ETV Bharat / sports

ವಿರಾಟ್​ ಕೊಹ್ಲಿ, ಎಂಎಸ್​ ಧೋನಿ, ರೋಹಿತ್ ಶರ್ಮಾ ಎಷ್ಟು ಸಲ 'ಡಕ್​ ಔಟ್​' ಆಗಿದ್ದಾರೆ ಗೊತ್ತಾ? - duck out in IPL - DUCK OUT IN IPL

ಐಪಿಎಲ್​ನಲ್ಲಿ ಆಟಗಾರರು ಶತಕ ಬಾರಿಸಿದ್ದಕ್ಕಿಂತಲೂ ಡಕ್​ ಔಟ್​ ಆಗಿದ್ದೇ ಹೆಚ್ಚು. ಖ್ಯಾತ ಕ್ರಿಕೆಟಿಗರೂ ಇದರಿಂದ ಹೊರತಾಗಿಲ್ಲ. ಯಾರೆಲ್ಲಾ ಸೊನ್ನೆವೀರರು ಎಂಬ ಮಾಹಿತಿ ಇಲ್ಲಿದೆ.

ಡಕ್​ ಔಟ್
ಡಕ್​ ಔಟ್ (Source: File Photo (ETV Bharat))
author img

By ETV Bharat Karnataka Team

Published : May 9, 2024, 7:42 PM IST

ಹೈದರಾಬಾದ್: ಯಾವುದೇ ಬ್ಯಾಟ್ಸ್​ಮನ್​ ಆದರೂ, ಡಕ್​​ ಔಟ್​ ಮಾತ್ರ ಆಗಬಾರದು ಎಂದು ಕಣಕ್ಕಿಳಿಯುತ್ತಾರೆ. ಸೊನ್ನೆಗೆ ವಿಕೆಟ್​ ನೀಡುವುದು ಅವಮಾನಕರ ಸಂಗತಿ. ದುರಾದೃಷ್ಟವಶಾತ್​ ಎದುರಿಸಿದ ಮೊದಲ ಎಸೆತದಲ್ಲೇ ಔಟ್​​ ಆದರೆ, ನಿಂದನೆಗೂ ಒಳಗಾಗಬೇಕಾಗುತ್ತದೆ.

ಸೊನ್ನೆ ಎನ್ನುವುದು ಸಂಖ್ಯೆಯಲ್ಲಿ ಅತಿ ಮಹತ್ವದ್ದೇ. ಆದರೆ, ಕ್ರಿಕೆಟ್​ನಲ್ಲಿ ಅದರ ಮುಂದೆ ಅಂಕಿಗಳಿರುವುದು ಅತಿ ಮುಖ್ಯ. ಡಕ್​ ಔಟ್​ ಆಗಿ ಪೆವಿಲಿಯನ್​ಗೆ ಬ್ಯಾಟರ್​ ನಡೆದರೆ, ಹಂಗಿಸುವವರು ನೂರಾರು. ಶತಾಯಗತಾಯ ರನ್​ ಕಲೆಹಾಕಲು ದಾಂಡಿಗರು ಪ್ರಯತ್ನಿಸುತ್ತಿರುತ್ತಾರೆ.

ಆದಾಗ್ಯೂ, ಅದೃಷ್ಟ ಕೆಟ್ಟು ಸೊನ್ನೆಗೆ ಔಟಾದವರ ಪಟ್ಟಿ ಹನುಮನ ಬಾಲದಂತೆ ಉದ್ದಕ್ಕಿದೆ. ಅದರಲ್ಲೂ ವಿಶ್ವಮಾನ್ಯ ಕ್ರಿಕೆಟಿಗರನ್ನೂ ಈ 'ಸೊನ್ನೆಯ ಭೂತ' ಬಿಟ್ಟಿಲ್ಲ. ಹೊಡಿಬಡಿ ಆಟವಾದ ಟಿ20ಯಲ್ಲಿ ಇದರ ಕರಾಮತ್ತು ಜೋರಾಗಿಯೇ ಇದೆ. ರನ್​ ಗಳಿಸುವ ಒತ್ತಡದಲ್ಲಿ ಎದುರಿಸಿದ ಮೊದಲ ಎಸೆತವನ್ನೇ ಸಿಕ್ಸರ್​ ಬಾರಿಸಲು ಆಟಗಾರರು ಮುಂದಾಗುತ್ತಾರೆ. ಈ ವೇಳೆ ವಿಕೆಟ್ ನೀಡುವ ಸಂಭವ ಹೆಚ್ಚಿರುತ್ತದೆ.

ಐಪಿಎಲ್​ನಲ್ಲಿ ಟಾಪ್​ನಲ್ಲಿರುವ ಸೊನ್ನೆವೀರರು: ಐಪಿಎಲ್​ ಹಂಗಾಮದಲ್ಲಿ ಸೊನ್ನೆಗೆ ಔಟಾದವರೂ ಇದ್ದಾರೆ. ನಿಮಗೆ ಗೊತ್ತಾ, ವಿಶ್ವದ ಶ್ರೀಮಂತ ಟೂರ್ನಿಯಲ್ಲಿ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್​​ಮನ್​ ಗ್ಲೆನ್​ ಮ್ಯಾಕ್ಸ್​ವೆಲ್​ ಸೊನ್ನೆ ಸುತ್ತಿದವರ ಪೈಕಿ ಮೊದಲ ಸ್ಥಾನದಲ್ಲಿದ್ದಾರೆ. ಅಚ್ಚರಿಯಾದ್ರೂ, ಹೌದು. ಡ್ಯಾಶಿಂಗ್​ ಆಟಗಾರ ಮೊದಲ ಎಸೆತವನ್ನೇ ಕೆಣಕಲು ಹೋಗಿ ಈವರೆಗೆ 17 ಬಾರಿ 'ಡಕ್​' ಔಟ್​ ಆಗಿದ್ದಾರೆ ಎಂಬುದು ಸೋಜಿಗ.

ಇವರ ಜೊತೆಗೆ ಆರ್​ಸಿಬಿಯ ಫಿನಿಶರ್​ ಆಗಿರುವ ದಿನೇಶ್​ ಕಾರ್ತಿಕ್​, ಭಾರತ ತಂಡದ ನಾಯಕ ರೋಹಿತ್​ ಶರ್ಮಾ ಕೂಡ 17 ಬಾರಿ ಖಾತೆ ತೆರೆಯದೇ ವಿಕೆಟ್​ ನೀಡಿದ ಕುಖ್ಯಾತಿಗೆ ಭಾಜನರಾಗಿದ್ದಾರೆ.

ಸ್ಪಿನ್ನರ್ ಪಿಯೂಷ್​ ಚಾವ್ಲಾ 16, ರಶೀದ್​ ಖಾನ್​, ಮನ್​ದೀಪ್​ ಸಿಂಗ್​, ಸುನಿಲ್​ ನರೈನ್​ ತಲಾ 15, ಮನೀಶ್​ ಪಾಂಡೆ, ಅಂಬಟಿ ರಾಯುಡು 14 ಬಾರಿ ಸೊನ್ನೆ ಸುತ್ತಿದ್ದಾರೆ. ಹೀಗೆ ಈ ಪಟ್ಟಿ ದೊಡ್ಡದಾಗಿ ಬೆಳೆಯುತ್ತಲೇ ಇರುತ್ತದೆ.

ಈಚೆಗಿನ ಪಂದ್ಯದಲ್ಲಿ ಸಿಎಸ್​ಕೆ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಐಪಿಎಲ್​ನಲ್ಲಿ 6ನೇ ಬಾರಿಗೆ '0'ಗೆ ವಿಕೆಟ್​ ನೀಡಿದರು. ಪ್ರಖ್ಯಾತ ಫಿನಿಶರ್​ ಎಂದೆನಿಸಿಕೊಂಡರೂ ಅವರನ್ನೂ ಸೊನ್ನೆ ಸಾಡೇಸಾತ್​ ಬಿಟ್ಟಿಲ್ಲ.

ವಿರಾಟ್​ 'ಡಕ್ ಔಟ್​'​ ಬಗ್ಗೆ ಗೊತ್ತಾ?: ಆಧುನಿಕ ಕ್ರಿಕೆಟ್​ನ 'ಕಿಂಗ್​', ಬ್ಯ್ರಾಂಡ್​ ಅಂಬಾಸಿಡರ್​ ಆಗಿರುವ ರನ್​ ಮಶಿನ್​ ವಿರಾಟ್​ ಕೊಹ್ಲಿ ಕ್ರಿಕೆಟ್​ನಲ್ಲಿ ರನ್​ ಗುಡ್ಡೆಯೇ ಪೇರಿಸಿದ್ದಾರೆ. ಆದರೆ, ಐಪಿಎಲ್​ನಲ್ಲಿ ಅತಿಹೆಚ್ಚು ರನ್​ ಗಳಿಸಿದ ಆಟಗಾರನೂ ಆಗಿರುವ ಚೇಸ್​ ಮಾಸ್ಟರ್​ 10 ಬಾರಿ ಸೊನ್ನೆಗೆ ವಿಕೆಟ್​ ನೀಡಿದ್ದಾರೆ.

ಮಾಜಿ ಆಟಗಾರ ಎಬಿ ಡಿವಿಲಿಯರ್ಸ್​ 10, ಸೂರ್ಯಕುಮಾರ್​ ಯಾದವ್​ 9, ಯೂನಿವರ್ಸಲ್​ ಬಾಸ್​ ಕ್ರಿಸ್​ಗೇಲ್​ 8, ರವೀಂದ್ರ ಜಡೇಜಾ 8, ಮಿಸ್ಟರ್​ ಐಪಿಎಲ್ ಸುರೇಶ್​ ರೈನಾ 8, ಮಾಸ್ಟರ್​ ಬ್ಲಾಸ್ಟರ್​ ವೀರೇಂದ್ರ ಸೆಹ್ವಾಗ್​ 7, ಹಾರ್ದಿಕ್​ ಪಾಂಡ್ಯ 6 ಬಾರಿ ಡಕ್​ ಔಟ್​ ಆಗಿದ್ದಾರೆ.

ಇದನ್ನೂ ಓದಿ: DUCK OUT​ ಎಂದರೇನು? ಕ್ರಿಕೆಟ್​ನಲ್ಲಿ ಎಷ್ಟು ಡಕ್​ ಔಟ್​ಗಳಿವೆ ನಿಮಗೆ ಗೊತ್ತಾ? - duck out in cricket

ETV Bharat Logo

Copyright © 2025 Ushodaya Enterprises Pvt. Ltd., All Rights Reserved.