ ಮುಂಬೈ ವನಿತೆಯರು ದಾಟಿ ವಿಜಯೋತ್ಸವ ಆಚರಿಸಿದರು. ಕಳೆದುಕೊಂಡಿದ್ದು, 3 ವಿಕೆಟ್​​ ಮಾತ್ರ.

ಭಾಟಿಯಾ- ಕೌರ್​ ಹೋರಾಟ; ಗೆಲುವಿಗೆ ದೊಡ್ಡ ಗುರಿ ಬೆನ್ನಟ್ಟಿದ ಮುಂಬೈ ತಂಡಕ್ಕೆ ಆರಂಭಿಕ ಆಟಗಾರ್ತಿ ಯಾಸ್ಟಿಕ ಭಾಟಿಯಾ ಮತ್ತು ಹೈಲಿ ಮ್ಯಾಥ್ಯೂಸ್​ ಭರ್ಜರಿ ಆರಂಭ ನೀಡಿದರು. ಇಬ್ಬರು ಸೇರು ಮೊದಲ ವಿಕೆಟ್​ಗೆ 50 ರನ್​ ಮಾಡಿದರು. ಮ್ಯಾಥ್ಯೂಸ್​ 18 ರನ್​ ಗಳಿಸಿ ಔಟಾದರು. ಬಳಿಕ ಬಂದ ನಾಟ್​ ಸೀವಿಯರ್​ ಬ್ರಂಟ್​ (2) ಅಲ್ಪಮೊತ್ತಕ್ಕೆ ವಿಕೆಟ್​ ನೀಡಿದರು. ಆಗ ತಂಡದ ಮೊತ್ತ 7.3 ಓವರ್​ಗಳಲ್ಲಿ 57-2 ಆಗಿತ್ತು. ಈ ವೇಳೆ ಮೈದಾನಕ್ಕೆ ಇಳಿದ ಕೌರ್​ ಗುಜರಾತ್​ ಬೌಲರ್​ಗಳ ಮೇಲೆ ದಂಡೆತ್ತಿ ಹೋದರು.

ಇಬ್ಬರೂ ಬಿರುಸಾದ ಬ್ಯಾಟ್​​ ಬೀಸಿದರು. 49 ರನ್​ ಗಳಿಸಿದ್ದಾಗ ಭಾಟಿಯಾ ಔಟಾಗಿ ಅರ್ಧಶತಕದಿಂದ ತಪ್ಪಿಸಿಕೊಂಡರು. ಕೊನೆಯ 5 ಓವರ್​ಗಳಲ್ಲಿ 14 ರ ಸರಾಸರಿಯಲ್ಲಿ 72 ರನ್​ ಅಗತ್ಯವಿದ್ದಾಗ ಬ್ಯಾಟ್​ಗೆ ಬುದ್ಧಿ ಹೇಳಿದ ಕೌರ್​ ಪ್ರತಿ ಎಸೆತದಲ್ಲೂ ರನ್​ ತಂದರು. ಸ್ಪಿನ್ನರ್ ರಾಣಾ ಎಸೆದ 18ನೇ ಓವರ್‌ನಲ್ಲಿ 6, 4, 4, 6 ರ ಕ್ರಮವಾಗಿ ಬಾರಿಸಿ 24 ರನ್‌ ಸಿಡಿಸಿದರು.

ಅಮೆಲಿಯಾ ಕೆರ್ ಜೊತೆಗೂಡಿ ಕೇವಲ 38 ಎಸೆತಗಳಲ್ಲಿ ನಾಲ್ಕನೇ ವಿಕೆಟ್‌ಗೆ 93 ರನ್ ಸೇರಿಸಿದರು. ಇದರಲ್ಲಿ ಕೆರ್​ 12 ರನ್​ ಮಾಡಿದರೆ, 81 ರನ್​ ಹರ್ಮನ್​ಪ್ರೀತ್​ ಗಳಿಸಿದರು. ಕೊನೆಯಲ್ಲಿ ಕೌರ್​ ಔಟಾಗದೇ 95 ರನ್ ಗಳಿಸಿದರು. ಇದು ಅವರ ರೌದ್ರಾವತಾರದ ಬ್ಯಾಟಿಂಗ್​ಗೆ ಸಾಕ್ಷಿಯಾಗಿತ್ತು. ಕೊನೆಯಲ್ಲಿ 19.5 ಓವರ್​ಗಳಲ್ಲಿ 191 ರನ್​ ಗಳಿಸಿದ ಮುಂಬೈ ಭರ್ಜರಿ ಗೆಲುವು ದಾಖಲಿಸಿತು. ಈ ಮೂಲಕ 10 ಅಂಕಗಳೊಂದಿಗೆ ಪಾಯಿಂಟ್​ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿತು. ಆಡಿರುವ 7 ಪಂದ್ಯಗಳಲ್ಲಿ ಕೌರ್​ ಪಡೆ 5 ರಲ್ಲಿ ಗೆದ್ದು 2 ರಲ್ಲಿ ಸೋತಿದೆ.

ಬೆತ್​ ಮೂನಿ- ಹೇಮಲತಾ ಅಬ್ಬರ: ಇದಕ್ಕೂ ಮುನ್ನ ಗುಜರಾತ್​ ಜೈಂಟ್ಸ್​ನ ನಾಯಕಿ ಬೆತ್ ಮೂನಿ ಮತ್ತು ಡಿ ಹೇಮಲತಾ ಅವರು ಅಬ್ಬರಿಸಿ ಅರ್ಧಶತಕ ಬಾರಿಸಿದರು. ಮೂನಿ 35 ಎಸೆತಗಳಲ್ಲಿ 66 ರನ್​ ಮಾಡಿದರು. ಇದರಲ್ಲಿ 8 ಬೌಂಡರಿ, 3 ಸಿಕ್ಸರ್​ಗಳಿದ್ದವು. ಹೇಮಲತಾ 74 ರನ್​ ಮಾಡಿದರು. ಇದಕ್ಕೆ ತೆಗೆದುಕೊಂಡಿದ್ದು 40 ಎಸೆತ. ಇಬ್ಬರೂ ಸೇರಿ ಎರಡನೇ ವಿಕೆಟ್​ಗೆ 121 ರನ್ ಸೇರಿಸಿದರು.

ಇದನ್ನೂ ಓದಿ: ದೀಪ್ತಿ ಶರ್ಮಾ 'ಹ್ಯಾಟ್ರಿಕ್​'​ ಶೋ: ಡೆಲ್ಲಿ ವಿರುದ್ಧ ಯುಪಿ ವನಿತೆಯರಿಗೆ 1 ರನ್​ ರೋಚಕ ಗೆಲುವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.